ಗುರುವಾರ, ಏಪ್ರಿಲ್ 25, 2019

मत्कल्पनायामियमेव भाति


अद्यत्वे नैके जनाः facebook द्वारा एव स्वकीयां प्रतिभां प्रकाशयन्ति। कतिचन अमूल्याः लेखाः facebook पुटेष्वपि समुपलभ्यन्ते। केचन hashtag(#) निर्माय समानं विषयं विभिन्नदृष्टिकोणेषु प्रकटयन्ति। facebook पुटे कन्नडभाषया #ಕಲ್ಪನೆಯಲಿ_ಕೂಸು (कल्पनेयलि_कूसु) इत्यत्र अनेकाः रमणीयाः कल्पनाः मित्रेण सुनीलेन प्रकाशिताः। तदाधारेण इमानि पद्यानि रचितानि। एतानि पद्यानि प्राचीप्रज्ञापत्रिकायाः 2019 तमवर्षस्य एप्रिल् मासस्य काव्यधारायां प्रकाशितानि। (एतानि पद्यानि अश्लीलानि इति कस्याश्चित् पत्रिकायाः सम्पादकमण्डल्याः अभिप्रायः आसीत्।)

https://sites.google.com/site/praachiprajnaa/kavyadhara

सर्वत्रापि विशिष्टकल्पनपरः शिष्टःसुनीलः कवि
स्त्वन्तर्जालपुटेषु वर्णयति यां तां मानसीं सुन्दरीम्।
भाषायामहमेष सूर्य इह तान् भावान् ब्रुवे साम्प्रतं
भारत्या बुधलोकवन्दनपरः वृत्तेन बद्ध्वापि च॥

सुनीलभावनाः क्वचित्तथैव संस्कृतीकृताः
क्वचित्तु सङ्कुचीकृताश्च विस्तृताश्च काश्चन।
मयान्यथाकृताः क्वचित्तथापि सभ्यरञ्जने
सुनीलकल्पनैव मूलहेतुरस्ति, तद्दृढम् ॥


ಅದ್ಯಾಕೋ ಕಣ್ಣು ಮುಚ್ಚಿ ಮುಚ್ಚಿ ಬರುತಿದೆ ನಿನ್ನದೇ ಕನಸು ಕಾಣುವ ತವಕವಿರಬಹುದು.
निमीलनेच्छा खलु पक्ष्मयोर्मे
सञ्जायमाना दयितावियोगे।
मन्ये हताशायुतमक्षियुग्मं
स्वप्ने प्रियादर्शनमिच्छतीति॥१॥

ಅನುಮಾನವಿದೆ ಪೋಲೀಸರ ಮೇಲೆ ಕಣ್ಣಲ್ಲೇ ಮಾರಕಾಸ್ತ್ರಗಳಿಟ್ಟಿರುವ ನಿನ್ನ ಬಂಧಿಸದಿರುವ ಬಗ್ಗೆ.
तैस्सुन्दरीबन्धनकर्म कस्मा-
-दारक्षकैर्न क्रियते विचित्रम्।
या मारकास्त्राणि निधाय नेत्रे
मुष्णाति यूनां हृदयं सदापि॥२॥

'ನೀನು ಹುಣ್ಣಿಮೆಯ ಚಂದ್ರನಂತೆ' ಅನ್ನೋಕೂ ಭಯ ಸರಿ ಹೋಗು ತಿಂಗಳಿಗೊಮ್ಮೆ ಸಿಗ್ತೀನಿ ಅಂದುಬಿಟ್ಟಾಳೋ... ಅಂತ.
राकासुधांशोरिव कान्तियुक्तं
मुखं विभातीति वदामि भीत्या।
वदेत्प्रिया केवलपौर्णमास्या-
-मास्यं मदीयं प्रिय दर्शयामि॥३॥

ಇತ್ತೀಚೆಗೆ ಸಂಜೆ ಗಾಳಿಯೂ ಬೀಸುತ್ತಿಲ್ಲ ಬಹುಶಃ ನಿನ್ನ ನೆನಪುಗಳ ಭಾರ ಜಾಸ್ತಿಯಾಗಿರಬೇಕು.
सदागतिस्ते विरहे प्रिये स
सायन्तनो गन्धवहो न वाति।
त्वां चिन्तयन् भारयुतोऽस्ति भावै-
-र्मच्चित्तवत्स्तब्ध इहैव तूष्णीम्॥४॥

ಅರಳುತಿರುವ ಮಲ್ಲಿಗೆ ಆಕೆಯ ಮುಗುಳುನಗೆ
शनैश्शनैरोष्ठपुटात्स्फुटन् हि
सुगन्धयुक्तो सितवर्णभूषः।
फुल्लच्छिरीषेण समः प्रियाया
हासो मुखे राजति सर्वकाले॥५॥

ಯಾಕಾದರೂ ಹೇಳಿದೆನೊ "ನೀನೊಂದು ಸುಂದರ ಮೌನ" ಅಂತ ಈಗ ಮಾತೇ ಇಲ್ಲ....
त्वं चारुमौनं भवसीत्यवोचं
तेनैव दुःखं मम जायमानम्।
ब्रूषे न किञ्चिद्बहुभाषिणी धि-
-ग्वाक्यं मदीयं तव मौनहेतुम्॥६॥

ನಿನ್ನ ನಡಿಗೆ ನೋಡಿಯೇ ಹೇಳಬಹುದು ಇದು 'Moon Walk' ಎಂದು
वृत्ते चलित्वा विधुतुल्यरूपे
जगाद मैखल् मम चन्द्रचर्या।
चन्द्रानने ते चलनेन चन्द्र-
-चर्येति शब्दः सफलोऽस्ति लोके॥७॥

ಅಮಾವಾಸ್ಯೆಯಂದು ನೀರಲ್ಲಿ ಮುಖ ನೋಡಿದರೂ ಚಂದ್ರಬಿಂಬವೇ ಕಾಣುವುದು
अन्ये जनाः केवलपौर्णमास्यां
पश्यन्ति खे पूर्णविधुं प्रिये तम्।
आदर्शमात्रं स्वकरे गृहीत्वा
द्रष्टुं क्षमा दर्शनिशास्वपि त्वम्॥८॥

ಅಂದ ನೋಡಿ ಕುಣಿಯುವುದಂತೆ ನವಿಲು ನಿನ್ನ ನೋಡಿ ಕುಣಿದಾಗ ನಿಜವೆನಿಸಿತು
दृष्ट्वा प्रकृत्या रमणीयरूपं
बर्ही स नृत्यं प्रकरोति यद्वद्।
तद्वत्प्रियारूपमवेक्ष्य चारु
नृत्याम्यहं हृष्टमनाः सकेकम्॥९॥

ಮತ್ತೆ ಮತ್ತೆ ಕಾಡುವುದಕ್ಕೆ ಆಕೆಗೂ ಭಯವಿದೆ ಗುಂಗಿನಲ್ಲೇ ಈತ ಕವಿಯಾದರೆಂದು!!
मुहुर्मुहुर्भावनिबन्धनेन
मत्पीडनात्सापि बिभेति बाला।
दिवानिशं मे स्मरणेन कान्तः
कविः स भूयादिति शङ्कयैव॥१०॥

ತಂಗಾಳಿಗೇಕೆ ಮಾತುಕಲಿಸಿದೆ ನೋಡೀಗ ನಿನ್ನ ಬಗ್ಗೆಯೇ ಕೇಳುತಿದೆ
अपाठयस्त्वं मलयानिलाञ्च
कुतः प्रिये भावविशिष्टभाषाम्।
ते कर्णमूलं मम विप्रयोग
आगत्य पृच्छन्ति तवैव वार्ताम्॥११॥

"ನೀ ಚಂದಾನೆ". ಕೊನೆಯಲ್ಲಿ ಪ್ರಶ್ನಾರ್ಥಕವಲ್ಲ ಪೂರ್ಣವಿರಾಮ.
न सुन्दरी त्वं किमिति प्रियेदं
वाक्यं समाकर्ण्य न कुप्य यस्माद्।
त्वं सुन्दरी वर्तस एव नून-
-मित्यर्थमित्थं दृढयामि काक्वा॥१२॥

ಆ ಮಗುವಿಗೆ ಚಂದಿರನ ತೋರಿಯೇ ಉಣಿಸಬೇಕಂತೆ ಹೋಗೊಮ್ಮೆ ಎದುರು ನಿಲ್ಲು
भुञ्जे न किञ्चिच्छशिदर्शनेन
विनेति बालो बहु रोदितीति।
चन्द्रानने गच्छ पुरः स बालो
भुञ्जीत नूनं तव दर्शनेन॥१३॥

ಚಂದಿರನ ತಂದುಕೊಡು ಎಂದರೆ ಕನ್ನಡಿಯನೇಕೆ ತಂದೆ ಎನ್ನುತ್ತಿದ್ದಾಳೆ.
चन्द्रानने त्वं शशिवीक्षणेच्छां
न्यवेदयत्ते मुकुरे प्रदत्ते।
किं दर्पणेनेति कुतो ब्रवीषि
तस्माद्विनास्यं कथमीक्षसे त्वम्॥१४॥

ನೋಡುತ್ತ ಕುಳಿತರೆ ಕಣ್ಣುಗಳಿಗೇ ಸಕ್ಕರೆ ಕಾಯಿಲೆ ಬರಬೇಕು
रोगः प्रसिद्धो रुधिरप्रवाहे
व्यत्यास एवं मधुमेहनामा।
लावण्यमाधुर्यगुणैस्त्वदीयै-
-र्दृष्टेः प्रिये मे भवतो गदौ द्वौ॥१५॥

ಅಮಾವಾಸ್ಯೆಯಿಂದು ರಾತ್ರಿ ಹೊರಬರಬೇಡ ಚಂದಿರ ಧರೆಗಿಳಿದನೆಂದು ತಾರೆಗಳು ಹೊತ್ತೊಯ್ಯಬಹುದು
कुहूनिशि त्वं न बहिर्भ्रम, त्वां
तारागणा वीक्ष्य, निजाधिपत्वम्।
त्वयि प्रकल्प्यैव नभो नयेयु-
-श्चन्द्राननेऽभ्यन्तर एव तिष्ठ॥१६॥

ಅಬ್ಬಾ! ಹಗಲಲ್ಲೇನಿದು ಮಿಂಚು ಓಹ್ ! ನಿನ್ನ ಕುಡಿನೋಟವಷ್ಟೇ
सत्यातपेऽसौ कथमद्य दृष्टा
सौदामनी कान्तियुता धरण्याम्।
प्रिया मदीया समुपागता स्या-
-द्यस्याः कटाक्षाः किल भान्ति रम्याः॥१७॥

ನೋಡುತ್ತ ಕುಳಿತಿದ್ದೆ ನಿನ್ನ ಸಪ್ಪೆ ಚಹಾ ಕುಡಿದಿದ್ದೂ ಗೊತ್ತಾಗಿಲ್ಲವಲ್ಲ
मुखस्य नेत्रस्य च दन्तपङ्के-
-र्लावण्यराशेस्तव कर्मणां च।
माधुर्यपानेन न वेद्मि बाले
चायं विना शर्करयैव पीतम्॥१८॥

ಹೃದಯ ನೋವೆಂದು ಎಕ್ಸರೇ ಮಾಡಿಸಿದರೆ ನಿನ್ನ ಪೋಟೋ ಕೊಟ್ಟರಲ್ಲ
वैद्यो मदीयं हृदयं विलोक्य
यन्त्रैर्विशिष्टैः किरणैश्च वक्ति।
त्वमेव दृष्टा, परितश्च रक्तं
त्वां, नैव किञ्चिन्मम दृष्टिगम्यम्॥१९॥

ಹಿಂಡಿ ಬಿಡುತ್ತಿದ್ದೆ ಆಕೆಯ ಕೆನ್ನೆಯನು ಕರಗಿ ತುಪ್ಪವಾದೀತೆಂದು ಸುಮ್ಮನಾದೆ
रम्यौ कपोलौ नवनीततुल्यौ
निष्पीडयेयं तव, मे कराभ्याम्।
हैयङ्गवीनत्वमवाप्नुयातां
तस्मादिदानीं न तथा करोमि॥२०॥

ನಿನ್ನ ಕುಡಿನೋಟಕ್ಕಿದೆ ಆ ಶಕ್ತಿ ಹತ್ತೂರಿಗೆ ಕರೆಂಟ್ ಹಂಚುವಷ್ಟು
मूर्खोऽबलां त्वां वदतीह बाले
प्रत्यङ्गमप्यस्ति बलं त्वदीये।
कटाक्षमात्रेण दशाधिकानि
पुराणि भायुर्निशि सत्यमेतद्॥२१॥

ಹಾಲುಕ್ಕುವುದ ನೋಡಿದವರು ಬಳಿಬರುವಂತೆ ನೀ ನಕ್ಕಾಗಲೂ ನಾ ಬಳಿ ಬಂದಿದ್ದಷ್ಟೇ
वह्नेः प्रभावात्सितमुत्क्वथद्य-
-द्दृष्ट्वा पयस्तद्दिशि तूत्पतन्ति।
जनास्तथाहं मदनाग्निहेतो-
-स्ते हासमालोक्य समीपगामी॥२२॥

ಚೌತಿ ಚಂದ್ರನ ನೋಡಬಾರದು ಎಂದಾಗಲೇ ಅರಿವಾದದ್ದು ನಿನ್ನ ನೋಡುವುದು ಅಪರಾಧವೆಂದು
गणेशपर्वाह्नि मुखं न दृष्टं
मयेति ते त्वं सखि नात्र कुप्य।
तस्मिन् दिने शीतकरेक्षणं हि
दोषाय भूयादिति रूढिरस्ति॥२३॥

ನಿನ್ನ ಆ ಕಣ್ಣೋಟಗಳೇ ನನ್ನುಸಿರಿಗೆ ದಂಗೆ ಏಳಲು ಕರೆಕೊಟ್ಟಿದ್ದು
न वाय्वभावो न ममास्ति रोगो
न धूमबाधो न च योगशीलः।
स्मरेषवस्ते निशिताः कटाक्षाः
श्वासप्रमाणं परिवर्तयन्ति॥२४॥

ಆಹಾ! ಹಾರುತಿರುವ ನಿನ್ನ ಮುಂಗುರುಳು ಚಿತ್ರಾನ್ನದಲಿ ಸಿಗುವುದು ಯಾವಾಗ ಹೇಳು
ये कुन्तलास्ते परिपीडयन्ति
चित्तं मदीयं चलनैः सदापि।
कदा पतिष्यन्ति मदीयभोज्ये
पक्वे त्वयेत्युत्सुकमस्ति चेतः॥२५॥

ನಿನ್ನ ವರ್ಣಿಸಲು ಕಳುಹಿದ ವರ್ಣಲೇಖನೀ (ಕಾಮನಬಿಲ್ಲು)
यस्या प्रकृत्या रमणीयमङ्गं
तस्या प्रियायाः खलु वर्णनार्थम्।
दत्ता प्रकृत्या रमणीयवर्णाः
खे शक्रचापच्छविकैतवेन॥२६॥

ನಿನ್ನ ನಗುವಿನ ಚಿತ್ರಗಳನ್ನೆಲ್ಲ ಜೋಡಿಸಿಟ್ಟಿದ್ದೆ ನೋಡಿದವರೆಲ್ಲ 'ಮುತ್ತಿನಹಾರ' ಎಂದರಲ್ಲ
प्रियासुहासस्य सुचित्रराशे-
-श्चित्राणि पङ्क्तौ समयोजयं, ताम्।
पङ्क्तिं विलोक्य ब्रुवते जना मां
मनोहरो मौक्तिकहार एषः॥२७॥

ಕೆನ್ನೆಯ ಮೇಲೆ ಮುಂಗುರುಳು ಕೆಂಬಾನಿನಲಿ ಹಕ್ಕಿಗಳು ಹಾರಿದಂತೆ
यथा प्रदोषेऽसितवर्णयुक्ता
आकाशमार्गे विहगाश्चरन्ति।
तथा प्रियाया वदने सकोपे
मनोहरा भान्ति चलालकास्ते॥२८॥

ಗುಳಿಕೆನ್ನೆ ನೋಡಿದಾಗಲೇ ಅನುಮಾನವಿತ್ತು ಚಂದಿರನ ಮೇಲೂ ಕುಳಿ ಇರಬಹುದೆಂದು
तवास्यजं कूपकमीक्ष्य बाले
यद्धासकाले रुचिरं विभाति।
चन्द्रेऽपि गर्तो भवतीति तत्त्वं
विज्ञानिनो जज्ञुरिहेति मन्ये॥२९॥

ಚಂದಿರನ ಬಳಿ ಸುಳಿಯುವ ಆ ಚಿಕ್ಕ ಚಿಕ್ಕ ಮೋಡಗಳು ನಿನ್ನ ಮುಂಗುರುಳಿನಂತೆ...
ये कृष्णवर्णा लघुगात्रयुक्ता-
-श्चन्द्रं स्पृशन्तो विलसन्ति मेघाः।
तद्वत्प्रियाया वदनं स्पृशन्तो
मुहुर्मुहुश्चार्वलका विभान्ति॥३०॥

ವಸಂತಬರುವುದಂತೆ, ಕೋಗಿಲೆ ದನಿಯಮರೆತಿದೆಯಂತೆ ಮಾತನಾಡಿಬಿಡು,ಕಲಿಸಿಬಿಡು
प्राप्ते वसन्ते किल कूजनीयं
पिकेन बाले शिशिरोऽस्ति सद्यः।
त्वं पाठयाशु स्वरमाधुरीं तं
सार्धं मया भाषणकैतवेन॥३१॥

ಕೆನ್ನೆ ಸವರುವ ಕೈ ಅನೇಕ ಇರಬಹುದು ಮುತ್ತಿಕ್ಕುವ ತುಟಿ ನಿನ್ನದೇ ಆಗಿರಲಿ
गण्डौ मदीयौ बहुधा स्पृशन्तु
तुष्यन्तु तेनैव हि ताः कृतार्थाः।
त्वं चुम्बनाख्येऽधिकृतासि कार्ये
स्वप्नेऽपि नान्या मम जीवनेऽस्ति॥३२॥

ಹೊರಗೆಲ್ಲ ಮಳೆಬಂದು ಭೂಮಿ ತಂಪಾದರೂ ಮನೆಯೊಳಗಿನ ಗಿಡಕ್ಕೆ ನೀರು ಹಾಕಬೇಕು ಹೊರಗೆಲ್ಲ ಹುಡುಗಿಯರು ಕಂಡು ಕಣ್ತಂಪಾದರೂ ಮನಸಿಗೆ ಮಾತ್ರ ನೀನೇ ಬೇಕು
वृष्टेऽपि देवेऽधिगृहं विराज-
-त्सस्यं जलं वाञ्छति ते कराभ्याम्।
तथा बहिः स्यू रमणीयनार्य-
-स्त्वां वीक्ष्य तृप्ये किमु ताभिरस्ति॥३३॥

ಹೊರಗೆಲ್ಲೂ ಸುಳಿಯಬೇಡ ನೀನು ಹೂವನ್ನರಸಿ ಜೇನುಗಳು ಬಂದಿವೆಯಂತೆ
गृहाद्बहिस्त्वं भ्रमणं न कुर्याः
पुष्पस्पृहास्ते मधुपा अटन्ति।
अब्जानने त्वां यदि लोकयन्ते
गृह्णन्ति नूनं मुखमेव तेऽद्य॥३४॥

ನೀನು ಮೌನವಾಗಿದ್ದನ್ನ ನೋಡಿಯೇ 'ಮೌನ ಬಂಗಾರ' ಎಂದಿರಬೇಕು
सम्भाषिता सा बहुभिः प्रकारैः
तथापि मौनं न जहाति बाला।
मौने स्थितां वीक्ष्य सखीं मदीयां
मौनं सुवर्णेन समं वदन्ति॥३५॥

ಹೃದಯದಲ್ಲೊಂದು ಇಂಗುಗುಂಡಿ ತೋಡಬೇಕು ನಿನ್ನದೇ ನೆನಪುಗಳ ಇಂಗಿಸಿಕೊಳ್ಳಲು
सदापि बाले हृदये मदीये
तवैव चिन्ता भवतीति हेतोः।
संरक्षितुं ते स्मरणं प्रगाढं
गर्तो मयैकः खननीय एव॥ ३६॥

ನಿನ್ನತ್ತ ಸಾಗುತಿಹ ಸಾಲು ಇರುವೆಗಳ ಕೇಳಿದರೆ ಸಿಹಿಯಿದ್ದ ಕಡೆ ಅವವುಗಳ ಪಯಣವೆಂದವು
कुतो प्रयान्तीति मयाद्य पृष्टाः
पिपीलिकास्त्वद्दिशि सम्प्रयान्त्यः।
त्वां दर्शयित्वा प्रवदन्ति बाले
तत्रास्ति माधुर्यमतो व्रजामः॥३७॥

ಆಗಾಗ ಅರಿಶಿನವ ಹಚ್ಚುತ್ತಲಿರು ಸಿಹಿಯಾದ ಕೆನ್ನೆಗೆ ಇರುವೆಗಳು ದಾಳಿ ಮಾಡಬಹುದು
कपोलभागेषु सदा हरिद्रा
संलेपनीया निजरक्षणाय।
पिपीलिकास्तेऽधरमाक्रमेयु-
-र्माधुर्यलोभाद्ध्रुवमेव कान्ते॥३८॥

ನಿನ್ನ ಕಣ್ಣುಗಳಿಗೂ ಆಯುಧ ಪೂಜೆ ಮಾಡಿಸಬೇಕು
                                                कार्यं नवम्यां नवरात्रकाले
                                                कटाक्षयोरायुधपूजनं ते।
                                                पूजासुवस्तू  तव देहजाते
                                                चोष्ठप्रसूनं रदनालिहारः॥३९॥

ಚಳಿಗೆ ಕಂಬಳಿ ಬಿಡಬೇಕಿತ್ತು, ನಿನ್ನದೇ ಸಹಕಾರ ಬೇಕಿತ್ತು
शैत्येऽप्यहं कम्बलहानमीहे
परं न शक्तः शयितुं रजन्याम्।
सामीप्यहेतोस्सखि ते सुखी स्यां
कुरु कृपां त्वं मयि शीतलार्ते॥४०॥

ಮಂಗಳವಾರ, ಏಪ್ರಿಲ್ 16, 2019

ಓದುವುದು ಒಂದು, ಮಾಡುವುದು ಇನ್ನೊಂದು

ಇಂದಿನ ಅನೇಕ ಯುವಜನರ ಸಮಸ್ಯೆಯೇ ಇದು. ಯಾವುದೋ ಒಂದು ವಿಷಯದಲ್ಲಿ ಅನೇಕ ವರ್ಷಗಳ ಕಾಲ ಮಣ್ಣು ಹೊತ್ತು ಪದವಿಯನ್ನು ಪಡೆದಿರುತ್ತಾರೆ. ಆದರೆ  ಓದಿದ ವಿಷಯ ಉತ್ತಮ ಕೆಲಸಕ್ಕೆ ಪೂರಕವಾಗಿರುವುದಿಲ್ಲ. ಹೊಟ್ಟೆಪಾಡಿಗಾಗಿ ಯಾವುದಾದರೊಂದು ದಾರಿಯನ್ನು ಹಿಡಿದು ನಡೆಯುವುದು ಅನಿವಾರ್ಯವಾಗುತ್ತದೆ. ಆದ್ದರಿಂದಲೇ ಅನೇಕರಿಗೆ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿಯಿಲ್ಲ. ಅಧ್ಯಯನ ನಡೆಸಿದ್ದು ಜ್ಞಾನಕ್ಕೋಸ್ಕರವಾಗಿಯೇ ಹೊರತು ಉದ್ಯೋಗ ಪಡೆಯುವುದಕ್ಕಲ್ಲ. ಓದಿಗೆ ಆಯ್ಕೆಮಾಡಿಕೊಂಡ ವಿಷಯದಲ್ಲಿ ಒಂದಷ್ಟು ಜ್ಞಾನಸಂಪಾದನೆ ನಡೆಸಿದೆ. ದೇವರ ದಯೆಯಿಂದ ಯಾವುದೋ ಒಂದು ಉದ್ಯೋಗ ದೊರಕಿದೆ. ಸಮಾಜದಲ್ಲಿ ಗೌರವಯುತವಾಗಿ ಬದುಕಲು ತೊಂದರೆಯಂತೂ ಇಲ್ಲ ಮುಂತಾದ ಉನ್ನತ ಚಿಂತನೆಗಳಿಂದ ಸಮಾಧಾನಪಟ್ಟುಕೊಳ್ಳುವುದು ಅನಿವಾರ್ಯವಾಗಿದೆ.

ಇಂದು ಬೆಳಗ್ಗೆ ನಡೆದ ಘಟನೆಯೊಂದು ಈ ಎಲ್ಲಾ ವಿಷಯಗಳ ಮಂಥನವನ್ನು ನಡೆಸುವಂತೆ ಮಾಡಿತು. ಮುಂಜಾನೆ ಜೈಮಿನಿಭಾರತದ ಪುಟಗಳನ್ನು ತಿರುವುತ್ತಿದ್ದೆ. ಅದರಲ್ಲಿ ಶ್ರೀಕೃಷ್ಣನ ಊಟದ ಬಗೆಗಿನ ಪದ್ಯ ಓದುತ್ತಿದ್ದಾಗ ಬಾಯಲ್ಲಿ ನೀರೂರುತ್ತಿತ್ತು. ಏಕೆಂದರೆ ಅನೇಕ ಭಕ್ಷ್ಯಭೋಜ್ಯಗಳ ಉಲ್ಲೇಖ ಆ ಪದ್ಯದಲ್ಲಿತ್ತು.

ಎಸೆವ ಪೊಂಬರಿವಾಣ ಮಿಸುನಿವಟ್ಟಲ್ಗಳೊಳ್
ಮಿಸುಪ ಶಾಲ್ಯೋದನಂ ಸೂಪ ಘೃತ ಭಕ್ಷ್ಯ ಪಾ
ಯಸ ಪರಡಿ ಮಧು ಶರ್ಕರಾಮಿಷ ಪಳಿದ್ಯ ಸೀಕರಣೆ ಶಾಕ ತನಿವಣ್ಗಳ
ರಸ ರಸಾಯನ ಸಾರ್ಗಳುಪ್ಪುಗಾಯ್ ಬಾಳಕಂ
ಕೃಸರಿ ಕಚ್ಚಡಿ ಪಾಲ್ಮೊಸರ್ಗಳಿವು ಬಗೆಗೊಳಿಸಿ  
ಪೊಸತೆನಿಸಿರಲ್ ಸವಿದನಚ್ಚ್ಯುತಂ ದೇವಕಿಯಶೋದೆಯರ್ ತಂದಿಕ್ಕಲು

ಈ ಪದ್ಯವನ್ನು ಓದಿದಾಗ ಕುವೆಂಪುರವರ ರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಇಂತಹ ಬಗೆಬಗೆಯ ಭಕ್ಷ್ಯಭೋಜ್ಯಗಳ ಹೆಸರಿರುವುದು ನೆನಪಾಯಿತು. ರಾಮಾಯಣದರ್ಶನವನ್ನು ತೆಗೆದು ಓದಿದರೆ ಅಲ್ಲಿಯೂ ಬಾಯಿನೀರೂರಿಸುವ ಭಕ್ಷ್ಯಗಳ ಪಟ್ಟಿ ಕಾಣುತ್ತಿತ್ತು.

ನಳನಳಿಪ ಸುಳಿದಳಿರ ಕುಡಿವಾಳೆಯಂ ಪಾಸಿ ;
ಗೀಕುಚಾಪೆಯ ಮಣೆಗಳನು ಕುಳಿತುಕೊಳಲಿಕ್ಕಿ ;
ಪಸುರ್ದೊನ್ನೆಗಳಲಿ ತಿಳಿನೀರ್ಗಳಂ, ಸಸಿಯಡಕೆ
ಹೊಂಬಾಳೆಗಳಲಿ ಕೆನೆವಾಲ್ಗಳಂ ಜೇನ್ತುಪ್ಪಮಂ
ತಂದಿಟ್ಟು ; ನೂಲೆಗೆಣಸಂ, ಬಾಳೆವಣ್ಗಳಂ,
ಕಂದಮೂಲಂಗಳಂ, ಹಣ್ಣುಹಂಪಲ್ಗಳಂ,
ಸೌತೆ ಪಚ್ಚಡಿಗಳಂ, ಮಣಿಹೆಂಬೆಯಂ, ಮತ್ತೆ
ಹಚ್ಚನಕ್ಕಿಯ ಬೆಚ್ಚನನ್ನಮಂ ಮೊಸರುಮಂ
ಬೆಲ್ಲಮಂ ಬೆಣ್ಣೆಯಂ ಬಡಿಸಿ, ಸವಿನುಡಿ ನುಡಿಸಿ,
ಮುಗುಳುನಗುತೆಂದಳಿಂತು

ಕುಮಾರವ್ಯಾಸ ಭಾರತದಲ್ಲಿಯೂ ವಿರಾಟನ ಅಡುಗೆ ಮನೆಯ ವರ್ಣನೆಯೂ ಇದೇ ರೀತಿಯದ್ದಾಗಿದೆ ಎಂದು ನೆನಪಾಯಿತು.

ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ಲಲಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ

ಹೀಗೆ ಕುಮಾರವ್ಯಾಸನು ವರ್ಣಿಸಿದ ವಿರಾಟನ ಅಡುಗೆಮನೆಯನ್ನು ಕಂಡಾಗ ನನ್ನ ಅಡುಗೆ ಮನೆಯ ನೆನಪಾಯಿತು. ವಿವಿಧ ತಿಂಡಿಗಳ ಹೆಸರುಗಳನ್ನು ಕೇಳಿದ್ದರಿಂದ ಹೊಟ್ಟೆ ಚುರುಗುಟ್ಟುತ್ತಿತ್ತು. ಸಮಯಕ್ಕೆ ಮೊದಲೇ ತಿಂಡಿ ತಿನ್ನಲು ಅಣಿಯಾದೆ. ನನ್ನ ಅಡುಗೆ ಮನೆಯ ಡಬ್ಬಿಗಳೆಲ್ಲ ಖಾಲಿಯಾಗಿದ್ದವು. ಅತ್ಯುತ್ಸಾಹದಿಂದ ತುಸು ಮೊದಲೇ ಅಡುಗೆಗೆ ಅಣಿಯಾದ್ದರಿಂದ ವಸ್ತುಗಳನ್ನು ಕೊಂಡು ತರಲು ಅಂಗಡಿಗಳು ತೆರೆದಿರಲಿಲ್ಲ. ಫ್ರಿಡ್ಜ್ ತೆರೆದಾಗ ಹುಳಿ ಮಜ್ಜಿಗೆ ನನಗೆ ಯಾವಾಗ ಮೋಕ್ಷ ಎಂದು ಹೌಹಾರುತ್ತಿತ್ತು. ಪಕ್ಕದಲ್ಲೇ ಕೇರಳದ ಸ್ನೇಹಿತ ತಂದಿಟ್ಟಿದ್ದ ಕುಚ್ಚಲು ಅಕ್ಕಿಯೂ ಇತ್ತು. ಕೆಲ ದಿನಗಳ ಹಿಂದಷ್ಟೇ ಈ ವರ್ಷದ ಮಾವಿನ ಕಾಯಿಯಿಂದ ತಯಾರಿಸಿದ ಉಪ್ಪಿನಕಾಯಿಯೂ ದೃಷ್ಟಿಗೋಚರವಾಯಿತು. ಕಾವ್ಯಗಳಲ್ಲಿ ಓದಿದ್ದ ಪದಾರ್ಥಗಳೆಲ್ಲ ಮರೆತುಹೋಗಿ ಕುಚ್ಚಿಲಕ್ಕಿ ಗಂಜಿ, ಹುಳಿ ಮಜ್ಜಿಗೆ, ಉಪ್ಪಿನಕಾಯಿಗಳೇ ಮಿಷ್ಟಾನ್ನ ಎಂದೆನಿಸತು. ಪುನಃ ಒಂದುಬಾರಿ ಪ್ರಾಚೀನ ಕಾವ್ಯಗಳಲ್ಲಿ ಭಕ್ಷ್ಯ ಭೋಜ್ಯಗಳನ್ನು ಮೆಲ್ಲುತ್ತಿರುವಾಗ ಕುಕ್ಕರ್ ಕೂಗುತ್ತಿತ್ತು. ವಿವಿಧ ವಿಶಿಷ್ಟ ಪದಾರ್ಥಗಳನ್ನೆಲ್ಲ ಬದಿಗೆ ಸರಿಸಿ ಗಂಜಿ ಮಜ್ಜಿಗೆ ಉಪ್ಪಿನಕಾಯಿಗಳ ರಸವನ್ನೊಂದನ್ನೇ ನಾಲಗೆ ಸವಿಯುತ್ತಿತ್ತು.


ಬುಧವಾರ, ಮಾರ್ಚ್ 27, 2019

ಹೆಲ್ಮೆಟ್ ಲಾಭ

ಬಾಡಿಗೆ ಬೈಕೊಂದನ್ನು ಪಡೆದು ಬೇಕಾದ ಸ್ಥಳಗಳಿಗೆ ಪ್ರಯಾಣಿಸುವ ವ್ಯವಸ್ಥೆಯೇ ಬೌನ್ಸ್ ಬೈಕ್. ಬೌನ್ಸ್ ಬೈಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಮ್ಮ ಡ್ರೈವಿಂಗ್ ಲೈಸೆನ್ಸ್ ಹಾಗೂ ಸೆಲ್ಫಿಯನ್ನು ಅಪ್ ಲೋಡ್ ಮಾಡಬೇಕು. ಮೊಬೈಲ್ ನಲ್ಲಿ ಲೊಕೇಶನ್ ಆನ್ ಮಾಡಿ ಬೌನ್ಸ್ ಬೈಕ್ ಅಪ್ಲಿಕೇಶನ್ ಓಪನ್ ಮಾಡಿದರೆ ನಮ್ಮ ಹತ್ತಿರ ಇರುವ ಬೈಕನ್ನು ತೋರಿಸುತ್ತದೆ. ಸಾಮಾನ್ಯವಾಗಿ ಮೆಟ್ರೋ ಸ್ಟೇಶನ್ ಗಳಲ್ಲಿ ಬೈಕ್ ಗಳಿರುತ್ತವೆ. ಅಲ್ಲದೇ ಕೆಲವು ಜನನಿಬಿಡ ಪ್ರದೇಶಗಳಿಂದಲೂ ಬೈಕ್ ಗಳನ್ನು ಪಡೆಯಬಹುದು. ಲೊಕೇಶನ್ ಆಧಾರದಿಂದ ಮ್ಯಾಪ್ ಸಹಾಯ ಪಡೆದುಕೊಂಡು ಬೈಕ್ ನ ಬಳಿ ಹೋಗಬೇಕು. ಬೈಕ್ ನಲ್ಲಿ ಕೀ ಇರುವುದಿಲ್ಲ. ನಮಗೆ ಬಂದ ಓಟಿಪಿಯನ್ನು ಬೈಕ್ ನಲ್ಲಿರುವ ಕೀಬೋರ್ಡ್ನಲ್ಲಿ ಒತ್ತಿದರೆ ಬೈಕ್ ಅನ್ ಲಾಕ್ ಆಗುತ್ತದೆ. ಬೈಕಿನ ಡಿಕ್ಕಿಯಲ್ಲಿ ಹೆಲ್ಮೆಟ್ ಇರುತ್ತದೆ. ನಾವು ಹೋಗಬೇಕಾದಲ್ಲಿಗೆ ಹೋಗಿ, ಹೆಲ್ಮೆಟ್ ಡಿಕ್ಕಿಯಲ್ಲಿಟ್ಟು ಎಂಡ್ ಟ್ರಿಪ್ ಎಂದು ಒತ್ತಿದರೆ ಬೈಕ್ ಲಾಕ್ ಆಗುತ್ತದೆ. ನಮ್ಮ ಫೋನಿಗೆ ಬಿಲ್ ಬರುತ್ತದೆ. ಆನ್ ಲೈನ್ ನಲ್ಲಿ ಹಣ ಪಾವತಿಸಬೇಕು.

          ಆದರೆ ಇಂತಹ ವ್ಯವಸ್ಥೆಯಲ್ಲಿ ಬೈಕನ್ನು ಪಡೆಯಬೇಕಾದರೆ ಸಾಮಾನ್ಯವಾಗಿ ೧೦ ನಿಮಿಷ ನಡೆಯಬೇಕಾಗುತ್ತದೆ. ಹಲವರು ಹೆಲ್ಮೆಟನ್ನು ಇಡಲು ಮರೆತಿರುತ್ತಾರೆ. ಆದ್ದರಿಂದ ಅನೇಕ ಬಾರಿ ಡಿಕ್ಕಿ ಖಾಲಿಯೇ ಇರುತ್ತದೆ. ಹೆಲ್ಮೆಟ್ ಇಲ್ಲದಿರುವ ಬೈಕನ್ನು ಪಡೆದ ಅನುಭವ ನನಗೂ ಆಯಿತು. ಮೊದಲೆರಡು ಬಾರಿ ಕಸ್ಟಮರ್ ಕೇರ್ ಗೆ ಫೋನ್ ಮಾಡಿ ವಿಚಾರಿಸಿದಾಗ ಟ್ರಿಪ್ ಕ್ಯಾನ್ಸಲ್ ಮಾಡಿ ಎಂಬ ಉತ್ತರ ಬಂದಿತು. ಮೂರನೇ ಬಾರಿಯೂ ೧೦ ನಿಮಿಷ ನಡೆದು ಬೈಕ್ ನಲ್ಲಿ ಹೆಲ್ಮೆಟ್ ಕಾಣದಾಗ ಸಿಟ್ಟು ಬಂತು. ಬಡವನ ಸಿಟ್ಟು ದವಡೆಗೆ ಮೂಲ ಆದ್ದರಿಂದ ಟ್ರಿಪ್ ಕ್ಯಾನ್ಸಲ್ ಮಾಡು ಎಂದು ಒಂದು ಮನಸ್ಸು ಎಚ್ಚರಿಸಿತು. ಆದರೂ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಹೆಲ್ಮೆಟ್ ಧರಿಸದೇ ಪ್ರಯಾಣಿಸುವ ಭಂಡಧೈರ್ಯವಿತ್ತು. ಮನಸ್ಸಿನಲ್ಲಿ ವಿಚಾರಗಳ ಸಂಘರ್ಷ ನಡೆದು ಕೊನೆಗೂ ಭಂಡಧೈರ್ಯವೇ ಗೆದ್ದಿತು. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದಕ್ಕಾಗಿ ೧೦೦ ರೂ ದಂಡವನ್ನು ತೆತ್ತಾಯಿತು.

          ಗಮ್ಯಸ್ಥಾನವನ್ನು ತಲುಪಿದ ನಂತರ ಕಸ್ಟಮರ್ ಕೇರ್ ಗೆ ಫೋನಾಯಿಸಿದೆ. ಹೆಲ್ಮೆಟ್ ಇಲ್ಲದೇ ಪ್ರಯಾಣ ಮಾಡಬಾರದು ಆದ್ದರಿಂದ ನೀವು ದಂಡವನ್ನು ಕಟ್ಟಿದ್ದಕ್ಕೆ ಬೌನ್ಸ್ ಬೈಕ್ ಜವಾಬ್ದಾರನಾಗುವುದಿಲ್ಲ. ನಿಮ್ಮ ಹಣವನ್ನು ಮರಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ನುಡಿದರು. ಆ ಕ್ಷಣಕ್ಕೆ ಸಿಟ್ಟಾದರೂ ಶಾಂತನಾಗಿ ಯೋಚಿಸಿದೆ. ಗೂಗಲ್ ನ ಮೂಲಕ ಬೌನ್ಸ್ ಬೈಕ್ ಸಿ.ಇ.ಓ ಮೇಲ್ ಐಡಿ ಪಡೆದುಕೊಂಡೆ. ನನಗಾದ ಸಮಸ್ಯೆಯನ್ನು ಮೇಲ್ ಮೂಲಕ ವಿವರಿಸಿದೆ. ೧ ಗಂಟೆಯ ಬಳಿಕ ಬೌನ್ಸ್ ಬೈಕ್ ನ ಮಾರ್ಕೆಟಿಂಗ್ ವಿಭಾಗದಿಂದ ಪ್ರತ್ಯುತ್ತರವೂ ದೊರಕಿತು. ನಿಮಗಾದ ತೊಂದರೆಗೆ ವಿಷಾದವಿದೆ. ನಾವು ನಿಮ್ಮ ದಂಡವನ್ನು ಮರಳಿಸುತ್ತೇವೆ. ಅಂತೆಯೇ ನಿಮಗೆ ಒಂದು ಹೆಲ್ಮೆಟನ್ನೂ ನೀಡುತ್ತೇವೆ. ನಿಮ್ಮ ವಿಳಾಸವನ್ನು ಕಳುಹಿಸಿ ಎಂದು ಬರೆದಿದ್ದರು. ಚುನಾವಣೆಯ ಸಮಯವಾಗಿದ್ದರಿಂದ ರಾಜಕಾರಣಿಗಳಂತೆಯೇ ಸುಳ್ಳು ಆಶ್ವಾಸನೆಯನ್ನು ನೀಡುತ್ತಿದ್ದಾರೆ. ಆದರೂ ಅಡ್ರೆಸ್ ಕಳುಹಿಸಿದರೆ ನನಗೆ ನಷ್ಟವೇನಿಲ್ಲ ಎಂದು ಅಡ್ರೆಸ್ ಕಳುಹಿಸಿದೆ. ಅಚ್ಚರಿಯೆಂದರೆ ಅಡ್ರೆಸ್ ಕಳುಹಿಸಿದ ಎರಡನೆಯ ದಿನವೇ ಕೊರಿಯರ್ ನ ಮೂಲಕ ಹೆಲ್ಮೆಟ್ ತಲುಪಿತು. ಆದರೆ ದಂಡದ ಹಣ ಪಾವತಿಯಾಗಲಿಲ್ಲ. ಪುನಃ ಹೆಲ್ಮೆಟ್ ಕಳುಹಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ ದಂಡದ ಹಣ ತಲುಪಲಿಲ್ಲ ಎಂದು ಸೂಚಿಸಿದೆ. ೧ ಗಂಟೆಯೊಳಗೆ ಬೌನ್ಸ್ ಬೈಕ್ ವ್ಯಾಲೆಟ್ ಗೆ ದಂಡದ ಹಣ ಸೇರ್ಪಡೆಯಾಯಿತು. ಬಹುಶಃ ನ್ಯಾಯವನ್ನು ತಪ್ಪದೇ ಅನಿವಾರ್ಯವಾಗಿ ಅನ್ಯಾಯ ಮಾಡಿದರೆ ಅನ್ಯಾಯದ ಪಾಪ ನಮಗೆ ಅಂಟುವುದಿಲ್ಲವೇನೋ.

ಭಾಗ ೨

ಬೌನ್ಸ್ ಬೈಕ್ ಗಳು ಜನಪ್ರಿಯವಾಗತೊಡಗಿದಂತೆ ಬೈಕ್ ಗಳಿಂದ ಹೆಲ್ಮೆಟ್ ಕದಿಯುವುದನ್ನು ತಡೆಯಲು ಬೌನ್ಸ್ ಸಂಸ್ಥೆಯಿಂದ ವಿಭಿನ್ನ ಯತ್ನಗಳು ಆರಂಭವಾದುವು. ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಯನ್ನು ನಿಲ್ಲಿಸಿ ಬೇರೆ ಬೈಕ್ ಗಳಲ್ಲಿ ಬೌನ್ಸ್  ಹೆಲ್ಮೆಟ್ ಗಳನ್ನು ಹಾಕಿಕೊಂಡು ಹೋಗುವವರನ್ನು ಹಿಡಿಯುವುದು ಅದರಲ್ಲೊಂದು. ಹೀಗೆ ಹಿಡಿಯಲೆಂದು ನಿಂತವರಿಗೆ ನಾವು ಹೇಳುವುದನ್ನು ಕೇಳುವ ವ್ಯವಧಾನವಿರುವುದಿಲ್ಲ. ಬೌನ್ಸ್ ಹೆಲ್ಮೆಟ್ ಸಿಕ್ಕಿದರೆ ಸಾಕು ಧಮಕಿ ಹಾಕಿ ಒಯ್ಯುತ್ತಾರೆ. ನನ್ನ ಸ್ನೇಹಿತ ನನಗೆ ಸಿಕ್ಕಿದ ಬೌನ್ಸ್ ಹೆಲ್ಮೆಟ್ ಧರಿಸಿ ತನ್ನ ಸ್ವಂತದ ಬೈಕ್ ನಲ್ಲಿ ಹೋಗುತ್ತಿದ್ದ. ಬೌನ್ಸ್ ಸಿಬ್ಬಂದಿ ಹೆಲ್ಮೆಟ್ ಕಿತ್ತುಕೊಂಡರು. ಅಲ್ಲದೆ ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿಯೂ ಇದ್ದರು. ಇದರಿಂದಾಗಿ ಪುನಃ ಬೌನ್ಸ್ ಸಂಸ್ಥೆಯ ಅಧಿಕಾರಿಗಳಿಗೆ ಮೇಲ್ ಮಾಡಿದೆ. ಈ ಬಾರಿ ನನ್ನ ವಾಟ್ಸ್ ಆ್ಯಪ್ ಸಂಖ್ಯೆಯನ್ನು ತೆಗೆದುಕೊಂಡ ಅಧಿಕಾರಿ ನನ್ನ ಬಳಿ ಪ್ರೀತಿಯಿಂದಲೇ ಮಾತನಾಡಿದರು. ಈಗ ಹೊಸ ಡಿಜೈನ್ ಹೆಲ್ಮೆಟ್ ಗಳು ಬಂದಿವೆ. ಅದನ್ನು ನಿಮಗೆ ಕೊಡುತ್ತೇವೆ ಎಂದು ಹೇಳುತ್ತಲೇ ಮೂರು ತಿಂಗಳುಗಳ ಕಾಲ ಕಾಲವನ್ನು ದೂಡಿದರು. ಹೆಲ್ಮೆಟ್ ದೊರೆಯುವ ಆಸೆ ದೂರವಾಗುತ್ತಾ ಬಂತು. ಆದರೂ ನಾನು ಕೇಳುವುದನ್ನು ಬಿಟ್ಟಿರಲಿಲ್ಲ. ಅಂತಿಮವಾಗಿ ೩ ತಿಂಗಳುಗಳ ನಂತರ ಹೆಲ್ಮೆಟ್ ದೊರೆಯಿತು. 

ಸೋಮವಾರ, ಫೆಬ್ರವರಿ 25, 2019

ನಿಮ್ಮ ಮದುವೆಯಾಯಿತಲ್ಲ, ಅಭಿನಂದನೆಗಳು

2017-2018 ನೆಯ ಶೈಕ್ಷಣಿಕ ವರ್ಷದಲ್ಲಿ ಪಿ.ಎಚ್.ಡಿ ಕೋರ್ಸ್ ವರ್ಕ್ ನಿಮಿತ್ತವಾಗಿ ಆರು ತಿಂಗಳುಗಳ ಕಾಲ ಪ್ರಯಾಗದಲ್ಲಿ ವಾಸವಾಗಿದ್ದೆ. ಐದು ಮಂದಿ ಸ್ನೇಹಿತರ ಜೊತೆ ನಿವಾಸವಿತ್ತು. ದಕ್ಷಿಣಭಾರತದಿಂದ ಹಿಂದೀಭಾಷಾಕ್ಷೇತ್ರಕ್ಕೆ ತೆರಳಿದ್ದ ನಾವು ಹಿಂದಿಯಲ್ಲಿ ವ್ಯವಹರಿಸುವುದು ಅನಿವಾರ್ಯವಾಗಿತ್ತು. ನನ್ನೊಂದಿಗಿದ್ದ ಮಿತ್ರರಿಗಿಂತಲೂ ಚೆನ್ನಾಗಿ ಹಿಂದಿಯಲ್ಲಿ ನಾನು ವ್ಯವಹರಿಸುತ್ತಿದ್ದೆ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಅನೇಕ ಕಡೆಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಕೆಲಸವನ್ನು ನನಗೇ ವಹಿಸುತ್ತಿದ್ದರು. ಪ್ರಯಾಗದ ಸುತ್ತಮುತ್ತಲಿನ ಪ್ರೇಕ್ಷಣೀಯಸ್ಥಳಗಳ ಸಂದರ್ಶನವನ್ನೂ ನಮ್ಮ ಕೋರ್ಸ್ ವರ್ಕ್ ನ ಸಮಯದಲ್ಲಿ ಪೂರೈಸಿದ್ದೆವು. ನನ್ನೊಂದಿಗೆ ಮುರಳೀಕೃಷ್ಣ ಎಂಬ ಗೆಳೆಯನಿದ್ದ. ಕರ್ನಾಟಕ ಮೂಲದ ಸುಬ್ರಹ್ಮಣ್ಯ ಭಾರತೀ ಕೋಣಾಲೆ ಎಂಬುವವರು ಆತನಿಗೆ ಪರಿಚಿತರಾಗಿದ್ದರು. ಅನೇಕ ವರ್ಷಗಳ ಕಾಲ ಬಿಹಾರದಲ್ಲಿ ವಾಸವಾಗಿದ್ದ ಅವರು ಉತ್ತರ ಭಾರತದಲ್ಲಿನ ಪ್ರೇಕ್ಷಣೀಯ ಸ್ಥಳಗಳ ತಿರುಗಾಟಕ್ಕೆ ನಮಗೆ ಮಾರ್ಗದರ್ಶಕರಂತಿದ್ದರು. ಚಿತ್ರಕೂಟದಲ್ಲಿ ನಮ್ಮ ವಾಸಾದಿಗಳ ವ್ಯವಸ್ಥೆಗೆ ಸಂಗಮಲಾಲ್ ಶುಕ್ಲ ಎನ್ನುವವರ ದೂರವಾಣೀ ಸಂಖ್ಯೆಯನ್ನು ನೀಡಿದ್ದರು. ಅಲ್ಲದೇ ನನ್ನ ಪರಿಚಿತರಾಗಿರುವ ಮುರಳೀಕೃಷ್ಣ ಎಂಬುವವರು ನಿಮಗೆ ದೂರವಾಣಿಕರೆಯನ್ನು ಮಾಡಲಿದ್ದಾರೆ. ಅವರಿಗೆ ಚಿತ್ರಕೂಟದಲ್ಲಿ ವ್ಯವಸ್ಥೆ ಮಾಡಿ ಎಂದು  ಸಂಗಮಲಾಲ್ ಶುಕ್ಲ ಅವರಿಗೆ ದೂರವಾಣಿ ಮಾಡಿ ಸೂಚಿಸಿದ್ದರು. ಚಿತ್ರಕೂಟಕ್ಕೆ ತೆರಳುವ ಒಂದು ದಿನದ ಮೊದಲು ಸಂಗಮಲಾಲ್ ಶುಕ್ಲ ಅವರಿಗೆ ಫೋನ್ ಮಾಡಬೇಕೆಂದು ಚಿಂತಿಸಿದೆವು. ಮೊದಲೇ ಹೇಳಿದಂತೆ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುವ ಜವಾಬ್ದಾರಿ ನನ್ನದಾಗಿತ್ತು. ಸುಬ್ರಹ್ಮಣ್ಯ ಭಾರತೀಯವರು ಮುರಳೀಕೃಷ್ಣ ಫೋನ್ ಮಾಡುತ್ತಾನೆ ಎಂದು ಹೇಳಿರುವುದರಿಂದ ನಾನು ಫೋನ್ ಮಾಡುವುದು ಸರಿಯಲ್ಲ ಎಂದು ವಾದಿಸಿದೆ. ಆದರೂ "ನನಗೆ ಹಿಂದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ ಸಂಗಮಲಾಲ್ ಶುಕ್ಲ ನನ್ನ ಮುಖವನ್ನೂ ನೋಡಿಲ್ಲ. ಆದ್ದರಿಂದ ನಾನೇ ಮುರಳೀಕೃಷ್ಣ ಎಂದು ಹೇಳಿ ಮಾತನಾಡು" ಎಂದು ನನ್ನ ಮನವೊಲಿಸಿದ. ಆಪತ್ಕಾಲದಲ್ಲಿ ಯಾರಿಗೂ ತೊಂದರೆಯಾಗದಂತಹ ಸುಳ್ಳನ್ನು ನುಡಿಯುವುದು ಅಪರಾಧವೇನಲ್ಲ ಎಂದು ಭಾವಿಸಿದ ನಾನು "ನಾನೇ ಮುರಳೀಕೃಷ್ಣ" ಎಂದು ಸುಳ್ಳನ್ನಾಡಿದೆ. ಚಿತ್ರಕೂಟಕ್ಕೆ ಹೋದಾಗ ಸಂಪೂರ್ಣದಿನವನ್ನು ಅವರೊಂದಿಗೇ ಕಳೆದಿದ್ದೆವು. ಮುಖಪರಿಚಯ ಮಾಡಿಕೊಳ್ಳುವಾಗ ನಾನು ಸೂರ್ಯ ಎಂದು ನಿಜವನ್ನೇ ಹೇಳಿದ್ದೆ. ಆದರೆ ಫೋನ್ ನಲ್ಲಿ ಮಾತನಾಡುವಾಗ ನಾನು ಮುರಳೀಕೃಷ್ಣ ಎಂದು ಹೇಳುತ್ತಿದ್ದೆ. ಅವರು ನನ್ನ ಫೋನ್ ನಂಬರ್ ಅನ್ನು ಮುರಳಿಕೃಷ್ಣ ಎಂದೇ ಸೇವ್ ಮಾಡಿಕೊಂಡಿದ್ದರು. ಪ್ರಯಾಗದಿಂದ ಮರಳಿದ ನಂತರವೂ ನಾಲ್ಕೈದು ಬಾರಿ ಫೋನ್ ಮಾಡಿದ್ದರು.

 2019ರ ಫೆಬ್ರವರಿ 14 ರಂದು ಮುರಳೀಕೃಷ್ಣನ ಮದುವೆಯಾಯಿತು. ಮದುವೆಯಾಗುವ ವಿಷಯವನ್ನು ಬಹುಶಃ ಮುರಳಿಕೃಷ್ಣ ಸಂಗಮಲಾಲ್ ಶುಕ್ಲಾ ಅವರಿಗೆ ತಿಳಿಸಿದ್ದ. ಆತನ ಮದುವೆಯಾಗಿ ಒಂದೆರಡು ದಿನಗಳ ನಂತರ ಸಂಗಮಲಾಲ್ ಶುಕ್ಲ ಅವರಿಂದ ದೂರವಾಣಿ ಕರೆ ಬಂತು. ಪ್ರಯಾಗದಿಂದ ಮರಳಿದ ನಂತರ ಪ್ರತಿ ಬಾರಿ ಫೋನ್ ಮಾಡಿದಾಗಲೂ ಸಂಗಮಲಾಲ್ ಶುಕ್ಲ ನಮಸ್ಕಾರ್ ಜೀ ಕ್ಯಾ ಹಾಲ್ ಹೇ ಆಪ್ ಕಾ ಎಂದು ಸಂಭಾಷಣೆಗೆ ತೊಡಗುತ್ತಿದ್ದರು. ಮುರಳಿಜೀ ಎಂದಾಗಲೀ ಸೂರ್ಯಜೀ ಎಂದಾಗಲೀ ಸಂಬೋಧಿಸುತ್ತಿರಲ್ಲ. ಆದ್ದರಿಂದ ನನ್ನ ಫೋನ್ ನಂಬರನ್ನು ಮುರಳಿಕೃಷ್ಣ ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂಬ ವಿಚಾರ ಮರೆತು ಹೋಗಿತ್ತು. ಈ ಬಾರಿ ಫೋನ್ ಮಾಡಿದವರು ನೇರವಾಗಿ ಬಹುತ್ ಬಧಾಯೀ ಆಪ್ ಕೋಎಂದು ನುಡಿದರು. ಏಕೆಂದು ಕೇಳಿದರೆ ನಿಮ್ಮ ಊರಿನಲ್ಲಿ ಮದುವೆಗೆ ಹುಡುಗಿ ಸಿಗುವುದೇ ಕಷ್ಟ ಎಂದು ಹೇಳುತ್ತಿದ್ದಿರಿ ಈಗ ನಿಮಗೆ ಹುಡುಗಿಯೂ ಸಿಕ್ಕಿದಳು ಮದುವೆಯೂ ಆಯಿತು. ಆದ್ದರಿಂದ ಬಧಾಯೀ ಹೇಳುತ್ತಿದ್ದೇನೆ ಎಂದು ನುಡಿದರು. ನಮ್ಮೂರಿನಲ್ಲಿ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ವಿಷಯವನ್ನು ಅವರಿಗೆ ಹೇಳಿದ್ದು, ಉತ್ತರಭಾರತದ ಅನೇಕರು ದಕ್ಷಿಣ ಭಾರತಕ್ಕೆ ತಮ್ಮ ಮಗಳನ್ನು ಮದುವೆಮಾಡಿಕೊಡಲು ಬಯಸುತ್ತಾರೆ ಎಂದು ಅವರು ಹೇಳುತ್ತಿದ್ದುದೆಲ್ಲಾ ನೆನಪಾಯಿತು. ಆದರೂ ನನ್ನ ಮದುವೆ ನನಗೇ ಗೊತ್ತಿಲ್ಲದೇ ಆಗಿಹೋಯಿತೇ ಎಂದು ಕಳವಳವಾಯಿತು. ಮಾತನ್ನು ಮುಂದುವರಿಸುತ್ತಾ ಮುರಳೀಜೀ ಆಪ್ ಕೋ ಪತ್ನೀ ಕೇ ಸಾಥ್ ಏಕ್ ಬಾರ್ ಚಿತ್ರಕೂಟ್ ಆನಾ ಎಂದಾಗ ಎಲ್ಲವೂ ನೆನಪಾಗಿ ಗೊಂದಲ ದೂರವಾಯಿತು. ನಾನು ಮುರಳಿ ಅಲ್ಲ ಆತನ ಗೆಳೆಯ ಸೂರ್ಯ ಎಂದು ಹೇಳಿ ಮುರಳೀಕೃಷ್ಣನ ಫೋನ್ ನಂಬರ್ ಕಳುಹಿಸಿದೆ.


ಬುಧವಾರ, ಫೆಬ್ರವರಿ 13, 2019

प्रेमदिवसः

(2018तमे वर्षे प्रेमिदिवसे रचितानि कतिचन पद्यानि)

यस्य प्रेम विफलं सः इत्थम् अनुभवेत्-💔

द्रवीभवद्धस्तगतं विलोक्य
पयोहिम! त्वां दयितोपभुङ्क्ते।
द्रवीभवन्मे हृदयं कुतः सा
न पश्यति प्रेमदिनेsपि हन्त॥

एकेन चैव बहुना तनुना गुणेन
युक्तं स्वकीयहृदये धरतीह हारम्।
प्रीत्यादरादिबहुभिर्गुणराशिभिर्यो
युक्तोस्त्ययं, धरति तं न तदस्ति चित्रम्॥

पृष्ठे गतान्मुहुरपि स्वकरेण केशा
नाकृष्य या स्वहृदये विनिवेष्टुकामा।
योsयं पुरः प्रतिदिनं चरतीह तं सा 
दूरीकरोति सततं किल चित्रमेतद्।

यस्य च प्रेम सफलं स इत्थं चिन्तयेत्💘💑

शम्भौ भक्त्या निशि सुविहिता जागरेत्येष कोपात्
मन्ये तीक्ष्णैः प्रहरति भृशं त्र्यम्बकारिः स्वबाणैः।
नैतद्युक्तं तव हररिपो! सायकान् संहर त्वं
प्रत्यासन्ने मदनदिवसे प्रेमिणां क्वास्ति निद्रा॥
(2018तमे वर्षे प्रेमिदिवसस्य पूर्वस्मिन् दिने महाशिवरात्रिपर्व आसीत् )

मन्मथः पञ्चभिर्बाणैर्हृदयं मम विध्यति।
हृदयस्था  प्रिया भीरुर्भीत्या न हि पलायते॥
तथापि मनसः खेदः कुतो मे वर्धते वृथा।
मन्ये स्मरः प्रियायाश्च हृदयं विध्यतीति सः॥
प्रेयसीहृदये वासाद् स्मरबाणाः स्पृशन्ति माम्।
तां च मद्धृदये वासाद्, विशिष्टं कामखेलनम्॥

2018तमे वर्षे प्रयागे वसतो मम त्वैषा स्थितिः-
अङ्गनालिङ्गनेनाङ्गभङ्गैरिङ्गितसङ्गतिः।
सङ्गिनां, सङ्गमेsङ्गं मे तरङ्गैस्सङ्गतङ्गुणि॥

ವರ್ಕ್ ಶಾಪ್ ವರವಾದಾಗ

AttachmentsThu, Jan 24, 7:42 PM


ವಿದ್ಯಾರ್ಥಿ ಜೀವನದಲ್ಲಿ ಅನೇಕ ವರ್ಕ್ ಶಾಪ್ ಗಳಲ್ಲಿ ಭಾಗವಹಿಸುವ ಯೋಗ(?) ದೊರಕಿತ್ತು. ಅನೇಕ ವರ್ಕ್ ಶಾಪ್ ಗಳನ್ನು ನೋಡಿದ್ದರಿಂದ ವರ್ಕ್ ಶಾಪ್ ಎಂದರೆ ಭವ್ಯವಾದ ಸಭೆ, ವಿದ್ವಾಂಸರ ಪರಸ್ಪರ ಹೊಗಳಿಕೆಗಳು. ೫ ನಿಮಿಷದ ಪ್ರಾರ್ಥನೆಗೆ ೫ ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿ ೧೦ ನಿಮಿಷಗಳ ಕಾಲ ಶ್ರುತಿ ಇತ್ಯಾದಿಗಳನ್ನು ಸೆಟ್ ಮಾಡುವುದು, ಬಂದವರಿಗೆ ಊಟ ವಸತಿಗಳ ವ್ಯವಸ್ಥೆ, ನಡುವಿನಲ್ಲಿ ಕಾಫಿ ಚಹ ತಿಂಡಿಗಳ ಸರಬರಾಜು. ಕಾರ್ಯಶಾಲೆಯ ಕೊನೆಗೆ ಕಂಡಕಂಡವರಿಗೆಲ್ಲ ಸ್ವೀಟ್ ಹಂಚುವುದು, ಮಾರನೆಯ ದಿನ ಸಂಗೋಷ್ಠಿಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಹೇಳುವುದಕ್ಕಾಗಿ ಗಂಟೆಯೊಂದನ್ನು ಪೋಲು ಮಾಡುವುದು ಮೊದಲಾದುವುಗಳೇ ನೆನಪಿಗೆ ಬರುತ್ತಿದ್ದವು. ಕಾರ್ಯಶಾಲೆಯಿಂದ  ಆದ ಪ್ರಯೋಜನವೇನು ಎಂದು ಹೇಳಿದರೆ ಉತ್ತರಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು.

ಅನೇಕ ದಿನಗಳ ನಂತರ ಕಾರ್ಯಶಾಲೆಯೊಂದರಲ್ಲಿ ಭಾಗವಹಿಸುವ ಅವಕಾಶ ದೊರಕಿತು. ವಿಕಿಸೋರ್ಸ್ ಎಂಬ ವಿಷಯದಲ್ಲಿ ಎರಡು ದಿನಗಳ ಸಣ್ಣ ಕಾರ್ಯಶಾಲೆಯಾಗಿತ್ತು. ಸಂಸ್ಕೃತ ಭಾರತೀ ಹಾಗೂ  CIS-A2K  ಎಂಬ ಸಂಸ್ಥೆಗಳು ಜಂಟಿಯಾಗಿ ಕಾರ್ಯಶಾಲೆಯನ್ನು ಆಯೋಜಿಸಿದ್ದವು. ೨೩-೦೧-೨೦೧೯ ಹಾಗೂ ೨೪-೦೧-೨೦೧೯ ರಂದು ವಿಕಿಸೋರ್ಸ್ ಕಾರ್ಯಶಾಲೆ ನಡೆಯಿತು. ಕಾರ್ಯಶಾಲೆಯಲ್ಲಿ ಇಂಟರ್ನೆಟ್ ಆಧಾರದಲ್ಲೇ ಕೆಲಸಗಳು ನಡೆಯುವುದರಿಂದ ಬೆಂಚು ಡೆಸ್ಕುಗಳ ಬಳಿಯಲ್ಲಿ ವಿದ್ಯುತ್ ಸಂಪರ್ಕ ಅತ್ಯವಶ್ಯವಾಗಿತ್ತು. ಕಾರ್ಯಶಾಲೆಯ ಹಿಂದಿನ ದಿನ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಇಬ್ಬರು 1 ಗಂಟೆ ಕೆಲಸ ಮಾಡಿದೆವು. (ಈ ಒಂದು ಗಂಟೆಯಲ್ಲೇ ಬ್ಯಾನರ್ ಕಟ್ಟುವ ಕೆಲಸವೂ ಮುಗಿದಿತ್ತು). ಕಾರ್ಯಶಾಲೆಯಲ್ಲಿ ಭಾಗವಹಿಸಲು ಬರುವವರೆಲ್ಲರೂ ಬೆಂಗಳೂರಿನವರೇ ಆದುದರಿಂದ ವಾಸವ್ಯವಸ್ಧೆಯನ್ನು ಕಲ್ಪಿಸುವ ಕೆಲಸವಿರಲಿಲ್ಲ. ಜಮಖಾನ ಹಾಸುವುದು, ಹೂಗುಚ್ಛ ಮಾಡುವುದು, ಹಣ್ಣು ತರುವುದು, ಶಾಲು ಮಡಿಚುವುದು, ನೇಮ್ ಪ್ಲೇಟ್ ಮಾಡುವುದು, ಪ್ರೋಗ್ರಾಮ್ ಲಿಸ್ಟ್ ಪ್ರಿಂಟ್ ತೆಗೆಯುವುದು ಮೊದಲಾದ ಯಾವುದೇ ವ್ಯರ್ಥ ಕಾರ್ಯಗಳಿರಲಿಲ್ಲ. ಕಾರ್ಯಶಾಲೆಯಲ್ಲಿ ತರಬೇತಿ ನೀಡಲು CIS-A2K ಸಂಸ್ಧೆಯಲ್ಲಿ ಇಂಡಿಕ್ ವಿಕಿಸೋರ್ಸ್ ನ ಸಂಯೋಜಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ರಿರುವ ಕೋಲ್ಕತ್ತಾದ  ಜಯಂತನಾಥ್ ಆಗಮಿಸಿದ್ದರು. ಸಂಪೂರ್ಣ ಕಾರ್ಯಶಾಲೆಯು ಅವರ ಮಾರ್ಗದರ್ಶನದಂತೆಯೇ ನಡೆಯಿತು.  ಮಧ್ಯಾಹ್ನ ಊಟ ಹಾಗೂ ಎರಡು ಬಾರಿ ಪಾನೀಯದ ವ್ಯವಸ್ಧೆಯಿದ್ದರೂ ಸುಗಮವಾಗಿ ನಡೆದುಹೋಯಿತು.   ಪಾನೀಯಕ್ಕಾಗಿ ಪ್ರತ್ಯೇಕವಾದ ವಿರಾಮವಿರಲಿಲ್ಲ. ಕಾರ್ಯಶಾಲೆಯ ಮಧ್ಯದಲ್ಲೇ ಮಾರ್ಗದರ್ಶಕರೂ ಪ್ರತಿಭಾಗಿಗಳೂ ಪಾನೀಯವನ್ನು ಕುಡಿಯುತ್ತಿದ್ದೆವು. ಮಾರ್ಗದರ್ಶಕರಂತೂ ಒಂದು ನಿಮಿಷವನ್ನೂ ಪೋಲು ಮಾಡದೇ ತಮಗೆ ಗೊತ್ತಿರುವ ಅಂಶಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ತಕ್ಷಣ ಅದರ ಪ್ರಯೋಗವನ್ನು ಮಾಡಿ ಅದರ ಪರಿಣಾಮವನ್ನು ನಾವು ಹೇಳಬೇಕಿತ್ತು. ಕಾರ್ಯಶಾಲೆಯ ಕೊನೆಯಲ್ಲಿ 5 ನಿಮಿಷಗಳಲ್ಲಿ ಮಾರ್ಗದರ್ಶಕರು ಹಾಗೂ ಪ್ರತಿಭಾಗಿಗಳು ಕಾರ್ಯಶಾಲೆಯ ಅನುಭವಗಳನ್ನು ಹಂಚಿಕೊಂಡೆವು. ಮುಖ್ಯವಾಗಿ 2 ದಿನಗಳ ಕಾಲ ಅಕ್ಷರಂನಲ್ಲಿ ನಡೆದ ಕಾರ್ಯಶಾಲೆಯಲ್ಲಿ ಅಕ್ಷರಂನ ದಿನನಿತ್ಯದ ಕೆಲಸಗಳಿಗೆ ಯಾವುದೇ ತೊಂದರೆಯಾಗಲಿಲ್ಲ.  ಅಕ್ಷರಂನಲ್ಲೇ ಕೆಲಸ ಮಾಡುವ ಅನೇಕರಿಗೆ ಕಾರ್ಯಶಾಲೆ ನಡೆಯಿತು ಎಂದು ತಿಳಿದಿರಲಿಕ್ಕೂ ಇಲ್ಲ. ಅಕ್ಷರಂನ ಹಿರಿಯರೊಬ್ಬರು ಅರ್ಧಗಂಟೆಗಳ ಕಾಲ ಕುಳಿತು ಕಾರ್ಯಶಾಲೆಯನ್ನು ಅವಲೋಕಿಸಿದರು. ಅವರ ಹೊಗಳಿಕೆಗೆ ಸಮಯವ್ಯಯವನ್ನೂ ಮಾಡಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಯಶಾಲೆ ಎನ್ನುತ್ತಾ ದೈನಂದಿನ ಕಾರ್ಯಕಲಾಪಗಳನ್ನು ಬಿಟ್ಟು ಕುಣಿದಾಡಿ ಎರಡು ದಿನವನ್ನು ಹಾಳುಮಾಡಿದೆ ಎಂದು ವ್ಯಥೆಪಡುವ ಪರಿಸ್ಧಿತಿ ಉಂಟಾಗಲಿಲ್ಲ. ಎರಡು ದಿನಗಳ ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ದೈನಂದಿನ ಕಾರ್ಯಗಳಂತೆಯೇ ಕಾರ್ಯಶಾಲೆಯೂ ನಡೆದುಹೋಯಿತು.

ಎಲ್ಲಾ ವಿಷಯಗಳಲ್ಲೂ, ಎಲ್ಲಾ ಸಂಸ್ಧೆಗಳಲ್ಲೂ ಈ ತರಹದ ಕಾರ್ಯಶಾಲೆಗಳನ್ನು ಆಯೋಜಿಸುವುದು ಕಷ್ಟಸಾಧ್ಯವೇ. ಆದರೂ ಕೂಡಾ ಕಾರ್ಯಶಾಲೆಯಲ್ಲಿ ಕಾರ್ಯ ಸಿದ್ಧವಾಗುವಂತೆ ಕಾರ್ಯಶಾಲೆಗಳನ್ನು ನಡೆಸಿದರೆ ಭಾಗವಹಿಸಿದವರಿಗೆ ಸಂತೋಷ, ಆಯೋಜಕರಿಗೆ ತೃಪ್ತಿ ಸಿಗುವುದರಲ್ಲಿ ಅನುಮಾನವಿಲ್ಲ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...