जगति विद्यमानेषु सर्वेष्वपि जीविषु मानवस्य मनः तीक्ष्णं सत् सम्यक् कार्यं करोति इति वयं सर्वेऽपि जानीमः । कदाचित् मनसः विक्षिप्तता भवति । तन्नाम बहुषु कार्येषु यदि पराजयः एव प्राप्यते तर्हि मनसः समतोलनं विनश्यति । तदा कदाचित् किं कुर्वन्नस्मि अहम् इत्येव विस्मर्यते । युक्तायुक्तविवेकः, कार्याकार्यविवेकः वा तदानीं न भवति । यस्य मनः खिन्नं भवति सः तु उन्मत्त इव व्यवहरति ।
मम तु मनसः खेदः अभवत् इति परिस्थितिः बहुविरलतया भवति । सर्वदाऽपि प्रायेण प्रसन्नः एव भवामि अहम् । परन्तु कदाचित् मम मनः बहु खिन्नम् आसीत् विविधैः कारणैः । यत्किमपि विचिन्त्य एतत्करणीयम्, इदं सिद्ध्यति इति चिन्तयामि चेत् किमपि न सिद्ध्यति स्म । परन्तु तस्मिन् काले तु अवशिष्टस्य कार्यस्य समापने महान् उत्साहः भवति इति तु सत्यमेव ।
कस्माच्चित् आपणात् मया किञ्चिद्धनं प्राप्तव्यम् आसीत् । स च आपणः मम कार्यालयतः एककिलोमीटर्-परिमिते दूरे आसीत् । तथैव मया वित्तकोषः अपि गन्तव्यः आसीत् । अन्यस्मिन् अपि आपणे किञ्चित् कार्यम् आसीत् । सर्वमपि कार्यं मध्याह्ने भोजनविरामावसरे समापयिष्यामि इति चिन्तितवान् । मम कार्यालये विद्यमानायाः कस्याश्चित् ज्येष्ठभगिन्याः यानं स्वीकृत्य कार्याणि कर्तुं प्रस्थितः ।
आदौ तु आपणः एव गतः यतः मया धनं प्राप्तव्यम् आसीत् । स च आपणः सीतासर्कल् इति स्थलात् अनतिदूरे वर्तते । तत्र महामार्गः अस्ति यत्र वाहनसम्मर्दः अधिकः भवति । आपणस्य पार्श्वे किञ्चन कार्-यानम् स्थितम् आसीत् । तस्य पृष्ठतः अन्यकार्-यानस्य स्थगनार्थं यावत् स्थलम् आवश्यकं तावत् स्थलम् आसीत् । मम तु केवलं धनस्वीकरणमात्रं कार्यम् । तस्माद् कार्-यानस्य पृष्ठतः यानं स्थगयित्वा धनं स्वीकृत्य आगतवान् ।
प्रत्यागत्य याने उपविष्टः प्रस्थातुकामः कुञ्चिकां याने प्रवेशितवान् । परन्तु याने कुञ्चिका न प्रविष्टा । यानस्य handle lock कृतं नासीत् । अहं कुञ्चिकां परिशीलितवान् । कुञ्चिका किञ्चिदिव वक्रा आसीत् । अहं एषा कुञ्चिका नष्टा इति चिन्तितवान् । भगिन्याः यानं स्वीकृत्य आगतवान् इति कारणतः प्रत्यर्पणं मम उत्तरदायित्वम् । अहं कथञ्चित् मम कार्यालयपर्यन्तं यानं नीत्वा तस्यै दद्याम् । नो चेत् मम अपराधः भविष्यति इति अहं चिन्तितवान् । अपि च आपणस्य अपेक्षया अधोभागे कार्यालयः आसीत् । अतः प्रायेण यानस्य यन्त्रम् अनुपयुज्य एव यानमानेतुं शक्यम् आसीत् । तथापि कुत्रचित् यानस्य नोदनं करणीयं भवति इत्यपि अहं जानामि स्म । परन्तु यथाकथञ्चित् यानस्य प्रापणं मया करणीयमेव इति उत्तरदायित्वनिर्वहणबुद्ध्या यानं नुदन्नेव प्रस्थितः ।
ಜಗತ್ತಿನ ಜೀವಿಗಳಲ್ಲಿ
ಮಾನವನ ಮನಸ್ಸು ಸಂವೇದನಾಶೀಲವಾಗಿರುತ್ತದೆ
ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಮನಸ್ಸಿಗೆ ಬೇಸರವಾದಾಗ ಮಾಡುವ ಕೆಲಸಗಳು
ಎಡವಟ್ಟಿನ ಕೆಲಸಗಳೇ ಆಗಿರುತ್ತವೆ. ಅನೇಕ ಕೆಲಸಗಳು ವಿಫಲವಾದಾಗ ಸಹಜವಾಗಿಯೇ ಮನಸ್ಸು ಹಿಡಿತ
ಕಳೆದುಕೊಳ್ಳುತ್ತದೆ. ಆಗ ಮಾಡುವ ಕೆಲಸಗಳು ಮತ್ತಷ್ಟು ತೊಂದರೆಗಳಿಗೆ ದಾರಿಯಾಗುತ್ತವೆ.
ನನ್ನ ವಿಷಯದಲ್ಲಿ
ಹೇಳುವುದಾದರೆ ಮನಸ್ಸಿಗೆ ಬೇಜಾರಾಗುವುದು ತುಂಬಾ ಕಡಿಮೆ. ಯಾವತ್ತೂ ಮನಸ್ಸನ್ನು
ಸಂತೋಷವಾಗಿಟ್ಟುಕೊಳ್ಳುವವನು ನಾನು. ಆದರೂ ಕೂಡಾ ಒಂದು ದಿನ ವಿವಿಧ ಕಾರಣಗಳಿಂದ ನನ್ನ ಮನಸ್ಸಿಗೆ
ತುಂಬಾ ಬೇಜಾರಾಗಿತ್ತು. ಬೇಜಾರಾದಾಗ ಪೆಂಡಿಂಗ್ ಇರುವ ಕೆಲಸಗಳ ಬಗ್ಗೆ ನೆನಪಾಗಿ ಅದನ್ನು
ಮುಗಿಸಿಬಿಡುವ ಉತ್ಸಾಹವೂ ಹುಟ್ಟುತ್ತದೆ.
ಅಂಗಡಿಯಾತನೊಬ್ಬ ನನಗೆ ಹಣ
ಕೊಡುವುದಿತ್ತು. ಆತನ ಅಂಗಡಿ ನನ್ನ ಕಛೇರಿಯಿಂದ ಸುಮಾರು ೧ ಕಿ.ಮೀ ದೂರದಲ್ಲಿತ್ತು. ಆ ದಿನ
ಕಚೇರಿಯ ಸುತ್ತಮುತ್ತ ಅನೇಕ ಕೆಲಸಗಳಿದ್ದವು. ಆದ್ದರಿಂದ ಕಛೇರಿಯಲ್ಲಿನ ಹಿರಿಯ ಮಹಿಳೆಯೊಬ್ಬರ
ಸ್ಕೂಟಿ ಪಡೆದುಕೊಂಡು ಕೆಲಸಗಳನ್ನು ಪೂರೈಸುತ್ತೇನೆ ಎಂದು ಹೊರಟೆ.
ಮೊದಲಿಗೆ ಅಂಗಡಿಗೇ
ಹೋಗಿದ್ದೆ. ಅಂಗಡಿ ಮುಖ್ಯಮಾರ್ಗದಲ್ಲಿತ್ತು. ಅಂಗಡಿಯ ಸಮೀಪದಲ್ಲೇ ಕಾರೊಂದು ನಿಂತಿತ್ತು. ಅದರ
ಹಿಂಭಾಗದಲ್ಲಿ ಮತ್ತೊಂದು ಕಾರು ನಿಲ್ಲಿಸುವಷ್ಟು ಜಾಗವಿತ್ತು. ನನ್ನ ಕೆಲಸ ಹಣ
ಪಡೆದುಕೊಳ್ಳುವುದಷ್ಟೇ ಆಗಿದ್ದರಿಂದ ಕಾರಿನ ಹಿಂದೆ ಸ್ಕೂಟಿ ನಿಲ್ಲಿಸಿದೆ. ಅಂಗಡಿಯಾತನಿಂದ ಹಣ
ಪಡೆದುಕೊಂಡು ಮುಂದಿನ ಕೆಲಸಕ್ಕೆ ತೆರಳಲು ಸ್ಕೂಟಿಯನ್ನೇರಿದೆ.
ಸ್ಕೂಟಿ ಸ್ಟಾರ್ಟ್ ಮಾಡಲು
ಕೀಲಿಕೈಯನ್ನು ತಿರುಗಿಸಿದರೆ ಕೀಲಿಕೈ ಸರಿಯಾಗಿ ಹೊಂದಾಣಿಕೆಯಾಗುತ್ತಿರಲಿಲ್ಲ. ಸೂಕ್ಷ್ಮವಾಗಿ
ಗಮನಿಸಿದಾಗ ಕೀಲಿಕೈ ಸ್ವಲ್ಪ ಬಾಗಿದಂತೆ ಕಂಡಿತು. ಇದೇ ಕಾರಣಕ್ಕಾಗಿ ಸ್ಕೂಟಿ ಸ್ಟಾರ್ಟ್
ಆಗುತ್ತಿಲ್ಲ. ಆದರೆ ಸ್ಕೂಟಿ ನನ್ನದಲ್ಲ. ಕಛೇರಿಯಿಂದ ತಂದ ಸ್ಕೂಟಿಯನ್ನು ಅಲ್ಲಿಗೊಯ್ದು ನೀಡುವ
ಜವಾಬ್ದಾರಿ ನನ್ನದಾಗಿತ್ತು. ಅಲ್ಲದೇ ಅಂಗಡಿಯಿಂದ ಕಛೇರಿಯ ಮಾರ್ಗ ಇಳಿಜಾರಾಗಿತ್ತು. ಆದ್ದರಿಂದ
ಬಹಳಷ್ಟು ದೂರವನ್ನು ಸ್ಟಾರ್ಟ್ ಮಾಡದೆಯೇ ಹೋಗಬಹುದಾಗಿತ್ತು. ಆದರೂ ಸ್ವಲ್ಪ ದೂರ ತಳ್ಳುವುದು
ಅನಿವಾರ್ಯವಾಗಿತ್ತು.
ಆ ದಿನ ನಾನು ಅಡುಗೆಯನ್ನೂ
ಮಾಡಿರಲಿಲ್ಲ. ಹೊರಗಡೆಯೇ ತಿಂದು ಬರುತ್ತೇನೆ ಎಂದು ಮೊದಲೇ ನಿರ್ಣಯಿಸಿದ್ದೆ. ಆದ್ದರಿಂದ
ಹೋಟೇಲೊಂದರ ಬಳಿಯಲ್ಲಿ ಸ್ಕೂಟಿ ನಿಲ್ಲಿಸಿ ಊಟಮಾಡಲಾರಂಭಿಸಿದೆ. ಉಣ್ಣುತ್ತಿದ್ದವನ ಮನಸ್ಸಿನಲ್ಲಿ
ಜ್ಞಾನೋದಯವಾಯಿತು. ನಾನು ಸ್ಕೂಟಿಯನ್ನೇ ಬದಲಾಯಿಸಿದ್ದೇನೆಯೇ ಎಂಬ ಸಂಶಯ ಕಾಡಲಾರಂಭಿಸಿತು. ಊಟ
ಮುಗಿಸಿ ಬಂದು ಸ್ಕೂಟಿ ನೋಡಿದಾಗ ನನ್ನ ಸಂಶಯ ದೃಢವಾಯಿತು. ನಾನು ಬೇರೊಬ್ಬರ ಸ್ಕೂಟಿ ತಂದಿದ್ದೆ.
ಈಗೇನು ಮಾಡುವುದು? ಅರ್ಧದಾರಿಯವರೆಗೆ ನಾನಾಗಲೇ ಬಂದಾಗಿತ್ತು. ನಾನು ತಂದಿದ್ದ ಸ್ಕೂಟಿಯ ಕೀಲಿಕೈ ನನ್ನ
ಕೈಯಲ್ಲೇ ಇದ್ದುದರಿಂದ ಅದನ್ನು ಬೇರೆ ಯಾರಾದರೂ ಕದಿಯುವ ಹೆದರಿಕೆಯಿರಲಿಲ್ಲ. ಈ ಸ್ಕೂಟಿಯನ್ನು
ಬಿಟ್ಟರೆ ಬೇರೆ ಯಾರಾದರೂ ಹೊತ್ತೊಯ್ದರೆ ನನ್ನ ಮೇಲೆಯೇ ಸ್ಕೂಟಿ ಕದ್ದ ಆರೋಪ ಬರುತ್ತದೆ.
ಆದ್ದರಿಂದ ಸ್ಕೂಟಿಯನ್ನು ಹೇಗಾದರೂ ಕಚೇರಿಯವರೆಗೆ ಒಯ್ಯುವುದೇ ಸೂಕ್ತ ಎಂದೆನಿಸಿತು.
ಕಚೇರಿಗೆ ಬಂದ ತಕ್ಷಣ
ಮತ್ತೊಬ್ಬರ ಸ್ಕೂಟಿ ತೆಗೆದುಕೊಂಡು ಮೊದಲು ಕೊಂಡು ಹೋಗಿದ್ದ ಸ್ಕೂಟಿಯ ಮಾಲಕಿಯನ್ನೂ ಕರೆದುಕೊಂಡು
ಅಂಗಡಿಯತ್ತ ಧಾವಿಸಿದೆ. ಅಂಗಡಿಯ ಬಳಿಯಲ್ಲಿ ಸ್ಕೂಟಿಯೂ ಇತ್ತು. ಅಂಗಡಿಯ ಮಾಲಿಕನಲ್ಲಿ ಕೇಳಿದಾಗ
ಯಾರೂ ಸ್ಕೂಟಿಯ ಬಗ್ಗೆ ಕೇಳಿಲ್ಲವೆಂದ. ನಾನು ತಂದಿದ್ದ ಸ್ಕೂಟಿಯ ಮಾಲಿಕ ಇನ್ನೂ ಬಂದಿರಲಿಲ್ಲ.
ನನ್ನ ಬಹುದೊಡ್ಡ ಆತಂಕ ದೂರವಾಯಿತು.
ಅಂಗಡಿಯಾತನಿಗೆ ನನ್ನ ಮೊಬೈಲ್ ಸಂಖ್ಯೆ ಕೊಟ್ಟು ಯಾರಾದರೂ ಹುಡುಕಿದರೆ ಫೋನ್ ಮಾಡಿಸಿ ಎಂದು
ಹೇಳಿದೆ.
ಆದರೂ ಮನಸಿನ ಮೂಲೆಯಲ್ಲಿ
ಆತಂಕವಂತೂ ಉಳಿದಿತ್ತು. ಗಾಡಿಯನ್ನು ಹುಡುಕಿದ ಗಾಡಿಯ ಮಾಲಿಕ ಎಲ್ಲಿಯಾದರೂ ನೇರವಾಗಿ ಪೋಲೀಸ್
ಸ್ಟೇಶನ್ ಗೇ ಓಡಿದರೆ.... ನಾನು ಗಾಡಿಕಳ್ಳನೆಂದಾಗುತ್ತದೆ. ಆದ್ದರಿಂದ ಹೇಗಾದರೂ ಮಾಡಿ ಈ ಗಾಡಿಯನ್ನು
ಅಲ್ಲಿಗೆ ತಲುಪಿಸಬೇಕೆಂದೆನಿಸಿತು. ಅಂಗಡಿಗೆ ಹೋಗುವ ಮಾರ್ಗ ಇಳಿಜಾರಾಗಿಲ್ಲ. ಕೊಂಡೊಯ್ಯಲು ಎರಡು
ದಾರಿಗಳಿದ್ದವು. ಮೊದಲನೆಯದೆಂದರೆ ಗಾಡಿಯನ್ನು ತಳ್ಳುವುದು, ಎರಡನೆಯದು ಬೇರೆ ಗಾಡಿಗೆ ಕಟ್ಟಿ
ಎಳೆದುಕೊಂಡು ಹೋಗುವುದು. ವಾಹನಗಳ ವಿಷಯದಲ್ಲಿ ನಿಪುಣನಾಗಿರುವ ಮಿತ್ರನೊಬ್ಬನ ಸಹಾಯದಿಂದ ಎರಡನೇ
ಉಪಾಯವನ್ನು ಮಾಡಿ ಪುನಃ ಗಾಡಿಯನ್ನು ಅಂಗಡಿಯವರೆಗೆ ತಲುಪಿಸಿದೆ. ಪುಣ್ಯಕ್ಕೆ ಆ ಗಾಡಿಯ ಮಾಲಿಕ
ಇನ್ನೂ ಬಂದಿರಲಿಲ್ಲ.
ಕಛೇರಿಗೆ ವಾಪಾಸಾದಾಗ
ಇಡಿಯ ಕಛೇರಿಯಲ್ಲಿ ನಾನು ಮಾಡಿದ ಮಹಾಕಾರ್ಯದ ಸುದ್ದಿ ಹರಡಿತ್ತು. ಎರಡು ದಿನ ನಗೆಪಾಟಲಿಗೀಡಾದೆ.
ನಾಲ್ಕು ದಿನಗಳ ನಂತರ ಯಾವುದೋ ಕೆಲಸಕ್ಕಾಗಿ ಆ ಅಂಗಡಿಯ ಬಳಿ ಹೋದಾಗ ಗಾಡಿ ಅಲ್ಲಿರಲಿಲ್ಲ.
ಮಾಲಿಕನೇ ಬಂದು ಒಯ್ದಿರಬೇಕೆಂಬುದು ನನ್ನ ಊಹೆ. ನನ್ನನ್ನು ಹುಡುಕಿಕೊಂಡು ಪೋಲೀಸರೂ ಇಷ್ಟರತನಕ
ಬಂದಿಲ್ಲವೆಂಬ ಕಾರಣದಿಂದ ಪ್ರಕರಣ ಸುಖಾಂತ್ಯವಾಗಿದೆ ಎಂದುಕೊಂಡು ಇಷ್ಟೆಲ್ಲಾ ಬರೆಯುತ್ತಿದ್ದೇನೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ