ಶುಕ್ರವಾರ, ಏಪ್ರಿಲ್ 16, 2021

नाटकमिति नाटकम् ನಾಟಕವೆಂಬ ನಾಟಕ

 

मम अध्ययनकाले अस्माकं विद्यालये नाटकस्पर्धा भवति स्म । अस्माकं विद्यालयः ११ परिसरात्मकस्य विश्वविद्यालयस्य कश्चन परिसरः (शृङ्गेरीपरिसरः) । प्रतिपरिसरम् एकैकः नाटकगणः देहलीं गच्छति स्म । तत्र एकहोरात्मकं नाटकं प्रदर्श्यते स्म । अन्ते पुरस्काराः च भवन्ति स्म । प्रतिपरिसरम् एकः गणः गच्छति इति सामान्यतः उपदशाः गणाः नाट्यस्पर्धायां भवन्ति स्म । तेषु पञ्चषाणां गणानां नाटकप्रदर्शनम् उत्कृष्टं भवति स्म । कांश्चन गौणान् अंशान् अविगणय्य पश्यामः चेत् वृत्तिपरगणानां नाटकप्रदर्शनवत् छात्राणामपि नाटकगणस्य प्रदर्शनं भवति स्म । अस्माकं विश्वविद्यालयपक्षतः अपि नाटकानि उत्कृष्टानि भवेयुः इति आशयः आसीत् । संस्कृतभाषया प्राचीनकविभिः रचितानि नाटकानि सुन्दरतया मञ्चे प्रदर्शितानि भवेयुः इति आयोजकानां उद्देश्यमपि आसीत् । अहं तु नटने नितराम् अकुशलः । तथापि नाटकस्पर्धायां वर्षत्रयं यावत् मया भागः गृहीतः ।

नाटके नटन्तः कुशीलवाः तदन्वर्थनामानः एव भविष्यन्ति इति अनेकेषां ज्येष्ठानाम् आक्षेपः नाटकविषये भवति स्म  (कुत्सितं शीलं येषां ते कुशीलवाः इति कुशीवलव पदस्य व्युत्पत्तिः)।  नटनचतुराणां जनानां स्वाभाविकतया वाचालता, शरीरसौन्दर्यं च भवत्येव । ते स्त्रीपुम्भेदं विना समानरूपेण सर्वैः सह मैत्रीं सम्पादयन्ति । अतः व्यवहारमेव दर्शयन्तः ज्येष्ठाः नटेषु कुशीलवत्वम् आरोपयन्ति स्म ।  नाटकाभ्यासे रताः पठनमानसिकतां सर्वथा त्यजन्तीति अनेकेषाम् आरोपः । वर्षद्वयं सम्यक् पठितवान् छात्रः यदा नाटकं प्रविष्टः तत आरभ्य सम्यक् न पठति इति उदाहरणमपि ते दर्शयन्ति ।  एवं सति नाटककरणेन न कोऽपि लाभः, हानिरेव अधिका इति तेषां उद्घोषः सत्यमित्यपि भासते ।

अस्य कारणान्यपि सन्ति । युवावस्थायां मनः चञ्चलं भवति । नाटकस्य विलासः छात्रान् पठनविमुखान् करोति । अस्माकं विद्यालये  प्रायेण मासं यावत्  सायं ४ तः ६.३० वादनपर्यन्तं, शनिरविवासरयोः सम्पूर्णदिनम्, अन्तिमेषु दशसु दिनेषु पुनरपि सम्पूर्णदिनं नाटकाभ्यासः प्रवर्तते स्म ।  देहलीगमनागमनाय १० दिनानि  च याप्यन्ते स्म । सार्धैकमासं यावत् नाटके निमग्नस्य छात्रस्य पठने मतिः कथं भवेत् ? छात्रस्तु नाटके मम प्रदर्शनम् उत्तमं कर्तुमहं कथं प्रयतेय इत्येव चिन्तयति स्म । पठनविषये तस्य मतिरेव न भवति स्म ।

एतदस्माभिः अन्यया दृष्ट्या अपि द्रष्टव्यम् । नाटकानि तु महाकविप्रणीतानि । नानृषिः कुरुते काव्यम् । तादृशानां नाटकानाम् अध्ययनाय रङ्गे प्रदर्शनाय च लभ्यमानः सु-अवसरः वस्तुतः छात्रैः न हातव्यः । नाटकतः प्रयोजनं प्राप्तवन्तः अङ्गुलिमेयाः छात्राः विद्यन्ते एव । नाटकं पाठयितुम् आगतवतां ज्येष्ठानां द्वारा अनेकान् विषयान् पठित्वा अन्यत्रापि तस्य उपयोगं प्राप्तवन्तः । स्वनटनकौशले वृद्धिमपि प्राप्तवन्तः । नाटकप्रयोगावलोकनेन स्वभाषां सुन्दरीमपि कृतवन्तः ।

मम  कथा तु सर्वथा भिन्ना । मम नटने रुचिः सामर्थ्यं च शून्यम् । परन्तु नाटके अभिरुचिः तु आसीदेव । अलङ्कारशास्त्रं पठतः मम तत्र आसक्तिः सहजा । नाटकगणे विद्यमानाः सर्वेऽपि मम आत्मीयमित्राणि । अतः वर्षत्रयं यावत् नाटकगणेन सह अहमपि गतवान् । नाटकगणस्य रङ्गमञ्चसज्जता, वस्तूनां क्रयणम् इत्यादिषु अहं साहाय्यम् आचरामि स्म । अभ्याससमये अहमपि तत्स्थले उपतिष्ठे स्म । अतः सर्वा अपि नाटकपङ्क्तयः मम कण्ठे भवन्ति स्म । यत्र कुत्रचित् अभिनयानुगुण्येन नाट्यपङ्क्तौ व्यत्ययः क्रियते चेत् तत्रापि मूलकविना लिखितं किम् अस्ति, किमर्थमत्र परिवर्तनं कृतं इत्येतान् अंशान् एकाकी एव विमृशामि स्म ।


एतादृशप्रयोजनं यदि सर्वे प्राप्स्यन्त नाटकविषये दूषणम् अन्येषां नाभविष्यत् । नाटकार्थम् आगच्छतां तु नटने एव आसक्तिः । एतादृशाः विषयाः तेषां दृष्ट्या गौणाः । नाटकात् व्युत्पत्तिं सम्पादयितुं कोऽपि न आगच्छति । नटः नाटकद्वारा व्युत्पत्तिं सम्पादयेत् इति अपेक्षा अपि अनुचिता स्यात् ।  तथापि नटनसमये आनुषङ्गिकरूपेण लभ्याः कतिचन विचाराः कदापि न त्यक्तव्याः । परन्तु बहुभिस्त्यज्यते इति खेदाय ।

अहं कर्पूरमञ्जरी, भगवदज्जुकम्, पण्डितराजीयम् इति नाटकत्रयं यदा अभिनीतं तेषु गणेषु आसम् । तदानीं श्रुताः रमणीयाः नाट्योक्तयः काश्चन इदानीमपि स्मर्यन्ते । कदाचित् शङ्करराजाराममहोदयेन सह सम्भाषणावसरे तेन भगवदज्जुकप्रहसनविषये किञ्चिदुक्ते अहमपि सर्वं स्मृत्वा तेन सह कतिचन विचारान् संविभक्तुम् अशकम् । कस्यचित् महाकवेः पुरस्तात् मम मुखरत्वे नाटकम् एव कारणम् अभवत् ।

परन्तु बहवः एवं न चिन्तयन्ति इत्येव नाटकस्य, तथा चिन्तयतां च अधोगतौ कारणम् । अहं कस्यचित् नाट्यगणे सक्रियस्य मित्रस्य गृहं गतवान् । नाटकदिनानि स्मृतानि । भवता अमुकपात्रं सम्यक् निरूढम् इति मयोक्ते कस्मिन् नाटके इति तत्र विद्यमानः अपरः अपृच्छत् । सः नाटकनाम स्मर्तुं नाशकत् । अहं भगवदज्जुकम् इति उक्तवान् । भगवदज्जुकम् इति नाम श्रुत्वा सः रोमाञ्चितः स्यादिति अहम् अचिन्तयम् । परन्तु  सः तदेव । यत्किञ्चित् नाटकम् आसीत् इति अवज्ञया अवदत् । मम तु नाटकानां नामानि स्मरामि चेदेव तत्रत्यानां रमणीयांशानां स्मरणेन रोमाञ्चः भवति । नाटके पात्रं सम्यक् निरूढवतः अपि तस्य नाटकनामविषये ईदृशीम् अवज्ञां दृष्ट्वा, नाटकविषये या अवज्ञा ज्येष्ठैः विद्यालये क्रियते सा समीचीना एव इत्यभासत । नटाः नाटके मम आसक्तिरस्तीति नाटकमेव अकुर्वन् इत्यपि मतिरुत्पन्ना ।


ನಾನು ಓದುತ್ತಿರುವಾಗ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ನಾಟಕಸ್ಪರ್ಧೆ ನಡೆಯುತ್ತಿತ್ತು. ನಮ್ಮ ಕಾಲೇಜು ಹನ್ನೊಂದು ಕ್ಯಾಂಪಸ್ ಗಳನ್ನು ಹೊಂದಿರುವ ವಿಶ್ವವಿದ್ಯಾಲಯದ ಒಂದು ಕ್ಯಾಂಪಸ್ (ಶೃಂಗೇರೀ ಪರಿಸರ). ದೆಹಲಿಯಲ್ಲಿ ನಡೆಯುತ್ತಿದ್ದ ನಾಟಕಸ್ಪರ್ಧೆಯಲ್ಲಿ ಪ್ರತಿ ಕಾಲೇಜಿನಿಂದ ಒಂದೊಂದು ತಂಡ ಭಾಗವಹಿಸುತ್ತಿತ್ತು. ಹೀಗೆ ಹತ್ತಾರು ತಂಡಗಳು ತಲಾ ಒಂದು ಗಂಟೆಯ ನಾಟಕಪ್ರದರ್ಶನವನ್ನು ನೀಡುತ್ತಿದ್ದವು. ಸುಮಾರು ಐದಾರು ತಂಡಗಳ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತಿತ್ತು. ಕೆಲವು ಅಂಶಗಳನ್ನು ಬಿಟ್ಟರೆ ನೀನಾಸಂನಂತಹ ವೃತ್ತಿಪರ ತಂಡಗಳು ಪ್ರದರ್ಶಿಸುವ ನಾಟಕದಂತೆಯೇ ವಿದ್ಯಾರ್ಥಿಗಳ ನಾಟಕಪ್ರದರ್ಶನಗಳಿರುತ್ತಿದ್ದವು. ಸಂಸ್ಕೃತದಲ್ಲಿ ಪ್ರಾಚೀನ ಕವಿಗಳು ಬರೆದಂತಹ ನಾಟಕಗಳು ಸುಂದರವಾಗಿ ರಂಗದಲ್ಲಿ ಪ್ರಸ್ತುತಿಗೊಳಪಡಬೇಕು ಎಂಬುವುದು ಆಯೋಜಕರ ಉದ್ದೇಶವಾಗಿತ್ತು.  ಅಭಿನಯದಲ್ಲಿ ಕುಶಲತೆಯಿಲ್ಲದಿದ್ದರೂ ನಾನು ಮೂರುವರ್ಷ ನಾಟಕದಲ್ಲಿ ಭಾಗವಹಿಸಿದ್ದೆ.

 

ಸಂಸ್ಕೃತದಲ್ಲಿ ನಟ ಎಂಬ ಪದಕ್ಕೆ ಕುಶೀಲವ ಎಂಬ ಪರ್ಯಾಯ ಪದವಿದೆ. ನಡತೆಗೆಟ್ಟವರೇ ನಟರು ಎಂಬುವುದು ಕುಶೀಲವ ಪದದ ಅರ್ಥ. ಕಾಲೇಜಿನಲ್ಲಿ ನಾಟಕದಲ್ಲಿ ಭಾಗವಹಿಸುವವರೆಲ್ಲಾ ನಿಜಾರ್ಥದಲ್ಲಿ ಕುಶೀಲವರೇ ಎಂಬುವುದು ಕಾಲೇಜಿನ ಅನೇಕ ಹಿರಿಯರ ಅಭಿಪ್ರಾಯವಾಗಿತ್ತು. ನಟನೆಯಲ್ಲಿ ಚತುರರಾಗಿರುವವರು ಚಂದದ ರೂಪವುಳ್ಳವರೂ, ಮೋಹಕ ಮಾತುಗಳನ್ನಾಡುವವರೂ ಆಗಿರುವುದು ಸಹಜ. ಸ್ತ್ರೀ-ಪುರುಷರೆಂಬ ಭೇದವಿಲ್ಲದೇ ಎಲ್ಲರಲ್ಲಿಯೂ ಚೆನ್ನಾಗಿಯೇ ಸ್ನೇಹ ಸಂಪಾದಿಸಿರುತ್ತಾರೆ. ಆದ್ದರಿಂದ ಇವರ ವ್ಯವಹಾರವನ್ನು ಉದಾಹರಣೆಯನ್ನಾಗಿಸಿಕೊಂಡು ಹಿರಿಯರು ನಟರೆಲ್ಲಾ ಕುಶೀಲವರು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ನಾಟಕದಲ್ಲಿ ಆಸಕ್ತರಾದರೆ ಓದಿನ ಬಗ್ಗೆ ಗಮನ ಹರಿಸುವುದಿಲ್ಲ ಎಂಬುವುದು ಇನ್ನೊಂದು ಆರೋಪ. ಎರಡು ವರ್ಷಗಳ ಕಾಲ ಚೆನ್ನಾಗಿ ಓದಿದ ವಿದ್ಯಾರ್ಥಿ ನಾಟಕವನ್ನಾರಂಭಿಸಿದ ಕೂಡಲೇ ಓದಿನಲ್ಲಿ ಹಿಂದುಳಿಯುತ್ತಾನೆ ಎಂಬುವುದಕ್ಕೆ ಅನೇಕ ಉದಾಹರಣೆಗಳನ್ನು ತೋರಿಸುತ್ತಾರೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದರಿಂದ ಹಾನಿಯೇ ಹೆಚ್ಚಲ್ಲದೇ ಲಾಭವೇನೂ ಇಲ್ಲ ಎಂಬ ಅನೇಕರ ಅಭಿಪ್ರಾಯ ಸರಿಯೆಂದೇ ಕಾಣುತ್ತದೆ.  

 

ಹೀಗಾಗುವುದಕ್ಕೆ ಕಾರಣಗಳೂ ಅನೇಕ. ಯೌವನ ಕಾಲದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ನಾಟಕದಲ್ಲಿ ವಿವಿಧ ವಿಲಾಸಗಳನ್ನು ಕಾಣುವ ವಿದ್ಯಾರ್ಥಿಗಳು ಓದಿನಿಂದ ವಿಮುಖರಾಗುತ್ತಾರೆ. ನಮ್ಮ ಕಾಲೇಜಿನಲ್ಲಿ ಸುಮಾರು ಒಂದು ತಿಂಗಳ ಕಾಲ ಸಂಜೆ ೪ ರಿಂದ ೬.೩೦ ರ ತನಕ, ಶನಿವಾರ ಭಾನುವಾರಗಳಂದು ಇಡೀ ದಿವಸ, ಕೊನೆಯ ಹತ್ತು ದಿನಗಳ ಕಾಲವೂ ಇಡೀ ದಿವಸ ನಾಟಕದ ಅಭ್ಯಾಸ ನಡೆಯುತ್ತಿತ್ತು. ದೆಹಲಿಗೆ ಹೋಗಿ ಬರಲು ಹತ್ತು ದಿನಗಳಾಗುತ್ತಿದ್ದವು. ಹೀಗೆ ಸುಮಾರು ಒಂದುವರೆ ತಿಂಗಳ ಕಾಲ ನಾಟಕದ ಗುಂಗಿನಲ್ಲಿದ್ದ ವಿದ್ಯಾರ್ಥಿಗೆ ಪುನಃ ಓದಿನ ವಾತಾವರಣಕ್ಕೆ ಮರಳಲು ಕಷ್ಟವಾಗುತ್ತಿತ್ತು. ಒಂದುವರೆ ತಿಂಗಳ ಕಾಲ ಸಮಗ್ರ ಸಮಯವನ್ನೂ ನಾಟಕದಲ್ಲಿ ನನ್ನ ಪ್ರದರ್ಶನ ಉತ್ತಮವಾಗಲು ಏನು ಮಾಡಬೇಕು ಎಂಬ ಯೋಚನೆಯಲ್ಲಿಯೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದರು.

 

ಇದೇ ವಿಚಾರವನ್ನು ಇನ್ನೊಂದು ದೃಷ್ಟಿಕೋನದಿಂದಲೂ ಯೋಚಿಸಬೇಕಾಗುತ್ತದೆ. ನಾಟಕಗಳನ್ನು ಬರೆದವರೆಲ್ಲರೂ ಋಷಿಸಮಾನರಾದ ಕಾಲಿದಾಸ, ಭಾಸ ಮೊದಲಾದ ಮಹಾಕವಿಗಳು. ಅಂತಹ ಮಹಾಕವಿಗಳು ಬರೆದ ನಾಟಕಗಳನ್ನು ಅಭಿನಯಿಸುವ, ಅಭ್ಯಸಿಸುವ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಕೈಚೆಲ್ಲಬಾರದು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಾದರೂ ನಾಟಕದಿಂದ ಲಾಭಾನ್ವಿತರಾಗಿದ್ದಾರೆ ಎಂಬುವುದನ್ನೂ ಗಮನಿಸಬೇಕು. ನಾಟಕವನ್ನು ನಿರ್ದೇಶಿಸಲು ಬಂದ ಹಿರಿಯರಿಂದ ಅನೇಕ ವಿಚಾರಗಳನ್ನು ಕಲಿತು, ಬೇರೆ ಕಡೆಗಳಲ್ಲೂ ಅದರ ಉಪಯೋಗ ಮಾಡಿಕೊಳ್ಳಬಹುದು. ತನ್ನ ಅಭಿನಯಕೌಶಲವನ್ನು ಹೆಚ್ಚಿಸಿಕೊಳ್ಳಬಹುದು. ನಾಟಕಗಳಲ್ಲಿ ಭಾಷೆಯ ಬಗ್ಗೆ ಗಮನ ಹರಿಸುವುದರಿಂದ ಸಂಸ್ಕೃತ ಭಾಷೆಯ ಬಳಕೆಯಲ್ಲಿ ಉತ್ಕೃಷ್ಟತೆಯನ್ನೂ ಸಾಧಿಸಬಹುದು.

 

ನನ್ನ ವಿಚಾರವನ್ನು ಹೇಳುವುದಾದರೆ ಅಭಿನಯದಲ್ಲಿ ಕುಶಲತೆಯೂ ಆಸಕ್ತಿಯೂ ನನಗಿಲ್ಲ. ಆದರೆ ನಾಟಕದಲ್ಲಿ ಅಭಿರುಚಿಯಿತ್ತು. ಅಲಂಕಾರ ಶಾಸ್ತ್ರದ ವಿದ್ಯಾರ್ಥಿಯಾದ ನನಗೆ ನಾಟಕದ ಕಡೆಗಿನ ಒಲವು ಸಹಜವೇ. ಅಲ್ಲದೇ ನಾಟಕದಲ್ಲಿ ನಟಿಸುವವರೆಲ್ಲಾ ನನ್ನ ಆತ್ಮೀಯ ವಲಯದವರು. ಈ ಎಲ್ಲಾ ಕಾರಣಗಳಿಂದ ಮೂರು ವರ್ಷ ನಾಟಕ ಸ್ಪರ್ಧೆಯ ತಂಡದೊಂದಿಗೆ ನಾನೂ ಇದ್ದೆ. ನಾಟಕಕ್ಕೆ ವೇದಿಕೆಯ ಸಿದ್ಧತೆ, ವಸ್ತುಗಳನ್ನು ಕೊಳ್ಳುವುದು ಮೊದಲಾದ ಕೆಲಸಗಳನ್ನು ನಾಟಕ ತಂಡದೊಂದಿಗಿದ್ದು ಮಾಡುತ್ತಿದ್ದೆ. ಅಭ್ಯಾಸದ ಸಮಯದಲ್ಲಿ ನಾನೂ ನಾಟಕವನ್ನು ನೋಡುತ್ತಿದ್ದೆ. ಆದ್ದರಿಂದ ನಾಟಕದ ಬಹುಪಾಲು ಸಂಭಾಷಣೆಗಳು ನನಗೆ ಕಂಠಸ್ಥವಾಗಿರುತ್ತಿದ್ದವು. ಅಭಿನಯಕ್ಕನುಗುಣವಾಗಿ ಮೂಲಕವಿಯ ಸಾಲುಗಳನ್ನು ಬದಲಾಯಿಸಿದ್ದರೆ, ಬಿಟ್ಟಿದ್ದರೆ ಮೂಲವನ್ನು ಓದಿ ಯಾಕೆ, ಹೇಗೆ ಪರಿವರ್ತನೆ ಮಾಡಲಾಗಿದೆ ಎಂದು ಒಬ್ಬನೇ ಮನಸ್ಸಿನಲ್ಲೇ ವಿಶ್ಲೇಷಿಸುತ್ತಿದ್ದೆ.

 

ಇಂತಹ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡಿದ್ದರೆ ಹಿರಿಯರು ನಾಟಕವನ್ನು ನಿಂದಿಸುತ್ತಿರಲಿಲ್ಲವೇನೋ. ನಾಟಕದಲ್ಲಿ ಭಾಗವಹಿಸುತ್ತಿದ್ದವರ ಆಸಕ್ತಿ ಅಭಿನಯದಲ್ಲೂ, ವಿಲಾಸಗಳಲ್ಲೂ ಮಾತ್ರ ಇರುತ್ತಿತ್ತು. ನಾಟಕದಲ್ಲಿರುವ ಭಾಷಾಸ್ವಾರಸ್ಯವನ್ನೋ, ವಿಷಯಸ್ವಾರಸ್ಯವನ್ನೋ ಪಡೆದುಕೊಳ್ಳಬೇಕು ಎಂಬ ಹಂಬಲದಿಂದ ಯಾರೂ ನಾಟಕತಂಡಕ್ಕೆ ಸೇರುತ್ತಿರಲಿಲ್ಲ. ಒಳ್ಳೆಯ ಅಭಿನಯಸಾಮರ್ಥ್ಯವಿರುವ ನಟನೊಬ್ಬ ನಾಟಕದಿಂದ ಇಂತಹ ಪ್ರಯೋಜನಗಳನ್ನು ಮಾಡಿಕೊಳ್ಳಬೇಕು ಎಂದು ಹೇಳುವುದೂ ತಪ್ಪಾಗಬಹುದು. ಆದರೆ ನಾಟಕದಿಂದ ಸುಲಭವಾಗಿ ಸಿಗುವ ಇಂತಹ ಅನೇಕ ಪ್ರಯೋಜನಗಳನ್ನು ವ್ಯರ್ಥವಾಗಿಸುತ್ತಾರೆ ಎಂಬುವುದೇ ಖೇದದ ಸಂಗತಿ.

 

ಕರ್ಪೂರಮಂಜರೀ, ಭಗವದಜ್ಜುಕ, ಪಂಡಿತರಾಜೀಯ ಎಂಬ ಮೂರು ನಾಟಕಗಳ ತಂಡಗಳೊಂದಿಗೆ ನಾನಿದ್ದೆ. ಆ ನಾಟಕಗಳ ಅಭ್ಯಾಸದ ಸಂದರ್ಭದಲ್ಲಿ ಕೇಳಿದ ಹಲವು ಸುಂದರ ಸಂಭಾಷಣೆಗಳು ಈಗಲೂ ಸ್ಮೃತಿಪಥದಲ್ಲಿವೆ. ಸದ್ಯ ಸಂಸ್ಕೃತ ಕ್ಷೇತ್ರದಲ್ಲಿ ಮಹಾಕವಿಯಾದ ಶಂಕರ ರಾಜಾರಾಮನ್ ಅವರೊಂದಿಗೆ ಮಾತನಾಡುತ್ತಿರುವಾಗ ಅವರು ಭಗವದಜ್ಜುಕ ನಾಟಕದ ವಿಚಾರವನ್ನು ಪ್ರಸ್ತಾಪಿಸಿದರು. ನಾನೂ ಕೂಡಾ ಅಲ್ಲಿನ ಸಂಭಾಷಣೆಗಳನ್ನು ನೆನಪಿಸಿಕೊಂಡು ಕೆಲವೊಂದು ವಿಚಾರಗಳನ್ನು ಹಂಚಿಕೊಂಡೆ. ಒಬ್ಬ ಮಹಾಕವಿಯ ಮುಂದೆ ಮುಕ್ತವಾಗಿ ಮಾತನಾಡಲು ಅವಕಾಶವಾದುದು ನಾಟಕದ ಕಾರಣದಿಂದಲೇ ಎಂಬುವುದರಲ್ಲಿ ಸಂದೇಹವಿಲ್ಲ.

 

ಅನೇಕರು ಹೀಗೆ ಯೋಚಿಸುವುದಿಲ್ಲ ಎಂಬುವುದೇ ನಾಟಕದ ಹಾಗೂ ನಟರ ಅಧೋಗತಿಗೆ ಕಾರಣವಾಗಿರಬಹುದು. ನಾಟಕದ ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಗೆಳೆಯನ ಮನೆಗೆ ತೆರಳಿದ್ದೆ. ಮಾತಿನ ಮಧ್ಯೆ ನೀನು ಇಂತಹ ಪಾತ್ರವನ್ನು ಚೆನ್ನಾಗಿ ಮಾಡಿದ್ದೆ ಎಂದು ನೆನಪಿಸಿದೆ. ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಯಾವ ನಾಟಕದಲ್ಲಿ? ಎಂದು ಕೇಳಿದ. ಆತನಿಗೆ ನೆನಪೇ ಆಗಲಿಲ್ಲ. ಜೀವನದ ಜಂಜಾಟದಲ್ಲಿ ತೊಡಗಿಕೊಂಡ ಮೇಲೆ ನಾಟಕವನ್ನು ನೆನಪಿಟ್ಟುಕೊಳ್ಳಬೇಕು ಎಂದರೆ ಅದು ಸಾಧ್ಯವಿಲ್ಲ. ನಾನೇ ಭಗವದಜ್ಜುಕ ನಾಟಕದಲ್ಲಿ ಎಂದು ನೆನಪಿಸಿದೆ. ನಾಟಕದ ಹೆಸರನ್ನು ಕೇಳಿದ ಕ್ಷಣದಲ್ಲೇ ಆತ ರೋಮಾಂಚಿತನಾಗುತ್ತಾನೆ ಎಂಬುವುದು ನನ್ನ ಊಹೆಯಾಗಿತ್ತು. ಆದರೆ ಅದೇ ಯಾವುದೋ ನಾಟಕದಲ್ಲಿ ಎಂದು ಹೇಳಿ ಅತ್ಯಂತ ಉಪೇಕ್ಷಾಭಾವವನ್ನು ಸೂಚಿಸಿದ. ನನಗಂತೂ ನಾಟಕದ ಹೆಸರನ್ನು ಕೇಳಿದಾಗಲೇ ಅಲ್ಲಿರುವ ಸುಂದರ ಸಂಭಾಷಣೆಗಳು ನೆನಪಾಗಿ ರೋಮಾಂಚನವಾಗುತ್ತದೆ. ನಾಟಕದಲ್ಲಿ ಚೆನ್ನಾಗಿ ಪಾತ್ರ ಮಾಡಿದ ನಟನೇ ನಾಟಕದ ಬಗೆಗೆ ಈ ರೀತಿಯಾದ ಉಪೇಕ್ಷೆಯನ್ನು ತೋರಿದರೆ ಅಭಿನಯದ ಗಂಧಗಾಳಿಯಿಲ್ಲದ  ಕೆಲವು ಪ್ರಾಧ್ಯಾಪಕರು ನಾಟಕವನ್ನು ಹೀನವಾಗಿ ಕಾಣುವುದು ತಪ್ಪಲ್ಲವಲ್ಲ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...