ಗುರುವಾರ, ಮಾರ್ಚ್ 11, 2021

ಮಾತೃಭಾಷಾ ವಿನಾಶ

ವಿಶ್ವದಲ್ಲಿ ಅನೇಕ ಭಾಷೆಗಳು ನಶಿಸಿ ಹೋಗುತ್ತಿವೆ ಎಂಬ ಕೂಗು ಕೇಳಿಬರುತ್ತಿವೆ. ಭಾಷೆಗಳ ನಾಶಕ್ಕೆ ಆಧುನಿಕತೆಯೇ ಮುಖ್ಯ ಕಾರಣ ಎಂಬುವುದಂತೂ ಸತ್ಯ. ಇವುಗಳೊಂದಿಗೆ ತಮ್ಮ ಭಾಷೆಯ ಮೇಲಿರುವ ದುರಭಿಮಾನ ಇತರ ಭಾಷೆಯ ಮೇಲಿರುವ ಸದಭಿಮಾನವೂ ಕಾರಣವಾಗುತ್ತದೆ. ನನ್ನ ಮಾತೃಭಾಷೆ ಗ್ರಾಮೀಣ ಭಾಷೆ. ಆ ಭಾಷೆ ಕೀಳು. ಆ ಭಾಷೆಯನ್ನು ಬಿಟ್ಟು ಎಲ್ಲಾ ಕಡೆಯೂ ಮಾನ್ಯವಾಗಿರುವ ಇಂಗ್ಲಿಷಿನಲ್ಲಾಗಲೀ ಅಥವಾ ಇನ್ಯಾವುದೇ ಭಾಷೆಯಲ್ಲಾಗಲೀ ಮಾತನಾಡಬೇಕು ಎಂಬುವುದು ಹಲವರ ಅಭಿಪ್ರಾಯ. ಇಂಗ್ಲಿಷಿನಲ್ಲಿ ಸಂಪೂರ್ಣ ವಾಕ್ಯವನ್ನಾಡುವ ಸಾಮರ್ಥ್ಯವಿಲ್ಲದಿದ್ದರೂ ವಾಕ್ಯದ ಮಧ್ಯದಲ್ಲಿ ಇಂಗ್ಲಿಷ್ ಪದಗಳನ್ನು ಸೇರಿಸಲೇಬೇಕೆಂದು ಕಠಿಣ ಪರಿಶ್ರಮ ಪಡುತ್ತಾರೆ. ಬರುಬರುತ್ತಾ ಇಂಗ್ಲಿಷ್ ಪದಗಳ ಬಳಕೆ ಸಹಜವಾಗಿ ಮಾತೃಭಾಷೆಯಲ್ಲಿನ ಪದಗಳು ಮರೆತು ಮೂಲೆ ಸೇರುತ್ತವೆ. 

ಇಂಗ್ಲಿಷ್ ಭಾಷೆಯ ಪ್ರಭಾವ ಎಂದಲ್ಲ, ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಭಾಷೆಯನ್ನು ನಾನು ಮಾತನಾಡಲೇ ಬಾರದು, ನನ್ನ ಮಕ್ಕಳು ಅದನ್ನು ಕೇಳಲೂಬಾರದು ಎಂಬ ಅಭಿಪ್ರಾಯ ಅನೇಕ ಪೋಷಕರಿಗಿದೆ. ನನ್ನ ಮಿತ್ರನೊಬ್ಬ ಉತ್ತರಪ್ರದೇಶದ ಹಳ್ಳಿಯವನು. ಆತನ ಮಾತೃಭಾಷೆ ಭೋಜಪುರೀ. ಆತನ ಹೆಂಡತಿಯದ್ದೂ ಭೋಜಪುರಿಯೇ. ನನ್ನ ಮಗ ಭೋಜಪುರಿಯನ್ನು ಕಲಿಯಬಾರದು ಹಿಂದಿಯಲ್ಲೇ ಮಾತನಾಡಬೇಕು ಎಂಬುವುದು ಆತನ ಬಯಕೆ. ಹೀಗೆಯೇ ತನ್ನ ಮಗನನ್ನು ಬೆಳೆಸುತ್ತಿದ್ದಾನೆ ಕೂಡಾ.

ಸಾಮಾನ್ಯವಾಗಿ ಮಾತೆಯರು ಮಾತನಾಡುವುದು ಹೆಚ್ಚು. ಅರಳು ಹುರಿದಂತೆ ಮಾತನಾಡುವ ಅವರ ಪ್ರಭಾವ ಮನೆಯಲ್ಲಿ ಖಂಡಿತವಾಗಿಯೂ ಆಗುತ್ತದೆ. ನನ್ನ ತಾಯಿಯಾಗಲೀ,  ಅನೇಕ ಅನಕ್ಷರಸ್ಥ ತಾಯಂದಿರಾಗಲೀ ಮಾತನಾಡುವುದನ್ನು ಕೇಳುವುದೇ ಒಂದು ಸೊಗಸು. ಅವರು ತಮ್ಮ ಮಾತೃಭಾಷೆಯಲ್ಲಿ ಭಾವವನ್ನು ಪ್ರಕಟಿಸುವಾಗ ಅದ್ಭುತವಾದ ಅನುಭೂತಿ ಕೇಳುಗರಿಗೂ ಆಗುತ್ತದೆ. ಅದೇ ಮಾತೃಭಾಷೆಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವಾಗ ಕೃತ್ರಿಮತೆಯ ಅನುಭವವಾಗುತ್ತದೆ. ಅನೇಕ ವಿಶಿಷ್ಟ ಪದಗಳನ್ನಾಗಲೀ, ವಾಕ್ಯರಚನಾ ಶೈಲಿಯನ್ನಾಗಲೀ, ಧ್ವನಿಯ ಏರಿಳಿತವನ್ನಾಗಲೀ  ಮಕ್ಕಳು ಕಲಿಯುವುದು ತಾಯಿಯಿಂದಲೇ. ಆದ್ದರಿಂದ ತಾಯಿಯೊಬ್ಬಳು ಚೆನ್ನಾಗಿ ಮಾತನಾಡಿದರೆ ಭಾಷೆ ಉಳಿಯುತ್ತದೆ ಎಂದು ಹೇಳಬಹುದು.

ಆದರೆ ಈಗ ತದ್ವಿರುದ್ಧವಾದ ವಾತಾವರಣ ಕಂಡುಬರುತ್ತಿದೆ. ಸ್ವಲ್ಪ ಆಧುನಿಕತೆಯ ಕಡೆಗೆ ವಾಲಿದರೆ ಸಾಕು ಹುಡುಗಿಯರು (ಮುಂದೆ ತಾಯಿಯಾಗಲಿರುವವರು) ತಮ್ಮ ಮಾತೃಭಾಷೆಯಿಂದ ದೂರವಾಗುತ್ತಾರೆ. ಅನೇಕರು ಪ್ರಯತ್ನಪೂರ್ವಕವಾಗಿ ಇದನ್ನು ಸಾಧಿಸಿದರೆ ಕೆಲವರು ಸಹಜವಾಗಿಯೇ ತಮ್ಮದಲ್ಲದ ಭಾಷೆಯನ್ನು ತಮ್ಮದನ್ನಾಗಿಸಿಕೊಳ್ಳುತ್ತಾರೆ. ಎಲ್ಲವನ್ನೂ ತಮ್ಮದನ್ನಾಗಿಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮಹಿಳೆಯರ ಸ್ವಭಾವ ಭಾಷಾಭಿವೃದ್ಧಿಯ ವಿಷಯದಲ್ಲಿ ತೊಡಕಿಗೆ ಕಾರಣವಾಗಿದೆ.

ನಾನು ಓದಿದ ಶಾಲಾ ಕಾಲೇಜುಗಳಲ್ಲಿ ನನ್ನ ಮಾತೃಭಾಷೆಯನ್ನಾಡುವ ಸಹಪಾಠಿಗಳೇ ಇರಲಿಲ್ಲ. ನನ್ನ ಮನೆಯವರನ್ನು ಬಿಟ್ಟರೆ ಮಾತೃಭಾಷೆಯನ್ನಾಡುವ ಆತ್ಮೀಯರಾರೂ ಇರಲಿಲ್ಲ. ಫೋನ್ ಸಂಪರ್ಕ ಸರಿಯಿಲ್ಲದಿದ್ದಾಗ ವಾರಗಟ್ಟಲೇ ಮಾತೃಭಾಷೆಯ ಒಂದೇ ಒಂದು ಶಬ್ದವೂ ನನ್ನ ಬಾಯಿಂದ ಹೊರಬರದ ಸ್ಥಿತಿಯೂ ಇತ್ತು. ಆದ್ದರಿಂದ ನನ್ನ ಮಾತೃಭಾಷೆಯ ಸೊಗಡನ್ನು ನಾನು ಉಳಿಸಿಕೊಳ್ಳಲಾಗಲಿಲ್ಲ. ಆದರೂ ಕೂಡಾ ನೀನು ಚೆನ್ನಾಗಿ ಚಿತ್ಪಾವನಿ ಭಾಷೆ ಮಾತನಾಡುತ್ತೀ ಎಂದು ಕೆಲವರಿಂದಾದರೂ ಹೇಳಿಸಿಕೊಂಡ ತೃಪ್ತಿಯಿದೆ. ನನ್ನ ಸಹಪಾಠಿಗಳಲ್ಲಿ ಅನೇಕರು ಉತ್ತರಕನ್ನಡದ ಹವ್ಯಕರು. ಆದ್ದರಿಂದ ಹವ್ಯಕ ಭಾಷೆಯನ್ನು ತುಂಬಾ ಕೇಳಿದ್ದೇನೆ. ಮಾತನಾಡುವ ಸಾಮರ್ಥ್ಯವಿಲ್ಲದಿದ್ದರೂ ಪ್ರತಿ ಪದದ ಅರ್ಥವನ್ನಷ್ಟೇ ಅಲ್ಲದೇ ಭಾವವನ್ನೂ ಆಸ್ವಾದಿಸುವಷ್ಟು ಹವ್ಯಕ ಭಾಷೆಯ ಜ್ಞಾನವಿದೆ. ಇದಕ್ಕೆ ಕಾರಣ ನನ್ನ ಮಿತ್ರರೆಂದೇ ಹೇಳಬೇಕು.

ನನ್ನ ಮಿತ್ರರಲ್ಲಿ ಅನೇಕ ಹುಡುಗಿಯರೂ ಇದ್ದರು.  ಅವರು ಹವ್ಯಕ ಭಾಷೆಯಾಡುವುದನ್ನು ಕೇಳಿದಾಗ ನನಗೇ ದುಃಖವಾಗುತ್ತಿತ್ತು. ಅವರು ಮಾತನಾಡುವಾಗ ಇಂಗ್ಲಿಷಿನ ಈ ಪದಕ್ಕೆ ಹವ್ಯಕ ಭಾಷೆಯಲ್ಲಿ ಇಂತಹ ಸೊಗಸಾದ ಪದವಿದೆ, ಕನ್ನಡದ ಈ ಪದಕ್ಕಿಂತ ಹವ್ಯಕ ಭಾಷೆಯ ಈ ಪದವನ್ನು ಆಡಬೇಕಿತ್ತು. ಎಂದೆಲ್ಲಾ ಅನಿಸಿದ್ದಿದೆ.  (Quick, meet, ಪುನಃ, ಸ್ವಲ್ಪ ಎಂಬ ಪದಗಳಿಗೆಲ್ಲಾ ಹವ್ಯಕ ಭಾಷೆಯಲ್ಲಿ ಸುಂದರವಾದ ಪದಗಳಿವೆ) ಐದಾರು ವರ್ಷಗಳಲ್ಲಿ ಮಿತ್ರರ ಒಡನಾಟದಿಂದ ಹವ್ಯಕವನ್ನು ಕಲಿತ ನನಗೇ ಹೀಗನಿಸುತ್ತಿರಬೇಕಾದರೆ ಹುಟ್ಟಿನಿಂದ ಹವ್ಯಕವನ್ನೇ ಆಡುತ್ತಿರುವ ಇವರು ಸಹಜವೆಂಬಂತೆ ಇತರ ಭಾಷಾ ಪದಗಳನ್ನು ಬಳಸುತ್ತಿದ್ದಾರೆ ಎಂದು ಅಚ್ಚರಿಯೆನಿಸಿತ್ತು.

ಮೊನ್ನೆಯಷ್ಟೇ  ನನ್ನ  ಸ್ನೇಹಿತೆಯೊಬ್ಬಳ ಮನೆಗೆ ಹೋಗಿದ್ದೆ. ಆಕೆಯ ಗಂಡ ಆಧುನಿಕ ಕಾಲೇಜುಗಳಲ್ಲಿ ಶಿಕ್ಷಣ ಪಡೆದು 7-8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವವನು. ಈಕೆ ಸಂಸ್ಕೃತ ಕಾಲೇಜಿನಲ್ಲಿ ಓದಿದವಳು. ಆದರೂ ಆಕೆಯ ಗಂಡನ ಮಾತುಗಳಲ್ಲಿ ಹವ್ಯಕ ಭಾಷೆಯ ಸೊಗಡಿತ್ತು(ನನ್ನೊಂದಿಗೆ ಹವ್ಯಕ ಗೆಳೆಯನೊಬ್ಬನಿದ್ದ. ಆತನೊಂದಿಗೆ ಮಾತನಾಡುವಾಗ ಗಮನಿಸಿದ್ದು.) . ಈಕೆಯದು ಆಂಗ್ಲ-ಕನ್ನಡ ಮಿಶ್ರಿತ  ಹವ್ಯಕ ಭಾಷೆ.  ಊಟ ಮಾಡುತ್ತಿರುವಾಗ ಗಂಡನನ್ನುದ್ದೇಶಿಸಿ ಗೊಜ್ಜು ಕೊಡಿ ಎಂದಾಗಲಂತೂ ನನಗೆ ಸಹಿಸಲಾಗಲಿಲ್ಲ. ಇದು ಗೊಜ್ಜಲ್ಲ "ಹಶಿ" ಎಂದು ಹುಟ್ಟಿದಾಗಲಿಂದ ಹವ್ಯಕವನ್ನೇ ಆಡುತ್ತಿದ್ದವಳಿಗೆ ಹವ್ಯಕ ಭಾಷೆಯನ್ನು ಕಲಿಸಿದೆ.

ಇದು ಒಬ್ಬಳ ಕತೆಯಲ್ಲ. ನಾನು ಗಮನಿಸಿದ ಅನೇಕ ಹುಡುಗಿಯರ ಭಾಷೆ ಹೀಗೆಯೇ ಇದೆ. ಹವ್ಯಕ ಭಾಷೆ ಎಂದಲ್ಲ. ಅನೇಕ ಪ್ರಾದೇಶಿಕ ಭಾಷೆಗಳ ಸ್ಥಿತಿಯೂ ಹೆಚ್ಚು ಕಡಿಮೆ ಸಮಾನವಾಗಿದೆ. ಅನೇಕ ಹುಡುಗರೂ ಇಂತಹವರಿರಬಹುದು. ಆದರೆ ನಾನು ನೋಡಿದವರಲ್ಲಿ ಅವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ನನ್ನ ಮಿತ್ರರು ಹವ್ಯಕ ಭಾಷೆಯನ್ನು ಚೆನ್ನಾಗಿ ಮಾತನಾಡದೇ ಇರುತ್ತಿದ್ದರೆ ಹವ್ಯಕ ಎಂಬ ಭಾಷೆಯನ್ನು ಜೀವನದಲ್ಲಿ ಒಮ್ಮೆಯೂ ಕೇಳಿರದ ನಾನು, 5-6 ವರ್ಷಗಳಲ್ಲೇ ಅದರ ಸೊಗಸನ್ನು ಅನುಭವಿಸಲಾಗುತ್ತಿರಲಿಲ್ಲ. ಏಕೆಂದರೆ ಅದನ್ನು ಕಲಿಯುವ ಅನಿವಾರ್ಯತೆ ನನಗಿರಲಿಲ್ಲ. ಭಾಷೆಯ ಸೊಬಗು, ಸೊಗಡು, ಸೊಗಸುಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಗುರುತರ ಜವಾಬ್ದಾರಿಯಿರುವ ತಾಯಂದಿರೇ ಈ ವಿಷಯದಲ್ಲಿ ಎಡವುತ್ತಿರುವುದು ವಿಪರ್ಯಾಸವೇ ಸರಿ.

ಸೋಮವಾರ, ಮಾರ್ಚ್ 8, 2021

भूलोकदेवी वनिता विभाति

क्रोधाग्निसंनाशनवारिधारा
दुःखाब्धिसन्तारणनौर्नराणाम् । 
सुखाब्जसंस्मेरणदीधितिः सा
भूलोकदेवी वनिता विभाति ॥

पुत्रस्य पत्युः सुहृदः पितुर्वा
भ्रातुर्भवेत्सौख्यमिति श्रमं या ।
कृत्वा सुखं तत्र समीक्षमाणा
भूलोकदेवी वनिता विभाति॥

अन्यान् महाभाजनभोजनेन
सन्तोषयन्ती लघुभाजनेन ।
भुङ्क्तेऽवशिष्टं खलु सा विशिष्टा
भूलोकदेवी वनिता विभाति ॥

हताशभावाद्धतमानसानां
वात्सल्यजीवातुरसा नराणाम् ।
अभीष्टदा कल्पलतार्थिनां सा
भूलोकदेवी वनिता विभाति ॥

काठिन्यराशौ सततं वसन्ती
कारुण्यभावं पुरुषेषु धत्ते ।
स्वजीवितं लोकहितेऽर्पयन्ती
भूलोकदेवी वनिता विभाति ॥

कायेन दार्ढ्यं न हि तावदस्ति 
तस्मात् प्रसिद्धास्त्यबलेति लोके ।
आधारभूता सबलस्य सैव 
भूलोकदेवी वनिता विभाति ॥

DESERVE IT

बहुभ्यः वर्षेभ्यः पूर्वं कदाचित् मम कश्चित् ज्येष्ठः (वृद्धः) छात्रः मह्यम् उपायनानि प्रादात् । तदा अहं पृष्टवान् 'मम कृते एतत् किमर्थं ददाति?' इति । तदानीं सः You deserve it इत्यवोचत् । तदानीं तथा कथने सः भावपूर्णः आसीत् । मम तु आङ्ग्लज्ञानम् अधुनापि अत्यल्पम् । आङ्ग्लभाषया अभिव्यक्ताः भावाः प्रायेण नावगम्यन्ते  ।   तदानीं तु भावस्य कथा आस्तां तावत्, deserve  इति शब्दस्य अर्थः अपि मया अज्ञातः आसीत् । तस्य पुरतः तु अहमपि भावपूर्ण इव नटितवान् । तदनन्तरं कोषादिषु दृष्ट्वा अन्यांश्च पृष्ट्वा  तस्य वाक्यस्य शब्दार्थम् अवगतवान् । गच्छता कालेन बहुत्र deserve  इत्यस्य शब्दस्य श्रवणात् पठनाच्च तस्य शब्दस्य पृष्ठतः यः भावः अस्ति सः भावः अवगतः । उपायनस्य स्वीकरणे भवान् deserve   इति यत् सः उक्तवान् तत्र तु अहं deserve न आसम् इत्यपि अवगतम् ।

अधुनापि विश्वविद्यालयद्वारा अनेके पदवीं प्राप्नुवन्ति । किं ते तत्र deserve वा? इति तु न प्रष्टव्यम् । तत्रापि प्रमाणपत्रमात्रसम्पादनाय विद्यालयं प्रविशन्ति अनेके । एम्.ए इत्यादिकक्ष्यासु तु इदंं सामान्यम् । मयापि संस्कृतसाहित्ये आचार्यपदवी (एम्.ए) प्राप्ता वर्तते । कदापि तस्य deserve अहम् अस्मि इति मम भावः नासीत् । अहं स्वर्णपदकं प्राप्य उत्तीर्णवान् स्यां, तथापि एम्.ए deserve कर्तुं यावत् ज्ञानं सम्पादनीयं तावत् मया सम्पादितं वा इत्यत्र तु सन्देहः एव अस्ति । अहं एम्.ए उपाद्ध्यर्थं deserve अस्मि इति भावयितुम् एकोऽपि अंशः एतावता न लब्धः आसीत् ।

परन्तु ह्यः अहं तादृशम् एकम् अंशं प्राप्तवान् । समकालिकसंस्कृतकविषु श्रेष्ठतमः कविः अस्ति आर्.शङ्करवर्यः । एषः न केवलः मम अभिप्रायः अपि तु अनेकेषां सहृदयानां विदुषां च । तादृशस्य महाकवेः मेलनस्य अवसरः लब्धः । स एव स्वगृहम् आहूय मया सह प्रीत्या स्वकीयान् विचारान् संविभक्तवान् । अहमपि मदीयान् कांश्चन विचारान् तेन सह संविभक्तवान् । घण्टाद्वयं यावत् आवयोः सम्भाषणं प्राचलत् । कश्चित् श्रेष्ठतमः महाकविः मदर्थं घण्टाद्वयं समयं प्रादात् इत्येकः अंशः अहं एम्.ए उपाध्यर्थं deserve अस्मि इत्यस्य प्राप्तः । ज्ञानादिविषयेषु तु अहं एम्.ए पदव्यर्थं deserve  न स्याम्, परन्तु अहं deserve इति वक्तुम् एको वा अंशः लब्धः इति तु मोदम् अनुभवामि । 

ಅನೇಕ ವರ್ಷಗಳ ಹಿಂದೆ ನನ್ನ ವಿದ್ಯಾರ್ಥಿಯೊಬ್ಬರು (ವಯಸ್ಸಿನಲ್ಲಿ ತುಂಬಾ ಹಿರಿಯರು) ನನಗೆ ಉಡುಗೊರೆ ಕೊಡಲು ಮುಂದಾಗಿದ್ದರು. 'ನನಗೇಕೆ ಇದನ್ನೆಲ್ಲಾ ಕೊಡುತ್ತಿದ್ದೀರಿ?' ಎಂದಾಗ You deserve it ಎಂದು ಹೇಳಿದ್ದರು. ಇಂದಿಗೂ ಕೂಡಾ ಇಂಗ್ಲಿಷಿನಲ್ಲಿ ನಾನು ದುರ್ಬಲ. ಇಂಗ್ಲಿಷಿನಲ್ಲಿ ಯಾವುದಾದರೂ ಭಾವನೆಗಳನ್ನು ವ್ಯಕ್ತಪಡಿಸಿದರೆ ಅವುಗಳು ಅರ್ಥವಾಗುವುದಿಲ್ಲ. ಆ ದಿನಗಳಲ್ಲಂತೂ  deserve ಎಂಬುವುದರ ಶಬ್ದಾರ್ಥವೂ ನನಗೆ ತಿಳಿದಿರಲಿಲ್ಲ. ಆದರೆ ಅವರೆದುರು ನಾನೂ ಭಾವುಕನಾದಂತೆ ನಟಿಸಿ ಉಡುಗೊರೆಯನ್ನು ತೆಗೆದುಕೊಂಡೆ. ಆಮೇಲೆ ನಿಘಂಟುಗಳನ್ನು ಪರಿಶೀಲಿಸಿ, ಬೇರೆಯವರನ್ನು ಕೇಳಿ ವಾಕ್ಯದ ಅರ್ಥ ತಿಳಿದುಕೊಂಡೆ. ಅನೇಕ ಕಡೆಗಳಲ್ಲಿ  deserve ಶಬ್ದವನ್ನು ಕೇಳಿ, ಓದಿದ ನಂತರ ಅವರ ಭಾವವೂ ಅರ್ಥವಾಯಿತು. ಅನೇಕ ಕಡೆಗಳಲ್ಲಿ ನಾನು deserved ಅಲ್ಲ ಎಂಬುವುದೂ ಅರಿವಾಯಿತು. 

ವಿಶ್ವವಿದ್ಯಾಲಯಗಳಿಂದ ಅನೇಕರು ಪದವೀಧರರಾಗುತ್ತಾರೆ. ಆದರೆ ಅವರು ಪದವಿಗೆ deserve ಹೌದೋ ಎಂಬುವುದನ್ನು ಕೇಳಬಾರದು. ಈಗಿನ ಕಾಲದಲ್ಲಿ ಪ್ರಮಾಣಪತ್ರಕ್ಕಾಗಿಯೇ ಕಾಲೇಜಿಗೆ ಹೋಗುವವರು ಹಲವರು. ನಾನು ಕೂಡಾ ಸಂಸ್ಕೃತದಲ್ಲಿ ಆಚಾರ್ಯ (ಎಂ.ಎ) ಪದವೀಧರ.  ಬಂಗಾರದ ಪದಕವನ್ನು ಪಡೆದಿದ್ದರೂ ಎಂ.ಎ ಗೆ ನಾನು deserve ಎಂದು ಹೇಳಿಕೊಳ್ಳಲು ಯಾವುದೇ ಅಂಶ ಕಾಣುತ್ತಿರಲಿಲ್ಲ. 

ನಿನ್ನೆ ನಾನು ಕೂಡಾ ಎಂ.ಎ ಪದವಿಗೆ deserve ಎಂದು ಹೇಳಿಕೊಳ್ಳಲು ಕಾರಣವೊಂದು ದೊರೆಯಿತು. ಸಮಕಾಲಿಕ ಸಂಸ್ಕೃತಕವಿಗಳಲ್ಲಿ ಶ್ರೇಷ್ಠರಾದವರು ಡಾ.ಶಂಕರ್ ರಾಜಾರಾಮನ್ ಅವರು. ಇದು ನನ್ನೊಬ್ಬನ ಅಭಿಪ್ರಾಯವಲ್ಲ. ಅನೇಕ ಸಂಸ್ಕೃತ ಕಾವ್ಯಪ್ರೇಮಿಗಳೂ ವಿದ್ವಾಂಸರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅಂತಹವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಸುಮಾರು ಎರಡು ಗಂಟೆಗಳ ಕಾಲ ಅನೇಕ ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಂಡರು. ನಾನೂ ಅನೇಕ ವಿಷಯಗಳನ್ನು ಅವರೊಂದಿಗೆ ಹಂಚಿಕೊಂಡೆ. ಇಂತಹ ಮಹಾಕವಿಯೊಬ್ಬರು ತಮ್ಮ ಎರಡು ಗಂಟೆಗಳನ್ನು ನನಗಾಗಿ ಮೀಸಲಿಟ್ಟರು ಎಂಬುವುದರಿಂದ ಸಂಸ್ಕೃತ ಎಂ.ಎಗೆ ನಾನು deserve ಎಂಬುವುದಕ್ಕೆ ಒಂದು ಕಾರಣವಾದರೂ ದೊರೆಯಿತು.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...