ಮಂಗಳವಾರ, ಮೇ 21, 2019

रग्गीटु अज्जोबा


मज्झो सोहेरो एकु अज्जोबा से। तेला कंडाबट्टे रागु। उट्ठेलतरि, बेठ्लतरि, काम केल्लतरि, केल्लनाहितरी ते पष्टि गाळि आय्कविंचि। गाळि देवेचच् तेच काम म्हणि मस्तदा माला साव्डसे। तो अव्ग्घेन्धायि गाळि देंतुच् ससे। तो आम्डलई सुमार्दा एसे, मेयी तेचे घरा सुमार्दा झास। तेळिन बोल्लवेचि अम्चिभास मस्त शुद्ध। केववेदा अर्थुच् हन्नाहि अम्धा। एदा तो आम्चे घरा आय्लेलेवेळा मे पत्रि वेंटीत् सल। पत्रि वेण्टवेच्यावाणि हो प्रत्यक्षु झालो। मे पत्रि वेंटीत्सता डावे कुच्छि पळा एकि कळि से, उज्वे कुच्छि खंदा पेल्लिवांठि एक फूल से म्हणि पिरिपिरि करीत् सलो। पत्रि वेंटुनि झाल्येवेळा माला घामु एंतु सलो म्हण्णि फ्याना बूडा फ्यान आन् कर्नि निद्दाव्लसल। त पळाव्नि पहान्पटि अड्डव् पड्लोसे म्हणि चर्फड्लन। मे रप्प उट्ठुन् बेठ्ल।

एदा बेंग्ळूरांतु तेचे घराला गेल्लसल। मे बेंग्ळूराचे निब्बरांतु पहन्तांठि दुप्पारिवेरि भोवालसल। दुप्पारि जेव्वे तेचे घराला गेल्लसल। जेवण हंतक्षणि नीद एव्लग्लि। पण निद्दाव्लते तो गाळि देर म्हणि साव्डिंद्ल। तो झेवण् कर्नि थोडे वेळ्चिन् निद्दाव्लो। मे भंतारो निद्दाव्ल, तू किल्ला निद्दाव्सशि म्हणि गाळि देर मणि भय झाल। अप्पदाव्नि टीवि पऴाय्त बेठ्ल। एक् घण्टे उप्रान्त तो उट्ठेलो। उट्ठितक्षणि माज्झे लाग्गि आय्लो। हय्कारे हे निब्बरान्तु एक घडी निद्दाव्लोष्नाहि, भक्ता टीवि पळाय्त्सलोश्नोका म्हणि गाळि दिध्लन। हे अज्जोबाशि कित केल्लतरि गाळि आय्कव्यो म्हणवेच स्पष्ट झाल।

बेंग्ळूरांतु मज्झे कक्काच घर तेचे घरापष्टि टिम्भ दूरि से। माला बेंग्ळूरांतु भोव्वे इत्ल गोंतुनत्ल। म्हण्णि माला पाव्वे मा सव आय्लोसलो। अम्हि विळ्चा कक्काचे घराला नीगालसल। तो माला पाव्नि तेच् दिव्सु तेचे घराला वापास् एंतेलोसलो। म्हण्णि तेला बस् पास् घेत्लते लाभु हसल। मे वापास् एन्नाहि माला टिकेट् घेत्लतेच् लाभु। म्हण्णि बस्स चडतक्षणि 1 टिकेटु 1 पास् म्हणि कण्डक्टरासन म्हळ्ळन। विळ्चा बहुतेक कोणेक डैलीपास् घेन्नाहि। पाहान्ता घेव्नि रात्तिवेरि भोवसति। म्हण्णि कंडेक्ट्रान ಪಾಸು ನಿಮ್ಹತ್ರ ಇದ್ಯಾ ಕೊಡ್ಬೇಕಾ" (डैली पास सेका, देववका?)म्हणि विचार्लन। अज्जोबाला रागु आय्लो। ನನ್ಹತ್ರ ಎಲ್ಲಿಂದ ಪಾಸು? ನೀವು ಕೊಡ್ಬೇಕು". (माशि केंठि पास? तूच्चि देववशि)  म्हणि कंडेक्ट्रालाच् गाळि दिध्लिन। त आय्कुनि हेचो स्वभावुच् असलो, अव्घेंधा गाळि देंतु ससे। तेळिन् गाळि दिध्लेन्ते डोयि उन्हन् कर्निघेवे नझे म्हणि निर्धारु केल्लो।  
  

ಶುಕ್ರವಾರ, ಮೇ 17, 2019

प्रतीयमानं पुनरन्यदेव

यदचेतनोऽपि पादैः स्पृष्टः प्रज्वलति सवितुरिनकान्तः ।
तत्तेजस्वी पुरुषः परकृतनिकृतिं कथं सहते ॥

इदं भर्तृहरेः सुभाषितम्। केषुचित् भर्तृहरिनीतिशतकपुस्तकेषु इदं पद्यं न दृश्यते। परन्तु भर्तृहरिपद्यमिति प्रसिद्धिस्तु वर्तत एव। एतस्य श्लोकस्य पठनात् कश्चन अर्थः अस्माभिः ज्ञायते। स च अर्थः बहुषु व्याख्यानेषु भाषान्तरेषु च उल्लिखितोऽप्यस्ति। यथा चेतनरहितः अपि सूर्यकान्तमणिः सूर्यपादैः स्पृष्टः सन् प्रज्वलति, तन्नाम कोपं प्रकटयति। तद्वत् परैः कृतम् अवमाननं कथं सहते इति।

          कश्चन नवसप्ततिवर्षीयः पुरुषः नारायणनामा हिन्दूस्थान् पेट्रोलियं संस्थायाम् उन्नतपदे आसीत्। उद्योगात् निवृत्तेरनन्तरं संस्कृतपठनरुचिः अभवत्। शिबिरं प्रविश्य संस्कृतभारत्याः कोविदपरीक्षां उत्तीर्य कर्णाटकसंस्कृतविश्वविद्यालयतः आचार्यपदवीं प्राप्य सद्यः एम्.फिल् कक्ष्यायां विद्यते। अष्टसप्ततिवर्षीयोऽपि युवच्छात्राणामपेक्षया अधिकमध्ययनं करोति। अस्मिन् वयसि पठितस्य विस्मरणं जायते इति हेतोः परिश्रमस्य फलं पूर्णप्रमाणेन कदाचित् न लभेत। परन्तु ग्रन्थाध्ययने प्रतिपङ्क्ति सारः ग्रहीतव्यः इति एतस्य प्रयत्नः भवति।

          सः उपर्युक्तं सुभाषितं पठित्वा तस्य अर्थं च ज्ञातवान्। तदनन्तरम् एतस्य सुभाषितस्य आशयान्तरमपि तस्य मनसि स्फुरितम्। यथा सूर्यस्य किरणैः स्पृष्टः एव सूर्यकान्तमणिः प्रकाशते। अन्यैः कृत्रिमप्रकाशैः(टार्च् इत्यादिभिः) तु न। तद्वत् तेजस्वी पुरुषः अपि श्रेष्ठानां प्रशंसया एव आत्मनः तोषं प्रकटयन्ति। न तु क्षुद्रजनानां प्रशंसया । इति। यदि पादशब्दस्य चरणरूपः अर्थः गृह्यते चेद् तेजस्विनः पुरुषाः श्रेष्ठानां चरणाघातं अवमाननकारणं न मन्यन्ते इति तस्याभिप्रायः। सः तस्याशयम् आङ्ग्लभाषया इत्थं व्यक्तीकृतवान्।
The above is the Shubhashitam under review. Further to my discussions, I wish to propose the following idea. for your kind review at your total convenience.
There are two parameters ; 1. Sun rays are essential for the whole world and therefore cannot be harmful (unless deliberately misused.
2. (परकृत)निकृतिं: = defined as "fraud,/wickedness/chicanery etc. Among other meanings. I am selecting Chicanery as it is the deadliest!
Now my theory:
1. Now :pratyakshadevaH SuryaH. As I said above without sunrays the world would just collapse. So the most important element for our existence 
2. Chicanery : Cheating by cunning methods.  .Appearing to be good but doing the opposite. 
Let us go the Shubhashitam.

Suryakantamani just gleams when sunrays fall on it. Gleam is a positive action. Like a Bride gleams with a new sari and diamond necklace etc on her wedding day.Therefore the brightness exhibited by the Mani, is a sign of rejoicing and not resenting . This is my first point.

What happens later? Yes. When something of  lesser grade than the sun rays falls on the Mani, it simply keeps quiet. Because the Mani does not care for such secondary brilliance. "I will take the best available in the field is its motto! 

Here please note that the other sources of light are trying to use chicanery and make the Mani gleam. Mani will not relent. It just ignores the other sources and says I have nothing to do with you and you may go away! Even though the Mani is an achetana vastu, its reaction is beautiful.

Now referring to satpurushAH, they also come across many persons who are trying to pose as good persons but inwardly having cheap and diabolical plans. (This is chicanery). When such a confrontation occurs then what the satpurushAH do? They treat the offenders with disdain. 
(They do not waste their time, once they know the quality of the intruder.

This is the message  given in the Shubhasitham. Even an inert object like suryakantaMani could understand the quality of the transactions imposed on it. Then would it be difficult for a scholar of repute to fathom the wickedness (if any) in the transactions that may come along?

मया सुलभोपलभ्याः कतिचन व्याख्याः भाषान्तरटीकाः च अवलोकिताः। क्वचित् नीतिशतके अयं श्लोक एव न वर्तते। यत्राऽयं श्लोकः दृश्यते तत्र अनया दृष्ट्या व्याख्यानं तु नास्ति। परन्तु श्लोके अवलोकिते अस्यार्थस्य विरोधः न दृश्यते । यतो हि ज्वलति इत्यस्य प्रकाशते इत्यप्यर्थः अभिधानचन्द्रिकायां दर्शितः। तथा हि ज्वलनात् पूर्वं प्रकाशनं तु भवत्येव। शिशिरसमये रविकान्तमणिना शीतनिवारणं भवति न तु दाहः इति नैषधीयचरितेऽपि वर्णितम्। सप्ततितमे वयसि संस्कृताध्ययनं आरब्धवतः कस्यचित् पुरुषस्य  एतादृशः कश्चन विशिष्टः अर्थः व्याख्यानादीनाम् अपठनेनैव यदि व्यज्यते, तर्हि बाल्यादारभ्य सूक्ष्मेक्षिकतया संस्कृतस्य कति वा ईदृशाः विशिष्टाः अर्थाः न प्रतिभासेरन्।

ಭಾನುವಾರ, ಮೇ 12, 2019

ಶ್ರುತಂ ಹರತಿ ಪಾಪಾನಿ


ಹೇಳುವುದು ಅರ್ಥವಾಗದಿದ್ದರೂ ಶ್ರೇಷ್ಠ ವ್ಯಕ್ತಿಗಳ ಮಾತುಗಳನ್ನೂ ಶ್ರೇಷ್ಠ ವಿಚಾರಗಳನ್ನೂ ಕೇಳುತ್ತಿರಬೇಕು. ಅದರ ಪ್ರಯೋಜನ ಇಂದಲ್ಲದಿದ್ದರೂ ಯಾವಾಗಾದರೂ ಖಂಡಿತವಾಗಿ ಆಗಿಯೇ ಆಗುತ್ತದೆ. ಅನೇಕ ಬಾರಿ ಹೌದೆಂದೆನಿಸಿದ ಪ್ರೊ. ವೆಂಪಟೀ ಕುಟುಂಬಶಾಸ್ತ್ರಿಗಳು ಯಾವಾಗಲೂ ಹೇಳುತ್ತಿದ್ದ ಮಾತು.
ಸಂಸ್ಕೃತ ಕ್ಷೇತ್ರದಲ್ಲಿ ಆಗಷ್ಟೇ ಅಂಬೆಗಾಲಿಡಲು ಪ್ರಾರಂಭಿಸಿದ್ದೆ. ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳ ಜ್ಞಾನವರ್ಧನೆಗಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕಲಿತ ವಿಷಯಗಳನ್ನು ಸಭೆಯಲ್ಲಿ ಪ್ರಸ್ತುತಿಪಡಿಸುವ ಧೈರ್ಯ ವಿದ್ಯಾರ್ಥಿಗಳಿಗಿರಬೇಕು. ಅಂತೆಯೇ ವಿಷಯಗಳನ್ನು ಪ್ರಸ್ತುತಪಡಿಸುವ ಶೈಲಿಯೂ ಆಕರ್ಷಕವಾಗಿರಬೇಕು ಎಂಬ ದಿಸೆಯಲ್ಲಿ ಅನೇಕ ಸಭೆಗಳು ನಡೆಯುತ್ತಿದ್ದವು. ಪ್ರತೀ ವಾರವೂ ವಾಗ್ವರ್ಧಿನೀ ಎಂಬ ಸಭೆಯಲ್ಲಿ ವಿದ್ಯಾರ್ಥಿಗಳು ಐದು ನಿಮಿಷಗಳ ಕಾಲ ತಾವು ಅಭ್ಯಸಿಸಿದ ಯಾವುದಾದರೊಂದು ವಿಷಯವನ್ನು ಪ್ರಸ್ತುತಪಡಿಸಬೇಕಾಗಿತ್ತು. ತದನಂತರ ಪ್ರಸ್ತುತಿಪಡಿಸಿದ ವಿಷಯಗಳನ್ನಾಧರಿಸಿ ಅಧ್ಯಾಪಕರು ಪ್ರಶ್ನೆಗಳನ್ನು ಕೇಳುತ್ತಿದ್ದರು. ವಿದ್ಯಾರ್ಥಿಗಳು ಸಮರ್ಪಕವಾಗಿ ನಿರ್ಭೀತಿಯಿಂದ ಉತ್ತರಿಸುವಲ್ಲಿ ಪ್ರೇರಣೆಯನ್ನೂ ನೀಡುತ್ತಿದ್ದರು. ಇದನ್ನು ಹೊರತುಪಡಿಸಿ ತಿಂಗಳಿಗೆ ಎರಡು ಸಭೆಗಳು ನಡೆಯುತ್ತಿದ್ದವು. ಅದರಲ್ಲೊಂದು ಅಧ್ಯಾಪಕವಾಕ್ಯಾರ್ಥಪರಿಷತ್ತಿನ ಸಭೆ. ಈ ಸಭೆಯಲ್ಲಿ ಅಧ್ಯಾಪಕರು ಇಪ್ಪತ್ತು ನಿಮಿಷಗಳ ಕಾಲ ಯಾವುದಾದರೊಂದು ವಿಷಯವನ್ನು ನಿರೂಪಿಸುತ್ತಿದ್ದರು. ತದನಂತರ ಪ್ರಶ್ನೋತ್ತರವೂ ನಡೆಯುತ್ತಿತ್ತು. ಮಗದೊಂದು ಸಭೆಯೆಂದರೆ ಶಾರದಾವಿಶಿಷ್ಟವ್ಯಾಖ್ಯಾನಮಾಲಾ ಸಭೆ. ಈ ಸಭೆಯಲ್ಲಿ ದೇಶದಲ್ಲೇ ಖ್ಯಾತನಾಮರಾದ ವಿದ್ವಾಂಸರೊಬ್ಬರು ಬಂದು ಒಂದು ಗಂಟೆಯ ಅವಧಿಯಲ್ಲಿ ಯಾವುದಾರರೂ ಒಂದು ವಿಷಯವನ್ನು ಮಂಡಿಸುತ್ತಿದ್ದರು.
ಹೀಗೆ ಶಾರದಾವಿಶಿಷ್ಟವ್ಯಾಖ್ಯಾನಮಾಲೆಯಲ್ಲಿ ವಿಷಯವನ್ನು ಮಂಡಿಸಲು ಬರುವವರೆಲ್ಲಾ ಶ್ರೇಷ್ಠ ವಿದ್ವಾಂಸರೇ. ಸಭೆಯಲ್ಲಿ ಈಗಷ್ಟೇ ವಿದ್ಯಾಪೀಠವನ್ನು ಸೇರಿರುವ ವಿದ್ಯಾರ್ಥಿಗಳನ್ನೂ ಕೂರಿಸಲಾಗುತ್ತಿತ್ತು. ಅವರು ಹೇಳುವ ವಿಷಯದ ಸಾರ ತಿಳಿಯುವುದಿರಲಿ ಕೆಲವೊಮ್ಮೆ ಪದಗಳೇ ಅರ್ಥವಾಗುತ್ತಿರಲಿಲ್ಲ. ಆದರೂ ವಿದ್ಯಾರ್ಥಿಗಳನ್ನು ಯಾಕಾಗಿ ಸಭೆಯಲ್ಲಿ ಕುಳ್ಳಿರಿಸುತ್ತಾರೆ, ಅದರ ಬದಲಿಗೆ ಯಾವುದಾದರೂ ತರಗತಿಯನ್ನು ನಡೆಸಿ ಪ್ರಾಥಮಿಕ ಪಾಠ್ಯಗಳನ್ನೇ ಬೋಧಿಸಿದರೆ ಪ್ರಯೋಜನವಾದೀತು ಎಂಬುವುದು ನನ್ನನ್ನೂ ಒಳಗೊಂಡಂತೆ ಅನೇಕರ ಅಭಿಪ್ರಾಯವಾಗಿತ್ತು.
ವಿದ್ಯಾಪೀಠದಲ್ಲಿ ನಾನು ಶಾಸ್ತ್ರಿ ಪ್ರಥಮವರ್ಷದಲ್ಲಿ ಓದುತ್ತಿದ್ದಾಗ ಪ್ರೊ. ವೆಂಪಟೀ ಕುಟುಂಬಶಾಸ್ತ್ರೀ ಪ್ರಾಂಶುಪಾಲರಾಗಿದ್ದರು. ಅವರು ಅನೇಕ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳೂ ಆಗಿದ್ದರು. ಹಾಗೆಂದು ಇತರ ಕುಲಪತಿಗಳಂತೆ ಕೇವಲ ಹಣಬಲ, ಶಿಫಾರಸ್ಸುಗಳಿಂದಲೇ ಕುಲಪತಿಗಳಾಗಿ ಅಧಿಕಾರ ನಡೆಸಿದವರಲ್ಲ.  ಸಂಸ್ಕೃತದಲ್ಲಿ ಅಪಾರಜ್ಞಾನವನ್ನೂ, ವಿದ್ಯಾರ್ಥಿಗಳಲ್ಲಿ ಪ್ರೀತಿಯನ್ನೂ ಹೊಂದಿದ್ದ ಅವರು ನಿಜವಾದ ಅರ್ಥದಲ್ಲಿ ಕುಲಪತಿಗಳಾಗಿದ್ದರು. ಅವರು ವಿಶಿಷ್ಟವ್ಯಾಖ್ಯಾನದ ಸಮಯದಲ್ಲಿ ಬಾಡಿದಂತಹ ನಮ್ಮ ಮುಖಗಳನ್ನು ನೋಡುತ್ತಾ ಈ ಮಾತುಗಳನ್ನು ನುಡಿಯುತ್ತಿದ್ದರು.
ಈಗ ವ್ಯಾಖ್ಯಾನ ಮಾಡಿದವರು ದೇಶದಲ್ಲೇ ಶ್ರೇಷ್ಠರಾದ ಪಂಡಿತರು. ಅವರ ಅಧ್ಯಯನ ಅಷ್ಟು ಅಗಾಧವಾಗಿದೆ. ಆದ್ದರಿಂದ ಗಾಢವಾದ ವಿಷಯವನ್ನೇ ಅವರು ಪ್ರತಿಪಾದಿಸಬೇಕು. ಅವರಂತಹ ಶ್ರೇಷ್ಠ ವಿದ್ವಾಂಸರಿಂದ ಪ್ರಾಥಮಿಕ ವಿಷಯಗಳ ಬಗ್ಗೆ ವ್ಯಾಖ್ಯಾನ ಮಾಡಿಸಿದರೆ ಅವರ ಅಪಾರ ಜ್ಞಾನದ ಸಾಕ್ಷಾತ್ಕಾರ ನಮಗಾಗುವುದಿಲ್ಲ. ಈಗ ಅವರ ಮಾತುಗಳನ್ನು ಶ್ರದ್ಧೆಯಿಂದ ಕೇಳುವುದು ವಿದ್ಯಾರ್ಥಿಗಳಾದ ನಿಮ್ಮ ಕರ್ತವ್ಯ. ಅರ್ಥವಾಗದಿದ್ದರೂ ತೊಂದರೆಯಿಲ್ಲ. ಈಗ ಅರ್ಥವಾಗದಿದ್ದರೂ ಕಾಲಕ್ರಮೇಣ ನಿಮಗೆ ಖಂಡಿತವಾಗಿಯೂ ಇಂತಹ ಶ್ರೇಷ್ಠರ ಮಾತುಗಳನ್ನು ಕೇಳಿದ್ದರ ಲಾಭವಾಗುತ್ತದೆ ಎಂಬುದಾಗಿ ಬೋಧಿಸುತ್ತಿದ್ದರು. ನನ್ನ ಓದಿನ ಮುಂದಿನ ಹಂತಗಳಲ್ಲಿ ಅನೇಕ ಬಾರಿ ಇದರ ಅನುಭವವಾಗಿದೆ. ಗಹನವಾದ ವಿಚಾರಗಳನ್ನು ಓದುವ ಸಂದರ್ಭದಲ್ಲಿ ಅನೇಕ ವರ್ಷಗಳ ಹಿಂದೆ ಕೇಳಿಸಿಕೊಂಡ ಶ್ರೇಷ್ಠ ಪಂಡಿತರ ವಚನಗಳು ನೆನಪಿಗೆ ಬರುತ್ತವೆ. ಅವರು ಹೇಳುತ್ತಿದ್ದ ವಿಷಯಗಳನ್ನು ಪೂರ್ಣವಾಗಿ ಅರ್ಥೈಸಿಕೊಳ್ಳಲು ನಾನು ಅಸಮರ್ಥನಾಗಿದ್ದೇನೋ ನಿಜ. ಆದರೆ ವಿಷಯವನ್ನು ನಿರೂಪಿಸುವ ಶೈಲಿಯನ್ನು ಇಂತಹ ವಿದ್ವಾಂಸರಿಂದ ಬಹುವಾಗಿ ಕಲಿಯಲು ಪ್ರಯತ್ನಪಟ್ಟಿದ್ದೇನೆ.
ಯಾವುದೇ ವಿಷಯದಲ್ಲಾದರೂ ಆಳವಾದ ಪರಿಶ್ರಮ, ಅನುಭವ, ಆಸಕ್ತಿಗಳುಳ್ಳವನು ವಿದ್ವಾಂಸನೇ ಸರಿ. ಅದು ಓದು ಬರಹದ ಕ್ಷೇತ್ರವೇ ಆಗಬೇಕೆಂದಿಲ್ಲ, ಸಂಸ್ಕೃತದ ಕ್ಷೇತ್ರವೇ ಆಗಬೇಕೆಂದಿಲ್ಲ. ಆಯಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಅಹಂಕಾರ ಭಾವವನ್ನು ಬಿಟ್ಟು, ಅವರು ಸಾಧನೆ ಮಾಡಿದ ಕ್ಷೇತ್ರದ ಬಗ್ಗೆ ಏನಾದರೂ ಹೇಳಿದರೆ ನನಗೆ ಅರ್ಥವಾಗದಿದ್ದರೂ, ರುಚಿಸದಿದ್ದರೂ ಕೇಳುತ್ತಿರುತ್ತೇನೆ. ಪ್ರೊ. ವೆಂಪಟಿ ಕುಟುಂಬಶಾಸ್ತ್ರಿಗಳ ಮಾತುಗಳೇ ನನಗಿಲ್ಲಿ ಪ್ರೇರಕ. ಸುಮಾರು ವರ್ಷಗಳ ಹಿಂದೆ ಸ್ವಂತಕ್ಕೆ ಬೇಕಾಗುವಷ್ಟಾದರೂ ಬೇಯಿಸಿ ತಿನ್ನುವಷ್ಟು ಅಡುಗೆಯ ಜ್ಞಾನವೂ ನನಗಿರಲಿಲ್ಲ. ಅಡುಗೆ ಮಾಡುವ ಅನಿವಾರ್ಯತೆಯೂ ಇರಲಿಲ್ಲವಾದ್ದರಿಂದ ಅಡುಗೆಯಲ್ಲಿ ಆಸಕ್ತಿಯೂ ಇರಲಿಲ್ಲ. ಹೀಗಿರುವಾಗ ವಿದ್ಯಾಪೀಠದಲ್ಲೇ ಯಾವುದೋ ಒಂದು ಕಾರ್ಯಕ್ರಮದಲ್ಲಿ ಅಡುಗೆ ಭಟ್ಟರ ಸಹಾಯಕ್ಕಾಗಿ ರಚಿಸಿದ್ದ ವಿದ್ಯಾರ್ಥಿಗಳ ತಂಡದಲ್ಲಿ ನನ್ನನ್ನೂ ಸೇರಿಸಿದ್ದರು. ಸುಮಾರು ಒಂದು ವಾರದ ತನಕ ಅಡುಗೆ ಭಟ್ಟರಿಗೆ ಸಹಾಯ ಮಾಡಬೇಕಾಗಿತ್ತು. ಆ ತಂಡದಲ್ಲಿದ್ದ ಗೆಳೆಯರಾದ ಗಣೇಶಕೃಷ್ಣ, ರವೀಂದ್ರ ಮೊದಲಾದವರು ಆ ವೇಳೆಗಾಗಲೇ ಪಾಕಪ್ರವೀಣರಾಗಿದ್ದರು. ಅವರ ಆಶ್ರಯದಲ್ಲಿ ಕೆಲಸಗಳನ್ನು ನಿರ್ವಹಿಸುವುದೇನೋ ಕಷ್ಟವಾಗಲಿಲ್ಲ. ವಿಚಿತ್ರವೆಂದರೆ ಅಡುಗೆಯ ಕೆಲಸದಲ್ಲಿ ಅಷ್ಟೇನೂ ಚಾಕಚಕ್ಯತೆ ಇಲ್ಲದಿದ್ದ ನಾನು ಅಡುಗೆ ಭಟ್ಟರೊಬ್ಬರಿಗೆ ಬಹಳ ಆತ್ಮೀಯನಾಗಿದ್ದೆ. (ನನ್ನ ಜೀವನದಲ್ಲಿ ಅಚ್ಚರಿಯೆನಿಸುವ ಇಂತಹ ಅನೇಕ ಘಟನೆಗಳಿವೆ. ಉದಾಹರಣೆಗೆ ಆಟೋಟಗಳಲ್ಲಿ ನಾನು ಯಾವಾಗಲೂ ಹಿಂದೆಯೇ. ಯಾವ ಕ್ರೀಡೆಯಲ್ಲೂ ಬಹುಮಾನವಾಗಿ ಒಂದು ಸಣ್ಣ ಲೋಟವನ್ನೂ (ಕಪ್ ನ ಮಾತು ದೂರವೇ) ಪಡೆದವನಲ್ಲ. ಆದರೂ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾಧ್ಯಾಪಕರಾಗಿದ್ದ ಪಂಚಾಕ್ಷರಪ್ಪ, ಪ್ರೌಢಶಾಲೆಯಲ್ಲಿ ಸುಜಾತಾ, ವಿದ್ಯಾಪೀಠದಲ್ಲಿ ರಾಮಚಂದ್ರ ಮೊದಲಾದವರೆಲ್ಲಾ ನನಗೆ ಆತ್ಮೀಯರಾಗಿದ್ದರು.) ಅಡುಗೆ ಭಟ್ಟರು ಒಂದು ದಿನ ನನ್ನನ್ನು ಅಡುಗೆ ಮನೆಯೊಳಗೆ ಕರೆದು ಬಹಳ ರುಚಿಯಾದ ಜ್ಯೂಸ್ ಕೊಟ್ಟರು. ಅಲ್ಲದೇ ಆ ಜ್ಯೂಸ್ ಯಾವುದರಿಂದ ಮಾಡಿದ್ದು ಎಂದು ಹೇಳುವಂತೆ ಕೇಳಿದರು. ಅಡುಗೆಯ ಬಗ್ಗೆ ಸ್ವಲ್ಪವಾದರೂ ಜ್ಞಾನವಿರುವವರು ರುಚಿಯಾದ ಪದಾರ್ಥವನ್ನು ತಿಂದಾಗ ಅದರ ಮೂಲವಸ್ತು ಯಾವುದು, ಮಾಡುವ ಬಗೆ ಹೇಗೆ ಎಂಬುದರ ಬಗೆಗೆ ಚಿಂತಿಸುತ್ತಾರೆ. ನನ್ನಂತಹವರಿಗೆ ತೊವೆ ಉಣ್ಣುವವನಿಗೆ ಬೇಳೆ ಬೆಲೆಯ ಉಸಾಬರಿ ಯಾಕೆ?” ಎಂಬುವಂತೆ ತಿನ್ನುವುದೊಂದೇ ಕೆಲಸ. ಅಡುಗೆ ಭಟ್ಟರು ಯಾವುದರದ್ದೆಂದು ಹೇಳುವಂತೆ ಬಹಳ ಪೀಡಿಸುತ್ತಿದ್ದರಿಂದ ಏನಾದರೊಂದನ್ನು ಹೇಳುವುದು ಅನಿವಾರ್ಯವಾಗಿತ್ತು. ಬೆಲ್ಲದ ತುಂಡೊಂದು ಜ್ಯೂಸಿನ ಕೊನೆಯ ಗುಟುಕಿನಲ್ಲಿ ಬಾಯಿಗೆ ಸಿಕ್ಕಿದ್ದರಿಂದ ಬೆಲ್ಲದ ಜ್ಯೂಸು ಎಂದು ಹೇಳಿದ್ದೆ. ಅವರು ಬೆಲ್ಲ ಹೌದು ಮುಖ್ಯವಾದ ಪದಾರ್ಥ ಯಾವುದು ಎಂದು ಹೇಳುವಂತೆ ಪುನಃ ಪುನಃ ಕೇಳುತ್ತಿದ್ದರು. ನಾನು ಹೇಳುವುದರಲ್ಲಿ ವಿಫಲನಾದೆ. ಕೊನೆಯಲ್ಲಿ ಅವರೇ ಇದು ಬಣ್ಣದ ಸೌತೆಕಾಯಿಯ ತಿರುಳಿನಿಂದ ಮಾಡಿದ ಜ್ಯೂಸು ಎಂದಿದ್ದರು. ಅಲ್ಲದೇ ಅದನ್ನು ಮಾಡುವ ವಿಧಾನವನ್ನೂ ವಿವರಿಸಿದ್ದರು. ಅದು ಬ್ರಹ್ಮವಿದ್ಯೆಯೇನೂ ಅಲ್ಲದಿದ್ದರೂ ಮೊದಲ ಬಾರಿಗೆ ಅಡುಗೆ ಮಾಡುವ ವಿಧಾನವನ್ನು ಕೇಳುತ್ತಿದ್ದ ನನಗೆ ಅದೇ ದೊಡ್ಡ ವಿಷಯವಾಗಿತ್ತು. ಅಲ್ಲದೇ ಹೇಗೆ ಮಾಡುವುದು ಹೇಳು ನೋಡೋಣ ಅಂತ ಅಡುಗೆ ಭಟ್ಟರು ನನ್ನ ಬಾಯಿಂದಲೇ ಹೇಳಿಸಿದ್ದರು. ಹೀಗೆ ಸುಮಾರು ಅರ್ಧ ಗಂಟೆಯಷ್ಟು ಹೊತ್ತು ಸೌತೆಕಾಯಿಯ ಜ್ಯೂಸನ್ನೇ ಕೊರೆಯುತ್ತಿದ್ದರು. ನಾನೂ ಗೋಣುಹಾಕಿ ಕೇಳುತ್ತಿದ್ದೆ.
ಇಂದು ಬಣ್ಣದ ಸೌತೆಕಾಯಿಯ ತಿರುಳನ್ನು ತೆಗೆಯುತ್ತಿರುವಾಗ ಅದೇಕೋ ಜ್ಯೂಸಿನ ನೆನಪಾಯಿತು.ತಿರುಳಿನ ಜ್ಯೂಸ್ ಮಾಡಿ ಕುಡಿಯುವ ಮನಸ್ಸೂ ಆಯಿತು. ಬೆಲ್ಲದ ಜ್ಯೂಸು ಎಂದು ಹೇಳಿದ್ದು ನೆನಪಾಗಿ ಬೆಲ್ಲ ಹಾಕಬೇಕು ಎಂಬುವುದೂ ಸ್ಪಷ್ಟವಾಗಿತ್ತು. ಐದು ವರ್ಷಗಳಿಂದ ಸ್ವಯಂಪಾಕ ಮಾಡಿಕೊಳ್ಳುತ್ತಿರುವುದರಿಂದ ಅಡುಗೆಯ ಬಗೆಗೆ ತಕ್ಕಮಟ್ಟಿನ ಸಾಮಾನ್ಯಜ್ಞಾನವೂ ಇತ್ತು. ಸಣ್ಣದಾದ ಸೌತೇಕಾಯಿಯ ತಿರುಳಿನಿಂದ ಸುಮಾರು ನಾಲ್ಕು ಲೋಟಗಳಷ್ಟು ಜ್ಯೂಸನ್ನೂ ಮಾಡಿದೆ. ನನಗೇನೋ ರುಚಿಯೆನ್ನಿಸಿತು. ಆದರೆ ಹೆತ್ತವರಿಗೆ ಹೆಗ್ಗಣವೂ ಮುದ್ದು ಎಂಬಂತಾಗಬಾರದು ಎಂದು ಪಕ್ಕದ ಮನೆಯವರೊಬ್ಬರಿಗೂ ಜ್ಯೂಸ್ ನೀಡಿದೆ. ಕುಡಿದ ಅವರು ಇದು ಕರಬೂಜದ ಜ್ಯೂಸ್ ಅಲ್ವಾ?” ಎಂದು ಕೇಳಿದರು. ಹಿಂದೊಮ್ಮೆ ಸ್ವಲ್ಪವೂ ಅರ್ಥವಾಗದಿದ್ದರೂ ಶ್ರವಣಸಂಸ್ಕಾರವಾಗಲಿ ಎಂದು ಕಿವಿಕೊಟ್ಟು ಕೇಳಿದುದರ ಫಲವೋ ಎಂಬಂತೆ ವ್ಯರ್ಥವಾಗಿ ತಿಪ್ಪೆಯನ್ನು ಸೇರಬೇಕಾಗಿದ್ದ ಸೌತೆಕಾಯಿಯ ತಿರುಳು ಜ್ಯೂಸಿನ ಲೋಕದಲ್ಲಿ ತನ್ನದೇ ಆದ ಪ್ರತಿಷ್ಠೆಯನ್ನು ಸ್ಧಾಪಿಸಿರುವ ಕರಬೂಜದ ಮಟ್ಟಕ್ಕೇರಿತ್ತು.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...