ಶುಕ್ರವಾರ, ನವೆಂಬರ್ 7, 2025

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥

ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯಣ ಕತೆ ಕೇಳಿದವರ ಪಾಪಗಳು ತೊಳೆದು ಹೋಗುವುದರಿಂದ ರಾಮಾಯಣವನ್ನು ಗಂಗೆಗೆ ಹೋಲಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಗಂಗೆ ಪಾಪಗಳನ್ನು ತೊಳೆಯಬೇಕಾದರೆ ನಾವು ಗಂಗೆಯಲ್ಲಿ ಇಳಿಯಬೇಕು. ಆದರೆ ರಾಮಾಯಣದ ವಿಚಾರದಲ್ಲಿ ಹಾಗಲ್ಲ. ರಾಮಾಯಣ ಪಾಪವನ್ನು ತೊಳೆಯಬೇಕಾದರೆ ರಾಮಾಯಣವೇ ನಮ್ಮೊಳಗೆ ಇಳಿಯಬೇಕು. 

ಸಾಮಾನ್ಯವಾಗಿ ರಾಮಾಯಣದ ಕತೆ ಭಾರತೀಯರೆಲ್ಲರಿಗೂ ತಿಳಿದಿದೆ. ಅತಿ ಹೆಚ್ಚು ಪಾಶ್ಚಾತ್ಯ ಜೀವನ ಶೈಲಿಗೆ ಒಗ್ಗಿಕೊಂಡ ಕೆಲವರಿಗೆ ರಾಮಾಯಣ ತಿಳಿದಿರಲಿಕ್ಕಿಲ್ಲ. ಅಂತಹವರೂ ಇಂದು ತಮ್ಮ ಮಕ್ಕಳಿಗೆ ರಾಮಾಯಣವನ್ನು ಕಲಿಸುವ ಪ್ರಯತ್ನ ಮಾಡುತ್ತಿರುವುದೂ ಕಂಡುಬರುತ್ತಿದೆ. ಅಯೋಧ್ಯೆಯ ರಾಮಮಂದಿರದ ಪುನರ್ನಿರ್ಮಾಣದ ನಂತರವಂತೂ ರಾಮನ ಕುರಿತಾದ ಭಕ್ತಿ ಜನರಲ್ಲಿ ಹೆಚ್ಚುತ್ತಿದೆ.

ಅನೇಕ ಕವಿಗಳು ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ಬರೆದಿದ್ದಾರೆ. ಅದರ ಕಥಾಭಾಗದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳೂ ಇವೆ. ಇವೆಲ್ಲದಕ್ಕೂ ಮೂಲ ವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ. ಸುಮಾರು ಇಪ್ಪತ್ತನಾಲ್ಕುಸಾವಿರ ಶ್ಲೋಕಗಳಿರುವ ರಾಮಾಯಣವನ್ನು ಸಾಮಾನ್ಯವೇಗದಲ್ಲಿ ನಿರಂತರವಾಗಿ ಓದಿದರೆ ಸುಮಾರು ಅರವತ್ತು ಘಂಟೆಗಳಷ್ಟು ಸಮಯದಲ್ಲಿ ಓದಬಹುದು. ರಾಮಾಯಣ ಕಥೆ ಗೊತ್ತಿರುವವರು ಹಾಗೂ ಸಾಮಾನ್ಯ ಶ್ಲೋಕಗಳ ಉಚ್ಚಾರಣೆಯ ಅಭ್ಯಾಸವಿರುವವರು ಸರಾಗವಾಗಿ ರಾಮಾಯಣದ ಪಾರಾಯಣ ಮಾಡಬಹುದು.

ರಾಮಾಯಣ ಜಗತ್ತಿನ ಆದಿಕಾವ್ಯ. ಆದರೆ ಅನೇಕ ಸಂಸ್ಕೃತ ವಿಶ್ವವಿದ್ಯಾಲಯಗಳ  ಪಾಠ್ಯಕ್ರಮದಲ್ಲಿ ರಾಮಾಯಣದ ಶ್ಲೋಕಗಳನ್ನು ಅಳವಡಿಸಲಾಗಿಲ್ಲ. ಸ್ಪಲ್ಪ ಪ್ರೌಢವಾದ ಬೇರೆ ಕಾವ್ಯಗಳನ್ನು ಓದಿದ ವಿದ್ಯಾರ್ಥಿಗಳು ರಾಮಾಯಣವನ್ನು ಸುಲಭವಾಗಿ ಓದಬಹುದು ಎಂಬ ಕಾರಣದಿಂದ ರಾಮಾಯಣವನ್ನು ಪಾಠ್ಯಕ್ರಮದಲ್ಲಿ ಇಟ್ಟಿರಲಿಕ್ಕಿಲ್ಲ ಎಂಬುವುದು ಅನೇಕರ ಊಹೆ. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದನ್ನೇ ಗುರಿಯಾಗಿಸಿಕೊಂಡಿರುವ ವಿದ್ಯಾರ್ಥಿಗಳು ರಾಮಾಯಣವನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಇಂತಹ ಮಹಾಕಾವ್ಯದ ಅಧ್ಯಯನವಾಗಬೇಕು ಎಂಬ ಆಸ್ಥೆಯಿಂದ 2016ರಲ್ಲಿ ಸಮಾನಮನಸ್ಕರಾದ ಕೆಲವು ವಿದ್ಯಾರ್ಥಿಗಳು ಸೇರಿ ಪ್ರತಿದಿನ ವಾಲ್ಮೀಕಿರಾಮಾಯಣ ಮಾಡುವುದಾಗಿ ನಿರ್ಧರಿಸಿದೆವು. ಸುಮಾರು 60 ದಿನಗಳ ಕಾಲ ಪ್ರತಿದಿನವೂ ಒಂದು ಗಂಟೆಯಂತೆ ರಾಮಾಯಣ ಪಾರಾಯಣ ನಡೆಯಿತು.

ತದನಂತರ 2019 ರಲ್ಲಿ ರಾಮಮಂದಿರದ ತೀರ್ಪು ಹೊರಬಿದ್ದ ಸಂತಸದಲ್ಲಿ ಬೆಂಗಳೂರಿನ ನಮ್ಮ ಕಛೇರಿಯಲ್ಲಿ ಅಖಂಡ ರಾಮಾಯಣ ಪಾರಾಯಣದ ಆಯೋಜನೆಯಾಯಿತು. ರಾಮಾಯಣ ಓದಲು ಸಾಮರ್ಥ್ಯವಿರುವ ಸುಮಾರು 30 ತಂಡಗಳನ್ನು ಗುರುತಿಸಿ ಅವರಿಗೆ ಎರಡು ಘಂಟೆಗಳ ಕಾಲಾವಧಿಯಲ್ಲಿ ಓದಬೇಕಾಗಿರುವ ಭಾಗವನ್ನು ನಿರ್ದೇಶಿಸಲಾಯಿತು. ಕಾರ್ಯಕ್ರಮದಲ್ಲಿ ಓದುತ್ತಿರುವ ತಂಡದ ವೇಗವನ್ನು ನಿಯಂತ್ರಿಸಿ ಕ್ಲೃಪ್ತ ಸಮಯದಲ್ಲಿ ಮುಗಿಯಬೇಕಾದಷ್ಟು ಅಧ್ಯಾಯಗಳನ್ನು ಮುಗಿಸಬೇಕಾದ ಜವಾಬ್ದಾರಿ ನನಗಿತ್ತು. ರಾತ್ರಿಯ ಕಾಲದ ಸಮಯ ನಿಯಂತ್ರಣವನ್ನು ನಾನು ನಿರ್ವಹಿಸುತ್ತಿದ್ದೆ.

ಆಮೇಲೆ 2023 ರಲ್ಲಿ ಬೆಂಗಳೂರಿನ 7 ಕಡೆಗಳಲ್ಲಿ 7 ಕಾಂಡಗಳ ಪಾರಾಯಣವನ್ನು ಪ್ರತಿ ಭಾನುವಾರವೂ ಆಯೋಜಿಸಲಾಯಿತು. ಸ್ಥಳೀಯ ಜನರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಯೋಗವೂ ನನ್ನದಾಗಿತ್ತು. ಶೃಂಗೇರಿ ಹಾಗೂ ಮಂಗಳೂರುಗಳಲ್ಲಿ ಅಖಂಡರಾಮಾಯಣ ಪಾರಾಯಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಸುದ್ದಿಯೂ ನನ್ನ ಕಿವಿಗೆ ಬಿದ್ದಿತ್ತು.

ಹೀಗೆ ಅನೇಕ ಕಡೆಗಳಲ್ಲಿ ವಾಲ್ಮೀಕಿರಾಮಾಯಣ ಪಾರಾಯಣಗಳಲ್ಲಿ ಸಕ್ರಿಯವಾಗಿದ್ದ ನನಗೆ ನಮ್ಮ ಮನೆಯಲ್ಲೂ ಪಾರಾಯಣ ಮಾಡಬೇಕು ಎಂದೆನಿಸಿತು. ಈ ಹಿಂದೆ 2024 ಹಾಗೂ 2025 ರಲ್ಲಿ ಹನುಮಜ್ಜಯಂತಿಯ ಹಿಂದಿನ ದಿನ ಸುಂದರಕಾಂಡದ ಪಾರಾಯಣವನ್ನೂ ನಾನು ಮಾಡಿದ್ದೆ. ಹೀಗೆ ನನ್ನ ಮನಸ್ಸಿನಲ್ಲಿ ಸುಪ್ತವಾಗಿದ್ದ ಕಲ್ಪನೆ 2025 ರ ಗಣೇಶ ಚತುರ್ಥಿಯ ಕಾಲದಲ್ಲಿ ಮೊಳಕೆಯೊಡೆಯಿತು.

ರಾಮಾಯಣ ಪಾರಾಯಣದ ವಿಧಿ, ಪ್ರತಿದಿನವೂ ಓದಬೇಕಾದ ಅಧ್ಯಾಯಗಳ ವಿಭಾಗ, ರಾಮಾಯಣ ಪಾರಾಯಣಕ್ಕೆ ಸೂಕ್ತ ಕಾಲ ಮುಂತಾದ ವಿವರಣೆಗಳೆಲ್ಲಾ ರಾಮಾಯಣ ಗ್ರಂಥದಲ್ಲಿದ್ದವು. ಪ್ರತಿದಿನವೂ 6-7 ಗಂಟೆಗಳ ಪಾರಾಯಣ ಮಾಡಬೇಕಾಗಿ ಬರುತ್ತದೆ ಎಂಬ ಅರಿವಿತ್ತು. ರಾಮಾಯಣ ಪಾರಾಯಣದ ಶ್ರೋತೃವಾಗಿ ಹನುಮಂತನನ್ನು ಪ್ರತಿಷ್ಠಾಪಿಸುವುದು, ರಾಮಪೂಜೆಗೆ ಕೋಸಂಬರಿ ಹಾಗೂ ಪಾನಗಳ ನೈವೇದ್ಯ ಮಾಡುವುದು ಮೊದಲಾದ ಕ್ರಮಗಳಂತೂ ಜಗತ್ಪ್ರಸಿದ್ಧ. ಆದ್ದರಿಂದ ಪ್ರತಿದಿನ ಬೆಳಗ್ಗೆ ಪಾರಾಯಣ ಆರಂಭಿಸಿ ಸಂಜೆಯ ಕಾಲಕ್ಕೆ ಕೆಲವು ಅಧ್ಯಾಯಗಳನ್ನು ಉಳಿಸಿಕೊಂಡು ಸಂಜೆ 6 ಗಂಟೆಗೆ ಮುಗಿಯುವಂತೆ ಪಾರಾಯಣ ಮಾಡಿ ರಾಮನಿಗೆ ಮಂಗಳಾರತಿ ಮಾಡುವುದು. ಕೋಸಂಬರಿ-ಪಾನಕಗಳ ನೈವೇದ್ಯ ಮಾಡಿ ಸುತ್ತಮುತ್ತಲಿನ ಹತ್ತಿಪ್ಪತ್ತು ಜನರನ್ನು ಕರೆದು ಹಂಚುವುದು ಎಂಬ ಯೋಚನೆಯಿತ್ತು.

ಮನೆಯ ಹಿರಿಯರೊಂದಿಗೆ ಈ ಯೋಚನೆಯನ್ನು ತಿಳಿಸಿದಾಗ ಪಾರಾಯಣಕ್ಕೆ ಸಂತಸದಿಂದಲೇ ಸಮ್ಮತಿಸಿದರು. ಆದರೆ ಪಾನಕ-ಕೋಸಂಬರಿ ಮಾತ್ರ ಹಂಚುವ ಯೋಜನೆಗೆ ಸಮ್ಮತಿಯಿರಲಿಲ್ಲ. ಇಂತಹ ಅಪರೂಪದ ಕಾರ್ಯಕ್ರಮವನ್ನು ಸ್ವಲ್ಪಮಟ್ಟಿದೆ ವಿಜೃಂಭಣೆಯಿಂದಲೇ ಮಾಡಬೇಕು ಎಂಬುವುದು ಮನೆಯ ಸದಸ್ಯರ ಅಭಿಪ್ರಾಯವಾಗಿತ್ತು. ವಿಶಿಷ್ಟ ಕಾರ್ಯಕ್ರಮವಾದ್ದರಿಂದ ನೆರೆಕರೆಯವರನ್ನೂ ಬಂಧು ಮಿತ್ರರನ್ನೂ ಕರೆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಆದ್ದರಿಂದ ಪ್ರತಿದಿನ ಮಧ್ಯಾಹ್ನವೇ ಮಹಾಮಂಗಳಾರತಿ ಮಾಡಿ ಬಂದವರಿಗೆಲ್ಲರಿಗೂ ಊಟದ ವ್ಯವಸ್ಥೆ ಮಾಡುವುದು ಸೂಕ್ತ ಎಂಬ ನಿರ್ಣಯವಾಯಿತು.  ಒಂಭತ್ತು ದಿನಗಳ ಕಾರ್ಯಕ್ರಮವಾದುದರಿಂದ ಪ್ರತಿದಿನವೂ ಮರುದಿನದ ತಯಾರಿಗಳೂ ನಡೆಯಬೇಕು. ಆದುದರಿಂದ ರಾತ್ರಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳದೇ ಭಜನೆ ಹಾಗೂ ರಾಮನಿಗೆ ಪಂಚೋಪಚಾರ ಪೂಜೆಯನ್ನಷ್ಟೇ ಮಾಡುವುದು ಎಂದ ತೀರ್ಮಾನಿಸಲಾಯಿತು. ದೀಪಾವಳಿಯ ನಂತರ ಕಾರ್ತಿಕ ಪಂಚಮಿಯಿಂದ ತ್ರಯೋದಶಿಯವರೆಗೆ (26.10.2025 ರಿಂದ 03.11.2025) ಕಾರ್ಯಕ್ರಮ ನಡೆಸುವುದಾಗಿ ದಿನಾಂಕವನ್ನೂ ನಿರ್ಧರಿಸಲಾಯಿತು.

ರಾಮಾಯಣದ ಕುರಿತಾದ ಉಪನ್ಯಾಸಗಳನ್ನು ಯೋಜಿಸಿದರೆ ಕಾರ್ಯಕ್ರಮ ಇನ್ನೂ ಉತ್ತಮವಾಗಬಹುದು ಎಂಬ ಅಭಿಪ್ರಾಯವೂ ಬಂದಿತು. ಜನರೆಲ್ಲ ಸಭಾ ಕಾರ್ಯಕ್ರಮಗಳನ್ನು ನೋಡಿ ನೋಡಿ ರೋಸಿ ಹೋಗಿರುವುದರಿಂದ ಉಪನ್ಯಾಸಕರ ಪರಿಚಯ, ಒಂದು ರಾಮಭಜನೆ, ಕೊನೆಯಲ್ಲಿ ಉಪನ್ಯಾಸಕರಿಗೆ ಸನ್ಮಾನ ಇವಿಷ್ಟು ಕಾರ್ಯಕ್ರಮಗಳು 50 ನಿಮಿಷಗಳಲ್ಲಿ ಮುಗಿಯುವಂತೆ ಉಪನ್ಯಾಸಗಳನ್ನು ಪ್ರತಿದಿನವೂ ಯೋಜಿಸಲಾಯಿತು. ಉಪನ್ಯಾಸಕರನ್ನು ಜೋಡಿಸುವುದಕ್ಕೆ ಎರಡು ತಿಂಗಳುಗಳ ಸಮಯವಿದ್ದುದರಿಂದ ವಿದ್ವಾಂಸರ ಸಂಪರ್ಕವನ್ನಾರಂಭಿಸಿದೆ. ಹೆಚ್ಚು ಕಷ್ಟವಿಲ್ಲದೇ ವಿದ್ವಾಂಸರು ಬರಲು ಒಪ್ಪಿದರು. ರಾಮಾಯಣದ ಕತೆ ಎಲ್ಲರಿಗೂ ಗೊತ್ತಿರುವುದರಿಂದ ಕೆಲವೊಂದಿಷ್ಟು ನಿರ್ದಿಷ್ಟ ವಿಷಯಗಳನ್ನು ಸೂಚಿಸಲಾಯಿತು. ಆ ವಿಷಯಗಳನ್ನು ಆಶ್ರಯಿಸಿ ವಿದ್ವಾಂಸರ ವ್ಯಾಖ್ಯಾನವಾಯಿತು. ವಿಷಯಗಳು ಈ ಕೆಳಕಂಡಂತಿವೆ.


ದಿನಾಂಕ

ವಿಷಯ

ವ್ಯಾಖ್ಯಾನಕಾರರು

26.10.2025
ಭಾನುವಾರ

ಕಾರ್ಯಸಾಧಕ ಹನುಮಂತ

ಶ್ರೀ. ರವಿಶಂಕರ ಭಟ್ಟ
ತಂತ್ರಜ್ಞಾನ ಸಹಾಯಕರು, ಶೃಂಗೇರಿ

27.10.2025
ಸೋಮವಾರ

ರಾಮಾಯಣದ ಹೃದಯ ಅಯೋಧ್ಯಾಕಾಂಡ

ಶ್ರೀ ಉಮಾಮಹೇಶ್ವರ
ರಾಮಾಯಣ ವಿದ್ವಾಂಸರು, ಬೆಂಗಳೂರು

28.10.2025
ಮಂಗಳವಾರ

ಲಕ್ಷ್ಮಣ ಹಾಗೂ ಭರತ

ಶ್ರೀ ಮಹೇಶ ಕಾಕತ್ಕರ್
ಉಪನ್ಯಾಸಕರು, ಶೃಂಗೇರಿ

29.10.2025
ಬುಧವಾರ

ರಾವಣನಿಗೆ ಉಪದೇಶಗಳು

ಶ್ರೀ. ದಿನಕರ ಗೋಖಲೆ
ಯಕ್ಷಗಾನ ಕಲಾವಿದರು, ದರ್ಭೆತಡ್ಕ

30.10.2025
ಗುರುವಾರ

ರಾಮಾಯಣದಲ್ಲಿ ಜೀವನಪ್ರೀತಿ

ಶ್ರೀ. ರಾಘವೇಂದ್ರ ಭಟ್ಟ
ಉಪನ್ಯಾಸಕರು, ಶೃಂಗೇರಿ

31.10.2025
ಶುಕ್ರವಾರ

ರಾಮನ ಆದರ್ಶ ಗುಣಗಳು

ಶ್ರೀಮತೀ ಪ್ರತಿಭಾ
ಗೃಹಿಣಿ, ಬೆಂಗಳೂರು

01.11.2025
ಶನಿವಾರ

ಕಷ್ಟಸಹಿಷ್ಣು ರಾಮ

ಶ್ರೀ. ಪದ್ಮನಾಭ ಮರಾಠೆ
ಉಪನ್ಯಾಸಕರು, ಕಟೀಲು

02.11.2025
ಭಾನುವಾರ

ಲೋಕಮಾತೆ ಸೀತೆ

ಶ್ರೀ ವೆಂಕಟೇಶ ಕುಮಾರ
ಶಿಕ್ಷಕರು, ಸುಳ್ಯ

03.11.2025
ಸೋಮವಾರ

ರಾಮಾಯಣದ ಮಹತ್ತ್ವ

ಶ್ರೀ. ಟಿ. ಎನ್. ಪ್ರಭಾಕರ
ಸಂಸ್ಕೃತ ವಿದ್ವಾಂಸರು, ಮೈಸೂರು


25.10.2025 ರಂದು ಪುಣ್ಯಾಹವಾಚನ ಹಾಗೂ ಗಣಹವನದೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಆದಿನ ರಾಮಾಯಣದ ಮಾಹಾತ್ಮ್ಯದ ಪಾರಾಯಣ ಮಾಡಲಾಯಿತು. ಮೊದಲೇ ಸಿದ್ಧವಾಗಿದ್ದ ಮಂಟಪದಲ್ಲಿ ಪುಸ್ತಕಗಳನ್ನು ಸ್ಥಾಪಿಸಲಾಯಿತು. ನಮ್ಮ ಮನೆಯಲ್ಲಿದ್ದ 3 ಸೆಟ್ ಪುಸ್ತಕಗಳು, ನಮ್ಮ ಊರಿನ ಪುರೋಹಿತರು ಕೊಟ್ಟಿದ್ದ 1 ಸೆಟ್ ಪುಸ್ತಕ, ನಾನು ಗ್ರಂಥಾಲಯದಿಂದ ತಂದಿದ್ದ 2 ಸೆಟ್ ಪುಸ್ತಕಗಳು, ದಾನ ಕೊಡಲು ಖರೀದಿಸಿದ್ದ 1 ಸೆಟ್ ಪುಸ್ತಕ ಹೀಗೆ ಒಟ್ಟು 7 ಸೆಟ್ ಪುಸ್ತಕಗಳನ್ನು ಸ್ಥಾಪಿಸಲಾಯಿತು. ದೇವನಾಗರಿ ಲಿಪಿಯ ಒಂದೇ ಪುಸ್ತಕದಲ್ಲಿ ಇಡಿಯ ರಾಮಾಯಣ ಮುದ್ರಿತವಾಗಿತ್ತು. ಕನ್ನಡದ ಲಿಪಿಯ ಒಂದು ಸೆಟ್ ನಲ್ಲಿ ತಲಾ ಮೂರು ಪುಸ್ತಕಗಳಿದ್ದವು. ಮತ್ತೊಂದರಲ್ಲಿ 12 ಪುಸ್ತಕಗಳ ಎರಡು ಸೆಟ್ ಪುಸ್ತಗಳಿದ್ದವು. ಹೀಗೆ ಒಟ್ಟು 36 ಪುಸ್ತಕಗಳು ಮಂಟಪದಲ್ಲಿದ್ದವು. ಪುಸ್ತಕಗಳ ಹಿಂದ ರಾಮ-ಸೀತೆ-ಲಕ್ಷ್ಮಣ-ಹನುಮಂತರ ಚಿತ್ರ ಸ್ಥಾಪಿಸಲಾಯಿತು. ನಮ್ಮ ತೋಟದಲ್ಲಿ ನೆಲೆಯಾಗಿರುವ ಹನುಮಂತನ ಆವಾಹನೆಯನ್ನು ತೆಂಗಿನಕಾಯಿಯಲ್ಲಿ ಮಾಡಿ ಶ್ರೋತೃವಿನ ಪೀಠದಲ್ಲಿ ಕುಳ್ಳಿರಿಸಲಾಯಿತು. ಪುಣ್ಯಾಹವಾಚನದ ನಂತರ ರಾಮಾಯಣಮಾಹಾತ್ಮ್ಯ ಓದಲಾಯಿತು.

ಮರುದಿನದಿಂದ ಪ್ರತಿದಿನವೂ ಬೆಳಗ್ಗೆ ರಾಮಾಯಣ ಗ್ರಂಥಗಳಿಗೆ ಪಂಚೋಪಚಾರ ಪೂಜೆ ಹಾಗೂ ರಾಮತಾರಕ ಜಪದ ನಂತರ 5.30 ಕ್ಕೆ ಪಾರಾಯಣದ ಆರಂಭವಾಗುತ್ತಿತ್ತು. ಮಧ್ಯದಲ್ಲಿ ಪಾನೀಯ ಹಾಗೂ ತಿಂಡಿಗೆ ಎರಡು ಸಣ್ಣ ವಿರಾಮಗಳನ್ನು ಕೊಟ್ಟು 11.30 ಕ್ಕೆ ಮುಗಿಯುವಂತೆ ಪಾರಾಯಣ ಮಾಡಲಾಗುತ್ತಿತ್ತು. ಒಂದೆರಡು ದಿನ 11.30 ಕ್ಕೆ ಆ ದಿನದ ಭಾಗ ಮುಗಿಯದಾಗ ರಾತ್ರಿ ಪೂಜೆಯ ಮೊದಲು ಉಳಿದ ಭಾಗವನ್ನು ಓದಲಾಯಿತು. 11.30 ಕ್ಕೆ ಆರಂಭಿಸಿ ನೈವೇದ್ಯ ಹಾಗೂ ಮಂಗಳಾರತಿ  ಮಾಡಲಾಗುತ್ತಿತ್ತು. ಮಂಗಳಾರತಿಯ ಆರಂಭದಲ್ಲಿ ತುಪ್ಪದ ದೀಪಗಳನ್ನು ಹೆಂಗಸರು ಎತ್ತುತ್ತಿದ್ದರು. ಮಂಗಳಾರತಿಯ ನಂತರ ವೈದಿಕರ ಪೂಜೆ ನಡೆದು ತದನಂತರ ವ್ಯಾಖ್ಯಾನ ನಡೆಯುತ್ತಿತ್ತು. ವ್ಯಾಖ್ಯಾನದ ನಂತರ ಪ್ರಸಾದ ವಿತರಣೆ ನಡೆಯುತ್ತಿತ್ತು. ಪಂಚಗಜ್ಜಾಯದ ಪ್ಯಾಕೆಟ್-ಗಳನ್ನು ಹೂವಿನ ಪ್ರಸಾದದೊಂದಿಗೆ ಎಲ್ಲರಿಗೂ ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳೂ ನಡೆದು ಪ್ರತಿದಿನವೂ ಮಧ್ಯಾಹ್ನ 1.00 – 1.15 ರ ಒಳಗೆ ಮೊದಲನೇ ಪಂಕ್ತಿಯ ಊಟ ಆರಂಭವಾಗುತ್ತಿತ್ತು. ಪ್ರತಿದಿನ ಸಂಜೆ ಭಜನೆ ಹಾಗೂ ಪಂಚೋಪಚಾರ ಪೂಜೆ ನಡೆಲಾಗುತ್ತಿತ್ತು. 02.10.2025 ಏಕಾದಶಿಯಂದು ನಮ್ಮೂರಿನ ಭಜನಾ ಮಂಡಳಿಯವರು ಉಪಸ್ಥಿತರಿದ್ದು ಸುಮಾರು ಎರಡು ಗಂಟೆಗಳ ಕಾಲ ಭಜನೆ ಸೇವೆ ನಡೆಸಿದರು.

ಒಂದು ಕಾರ್ಯಕ್ರಮವನ್ನು ತಾವೇ ಮುತುವರ್ಜಿ ವಹಿಸಿಕೊಂಡು ನಡೆಸುವಾಗ ಆತಂಕಗಳಾಗುವುದು ಸಹಜ. ನಮ್ಮ ಮನೆಯವರೆಲ್ಲರಿಗೂ ಮೊದಲ ದಿನದಿಂದಲೇ ಇಂತಹ ಆತಂಕಗಳಿತ್ತು. ಆದರೆ ಕ್ರಮೇಣ ಊರಿನ ಜನರ ಹಾಗೂ ಬಂಧು ಬಾಂಧವರ ಸಹಕಾರದಿಂದ ಆತಂಕ ಕಡಿಮೆಯಾಗತೊಡಗಿತು. ಪಾರಾಯಣ ಆರಂಭದ ಹಿಂದಿನ ದಿನವೇ ಊರಿನ ಉತ್ಸಾಹಿ ತರುಣರ ತಂಡದವರು ಬಂದು ಅಲಂಕಾರಗಳನ್ನು ಮಾಡಿದರು. ಊರಿನ ಜನರು ಬಾಳೆಗೊನೆ, ಬಾಳೆಎಲೆ, ತೆಂಗಿನಕಾಯಿ ಹಾಗೂ ಕೆಲವೊಂದಿಷ್ಟು ದಿನಸಿ ಸಾಮಾನುಗಳನ್ನೂ ತಂದು ಕೊಟ್ಟರು. ಕೆಲವರು ಸ್ವೀಟಿನ ಪ್ರಾಯೋಜಕತ್ವವನ್ನು ವಹಿಸಿಕೊಂಡರು. ಕೆಲವು ಹೆಂಗಸರು ಬೇಗ ಬಂದು ಹೂವು ಕಟ್ಟುವುದು, ಆರತಿಯ ಅಲಂಕಾರ ಮುಂತಾದ ಕೆಲಸಗಳಲ್ಲಿ ಸಹಕರಿಸಿದರು. ತರಕಾರಿ ಹೆಚ್ಚುವುದು ಬಡಿಸುವುದು ಮೊದಲಾದ ಜವಾಬ್ದಾರಿಗಳನ್ನು ಊರಿನ ಜನರೇ ವಹಿಸಿಕೊಂಡು ಪರಸ್ಪರ ಸಮಾಲೋಚನೆ ನಡೆಸಿ ಪಾಳಿಯಂತೆ ನಿರ್ವಹಿಸಿದರು. ವ್ಯಾಖ್ಯಾನದ ಮೊದಲು ಭಜನೆ ಹಾಡುವುದರ ಮೂಲಕ ವ್ಯಾಖ್ಯಾನದ ಪ್ರಭಾವ ಹೆಚ್ಚಿಸಬೇಕು ಎಂದು ಕೇಳಿಕೊಂಡ ತತ್ಕ್ಷಣ ಸಂತೋಷದಿಂದ ಒಪ್ಪಿ ಭಜನೆ ಹಾಡಿದರು. ಹಳ್ಳಿಗಳೆಂದರೆ ವೃದ್ಧಾಶ್ರಮದಂತಾಗಿರುವ ಸ್ಥಿತಿಯಲ್ಲೂ ಇಂತಹ ಕಾರ್ಯಕ್ರಮದಲ್ಲಿ ಜನರೆಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದು ಎಲ್ಲರಿಗೂ ಆಶ್ಚರ್ಯವಾಗಿತ್ತು. ಕೆಲವು ಬಂಧುಗಳು ಒಂದೆರಡು ದಿನ ನಮ್ಮ ಮನೆಯಲ್ಲೇ ವಾಸವಿದ್ದು ಎಲ್ಲಾ ಕೆಲಸಗಳಲ್ಲೂ ಸಹಕರಿಸಿದರು.

ಮಂಗಳೂರಿನ ಅಜ್ಜ ಕಾರ್ಯಕ್ರಮ ನಡೆಯುವಾಗ ಅಷ್ಟೂ ದಿನಗಳೂ ಜತೆಯಾಗಿದ್ದರು. ಅಜ್ಜಿ ಚುರುಕಾಗಿ ಓಡಾಡುತ್ತಾ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದರು. ನನ್ನ ಚಿಕ್ಕಮ್ಮ ಹಾಗೂ ಹೆಂಡತಿ ಪ್ರತಿದಿನವೂ ಅಡುಗೆಯ ಕುರಿತಾಗಿ ಗಮನ ಹರಿಸುವುದರ ಜೊತೆ ಪೂಜೆಯ ತಯಾರಿ, ಅಲಂಕಾರ, ರಂಗೋಲಿ, ಅತಿಥಿಸತ್ಕಾರ ಮುಂತಾದ ಕೆಲಸಗಳನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದರು. ಅಪ್ಪ ಪೂಜೆಯ ತಯಾರಿ ನೋಡಿಕೊಂಡರೆ ಚಿಕ್ಕಪ್ಪ ಅಡುಗೆ ಊಟ ಮುಂತಾದ ವಿಷಯಗಳಲ್ಲಿ ಗಮನವಹಿಸುತ್ತಿದ್ದರು. ನನ್ನ ತಮ್ಮ ದೂರದೂರಿನಿಂದ ಬರುವವರನ್ನು ಕರೆತರುವ ವ್ಯವಸ್ಥೆ, ಛಾಯಾಚಿತ್ರ ತೆಗೆಯುವುದು ಮುಂತಾದುವುಗಳನ್ನು ಮಾಡುತ್ತಿದ್ದ. ಅಡುಗೆಯ ಜವಾಬ್ದಾರಿ ವಹಿಸಿಕೊಂಡಿದ್ದ ದಿನೇಶ ಅಭ್ಯಂಕರ್ ಹಾಗೂ ಸೀತಾರಾಮ ತಾಮ್ಹಣ್ಕರ್ ರುಚಿಯಾದ ಅಡುಗೆಯನ್ನು ಮಾಡುತ್ತಿದ್ದರು. ಪ್ರತಿದಿನವೂ ಎಷ್ಟು ಜನ ಆಗಮಿಸಬಹುದು ಎಂದು ನಿಖರವಾಗಿ ಊಹಿಸುವುದು ಕಷ್ಚಸಾಧ್ಯವಾಗಿತ್ತು. ಅದಾಗ್ಯೂ ಸಾಮಾನ್ಯವಾಗಿ ಯಾವ ದಿನವೂ ಅಡುಗೆ ಎಸೆದು ಹಾಳುಮಾಡುವಷ್ಟು ಉಳಿಯಲಿಲ್ಲ. ಕಡಿಮೆಯೂ ಆಗಲಿಲ್ಲ.

ಬಂಧುವೊಬ್ಬರು 9 ದಿನಗಳ ಪಾರಾಯಣದಲ್ಲಿ ಎಂಟು ದಿನವೂ ಉಪಸ್ಥಿತರಿದ್ದರು. ಮನೆ ತುಂಬಾ ದೂರವಿದ್ದರೂ ನಾಲ್ಕೈದು ದಿನಗಳ ಕಾಲ ಊರಿನ ಅನೇಕರು ತಮ್ಮ ಮನೆಯ ಸಮಸ್ಯೆಗಳನ್ನೂ, ಆರೋಗ್ಯ ಬಾಧೆಯನ್ನೂ, ವಯಸ್ಸನ್ನೂ ಲೆಕ್ಕಿಸದೆ ಉಪಸ್ಥಿತರಿದ್ದರು. ಕೆಲವರಂತೂ ಮುಂಜಾನೆ ಕೆಲಸದಲ್ಲಿ ಸಹಾಯ ಮಾಡಲು, ವ್ಯಾಖ್ಯಾನ ಕೇಳಲು ಮಧ್ಯಾಹ್ನ ಹೀಗೆ ಎರಡೆರಡು ಬಾರಿಯೂ ಬರುತ್ತಿದ್ದರು. ದೂರದ ಬೆಂಗಳೂರು ಮುಂತಾದ ಊರುಗಳಿಂದಲೂ ಉಪಸ್ಥಿತರಿದ್ದ ಜನ ಪಾರಾಯಣದಲ್ಲಿ ಭಾಗವಹಿಸಿದರು.

ಪ್ರತಿದಿನವೂ ಪಾರಾಯಣಕ್ಕೆ ಮೊದಲು ಆ ದಿನದ ಭಾಗವಿರುವ ಪುಸ್ತಕಗಳನ್ನು ನಾನು ಮಂಟಪದಿಂದ ತೆಗೆದಿರಿಸಲಾಗುತ್ತಿತ್ತು. ಶ್ರೋತೃಗಳಾಗಿ ಬಂದವರೂ ಪುಸ್ತಕವನ್ನು ನೋಡುತ್ತಾ ಪಾರಾಯಣ ಕೇಳಲು ಅನುಕೂಲವಾಗುತ್ತಿತ್ತು. ರಾಮಾಯಣ ಓದಿ ಅಭ್ಯಾಸವಿದ್ದವರು ಮುಖ್ಯ ವಕ್ತೃವಿನೊಂದಿಗೆ ದನಿಗೂಡಿಸುತ್ತಿದ್ದರು. ಪ್ರತಿದಿನವೂ ಕೊನೆಯ ಅಧ್ಯಾಯವನ್ನು ನಿಧಾನವಾಗಿ ಉಚ್ಚಸ್ವರದಲ್ಲಿ ಓದಲಾಗುತ್ತಿತ್ತು. ಇದರಿಂದ ಸುಮಾರು 7-8 ಜನ ಒಟ್ಟಾಗಿ ಕೊನೆಯ ಅಧ್ಯಾಯವನ್ನು ಓದುವುದು ಕಂಡುಬರುತ್ತಿತ್ತು.

ಪ್ರಥಮ ದಿನ 60, ಮುಂದಿನ ಮೂರು ದಿನಗಳ ಕಾಲ 35-40, ಐದು ಹಾಗೂ ಆರನೆಯ ದಿನ ಸುಮಾರು 60 ಕೊನೆಯ ಮೂರು ದಿನಗಳಲ್ಲಿ ಸುಮಾರು 100 ಕ್ಕಿಂತಲೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. 03.11.20225  ರಂದು ಕೊನೆಯ ದಿನ ಹನುಮಂತನನ್ನು ತೋಟದಲ್ಲಿ ಪುನಃ ಸ್ಥಾಪಿಸಿ ರಾಮಾಯಣ ಮಾಹಾತ್ಮ್ಯವನ್ನು ಓದುವುದರೊಂದಿಗೆ ರಾಮಾಯಣ ನವಾಹ ಸುಸಂಪನ್ನವಾಯಿತು.

(ಇಲ್ಲಿ ಸಹಕರಿಸಿದವರ ಹೆಸರನ್ನು ಉಲ್ಲೇಖಿಸಿದರೆ ಯಾರದ್ದಾದರೂ ಹೆಸರು ಬಿಟ್ಟು ಹೋಗುವುದು ಖಂಡಿತ. ಅಷ್ಟು ಜನ ಸಹಕಾರ ಮಾಡಿದ್ದಾರೆ. ಆದ್ದರಿಂದ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ.)














ಸೋಮವಾರ, ಜೂನ್ 16, 2025

दत्तपदी (वृष्टिः अथवा यक्षगानम्)

 

15.06.2025 तमे दिनाङ्के उडुपिनगरे राजाङ्गणे वेङ्कटराम-ऐताळवर्यस्य संस्मरणकार्यक्रमाङ्गत्वेन आयोजिते डा. रामकृष्णपेजत्तायमहोदयस्य अष्टावधाने अहम् दत्तपदिविभागस्य पृच्छकः आसम् । तत्र मया हर, शिव, शङ्कर, शम्भु इत्येतानि पदानि विन्यस्य वृष्टिकालस्य अथवा यक्षगानस्य वर्णनं करणीयम् इति मया दत्तपदिविभागे प्रश्नः पृष्टः । अवधानिना रामकृष्णपेजत्तायवर्येण वृष्टिविषये पद्यं रचितम् । मया श्लेषानुप्राणितोपमालङ्कारं प्रयुज्य यक्षगानं वर्षणसदृशम् इति वर्णितम् । तद्यथा –


सन्तापनादिहरणं रसदृष्टिहेतु-

-रिन्द्रप्रभावजनितं निशि वल्गुनादम् ।

चापाशुगांशमनिशं करविप्रयोगं

स्याद्वर्षणेन सदृशम्भुवि यक्षगानम् ॥

 

पदच्छेदः – सन्तापनादिहरणं रसदृष्टिहेतुः इन्द्रप्रभावजनितं निशि वल्गुनादम् चापाशुगांशमनिशं करविप्रयोगं स्याद्वर्षणेन सदृशं भुवि यक्षगानम् ।

 

अन्वयः - सन्तापनादिहरणं रसदृष्टिहेतुः इन्द्रप्रभावजनितं निशि वल्गुनादम् चापाशुगांशमनिशं करविप्रयोगं वर्षणेन सदृशं यक्षगानं स्यात् ।

 

यक्षगानं वर्षणेन सदृशं स्यात् । कथं वर्षणेन सदृशम् ? इत्यत्र उक्ताः साधारणधर्माः वर्षणम् इत्यत्र, यक्षगानम् इत्यत्र अपि अन्वयं प्राप्नुवन्ति । तद्यथा –

 

पदम्

वर्षणपक्षे

यक्षगानपक्षे

सन्तापनादिहरणम्

सूर्यतापः धूलिः इत्यादीनां नाशकम्

मनसः तापः म्लानता इत्यादीनां नाशकं

रसदृष्टिहेतुः

जलदर्शने कारणम्

शृङ्गारादिरसानां दर्शने कारणम्

इन्द्रप्रभावजनितम्

वृष्टिदेवता इन्द्रः, तत्प्रभावेन जनितम्

नाट्यम् इन्द्रसभायां प्रथमं प्रवृत्तमिति शास्त्रं वदति । तथा च यक्षगानेऽपि सामान्यतः सर्वासु कथासु इन्द्रप्रभावोऽपि भवति ।

निशि वल्गुनादम्

रात्रौ हितकारिणं नादं बिभर्ति

रात्रौ यक्षगानं प्रवर्तते । तस्य नादः हितकरः भवति ।

चापाशुगांशम्

इन्द्रधनुषः, वायोः च अंशेन युक्तम्

धनुषः, बाणस्य च अंशेन युक्तम् । नाट्ये धनुः बाणश्च प्रदर्श्यते ।

अनिशम्

निरन्तरम्

निरन्तरम्

करविप्रयोगम्

सूर्यकिरणानां प्रयोगरहितम् । अन्धकारयुतम् इति तात्पर्यम् । अथवा कस्य जलस्य रवेः सूर्यस्य च प्रयोगः दर्शनं यत्र । वृष्टिकाले सूर्यस्य दर्शनं विरलम् इत्यभिप्रायः ।

अथवा कस्य जलस्य रवेः सूर्यस्य च प्रयोगः । कदाचित् वृष्टिः कदाचित् सूर्यः इत्यभिप्रायः ।

करस्य हस्तस्य विशिष्टप्रयोगः यत्र तादृशं यक्षगानम् ।

 

अत्र हरणम् इत्यत्र हर इति पदस्य, निशि वल्गुनादम् इत्यत्र शिव इति पदम्, अनिशं करविप्रयोगम् इत्यत्र शङ्कर इति पदम्, सदृशं भुवि इत्यत्र च शम्भु इति पदं च दृश्यते ।

 


15.06.2025 ರಂದು ಉಡುಪಿಯ ರಾಜಾಂಗಣದಲ್ಲಿ ವೆಂಕಟರಾಮ ಐತಾಳರ ಸಂಸ್ಮರಣೆಯ ಅಂಗವಾಗಿ ರಾಮಕೃಷ್ಣ ಪೆಜತ್ತಾಯರ ಅಷ್ಟಾವಧಾನ ಕಾರ್ಯಕ್ರಮ ನಡೆಯಿತು. ಅವದಾನದಲ್ಲಿ ನಾನು ದತ್ತಪದಿ ಪೃಚ್ಛಕನಾಗಿದ್ದೆ. ಹರ, ಶಿವ, ಶಂಕರ, ಶಂಭು ಎಂಬ ಪದಗಳನ್ನು ಬಳಸಿಕೊಂಡು ಮಳೆ ಅಥವಾ ಯಕ್ಷಗಾನದ ವರ್ಣನೆ ಮಾಡಬೇಕು ಎಂದು ಪ್ರಶ್ನೆ ಕೇಳಿದ್ದೆ. ಅವಧಾನಿಗಳು ಮಳೆಯನ್ನು ವರ್ಣಿಸಿದರು. ನಾನು ಯಕ್ಷಗಾನ ಮಳೆಯಂತೆ ಎಂದು ವರ್ಣಿಸಿ ಸಾಧಾರಣಧರ್ಮಗಳಾಗಿ ಶ್ಲೇಷಪೂರ್ಣಪದಗಳನ್ನು ಬಳಸಿದ್ದೆ. ಪದ್ಯ ಈ ಕೆಳಗಿನಂತಿದೆ.

 

ಸಂತಾಪನಾದಿಹರಣಂ ರಸದೃಷ್ಟಿಹೇತು

ರಿಂದ್ರಪ್ರಭಾವಜನಿತಂ ನಿಶಿ ವಲ್ಗುನಾದಮ್

ಚಾಪಾಶುಗಾಂಶಮನಿಶಂ ಕರವಿಪ್ರಯೋಗಂ

ಸ್ಯಾದ್ವರ್ಷಣೇನ ಸದೃಶಂ ಭುವಿ ಯಕ್ಷಗಾನಂ

 

ಪದ್ಯದ ಪದಚ್ಛೇದ ಹಾಗೂ ಅನ್ವಯಗಳನ್ನು ಮೇಲಿರುವ ಸಂಸ್ಕೃತ ಆವೃತ್ತಿಯಲ್ಲಿ ಕಾಣಬಹುದು. ಶ್ಲೇಷಯುಕ್ತ ಪದಗಳು ಹೀಗಿವೆ.

 

ಪದ

ಮಳೆ ಎಂಬ ಅರ್ಥದಲ್ಲಿ

ಯಕ್ಷಗಾನ ಎಂಬ ಅರ್ಥದಲ್ಲಿ

ಸಂತಾಪನಾದಿ ಹರಣಂ

ಸೂರ್ಯನ ಬಿಸಿಲು, ಧೂಳು ಮುಂತಾದುವುಗಳನ್ನು ನಾಶಮಾಡುವ

ಮನಸ್ಸಿನ ತಾಪಗಳನ್ನೂ, ಬೇಸರ ಮುಂತಾದುವುಗಳನ್ನೂ ದೂರಗೊಳಿಸುವ

ರಸದೃಷ್ಟಿಹೇತುಃ

ನೀರು ಕಾಣಿಸಿಕೊಳ್ಳಲು ಕಾರಣವಾಗುವ

ಶೃಂಗಾರಾದಿ ರಸಗಳನ್ನು ಕಾಣಲು ಕಾರಣವಾಗುವ

ಇಂದ್ರಪ್ರಭಾವಜನಿತಮ್

ಮಳೆಯ ದೇವತೆ ಇಂದ್ರ. ಆತನ ಪ್ರಭಾವದಿಂದ ಜನಿಸಿದ

ನಾಟ್ಯ ಇಂದ್ರನ ಸಭೆಯಲ್ಲೇ ಆರಂಭವಾಯಿತು ಎಂಬುದಾಗಿ ನಾಟ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಅಂತೆಯೇ ಯಕ್ಷಗಾನದಲ್ಲೂ ಪ್ರತಿ ಪ್ರಸಂಗದಲ್ಲಿ ಇಂದ್ರನ ಪ್ರಭಾವ ಇರುತ್ತದೆ.

ನಿಶಿ ವಲ್ಗುನಾದಮ್

ರಾತ್ರೆಯಲ್ಲಿ ಮಳೆ ಹಿತವಾದ ನಾದವನ್ನು ಸೂಸುತ್ತದೆ.

ಯಕ್ಷಗಾನ ಪ್ರದರ್ಶನ ರಾತ್ರೆಯಲ್ಲಿ ಹಿತವಾದ ರಾಗಾದಿಗಳಿಂದ ಕೂಡಿರುತ್ತದೆ

ಚಾಪಾಶುಗಾಂಶಮ್

ಕಾಮನಬಿಲ್ಲು ಹಾಗೂ ಗಾಳಿಯ ಪ್ರಭಾವ ಮಳೆಯಲ್ಲಿರುತ್ತದೆ. (ಚಾಪ= ಕಾಮನಬಿಲ್ಲು, ಆಶುಗ=ಗಾಳಿ)

ಬಿಲ್ಲು ಬಾಣಗಳಿಂದ ಕೂಡಿದ

(ಚಾಪ= ಬಿಲ್ಲು, ಆಶುಗ=ಬಾಣ)

ಅನಿಶ

ನಿರಂತರವಾಗಿ

ನಿರಂತರವಾಗಿ

ಕರವಿಪ್ರಯೋಗಮ್

ಸೂರ್ಯಕಿರಣಗಳ ಪ್ರಯೋಗ ಇಲ್ಲದಿರುವಂತಹ (ಕರ=ಕಿರಣ). ಅಥವಾ ಕಂ ಎಂದರೆ ನೀರು ರವಿ ಎಂದರೆ ಸೂರ್ಯ. ಒಮ್ಮೆ ಮಳೆಯ ಪ್ರಯೋಗ ಒಮ್ಮೆ ಸೂರ್ಯನ ಪ್ರಯೋಗ ಇರುವಂತಹ.

ಕರ ಎಂದರೆ ಕೈ. ಕೈಯ ವಿಶಿಷ್ಟ ಪ್ರಯೋಗ ಇರುವಂತಹ

 

ಇಲ್ಲಿ ಹರಣಂ ಎಂಬಲ್ಲಿ ಹರ ಎನ್ನುವ ಪದ, ನಿಶಿ ವಲ್ಗುನಾದಮ್ ಎಂಬಲ್ಲಿ ಶಿವ ಎಂಬ ಪದ, ಅನಿಶಂ ಕರವಿಪ್ರಯೋಗಮ್ ಎನ್ನುವ ಪದ, ಸದೃಶಂ ಭುವಿ ಎಂಬಲ್ಲಿ ಶಂಭು ಎನ್ನುವ ಪದವನ್ನೂ ಕಾಣಬಹುದು.

ಮಂಗಳವಾರ, ಜೂನ್ 3, 2025

पानीयं किम् इच्छति ?

पानीयं किं स्वीकरोति ? भारतदेशे यदा कदापि यस्य कस्यचित् गृहं प्रविशामः तर्हि गृहिणीनां मुखतः सहजतया अयं प्रश्नः निस्सरति । किमपि मास्तु इति अतिथिना कथिते अपि पुनः पुनः पृष्ट्वा यत्किमपि सज्जीकर्तुं पाकगृहं धावन्ति गृहिण्यम् । एवं शक्तिमत्यः गृहिण्यः तु कुर्युः । परन्तु यदि उत्थातुम् एव न शक्यते । स्वनिमित्तमपि पानीयम् अन्येन दातव्यम् इति स्थितिः भवति, तदाऽपि काचित् महिला शय्यातः उत्थाय पानीयं दातुं उत्सुका भवति चेत् तत् विशिष्टमेव । एतादृशीषु विशिष्टासु महिलासु अन्यतमा सुचेताभगिनी ।

मूलतः उत्तरकर्णाटकीया । गृहभाषा मराठी । शिक्षणं कन्नडमाध्यमेन प्राप्तम् ।  संस्कृतसेवाव्रतिनीरूपेण तिपटूरु, हासन, देहली मध्यप्रदेशः इत्यादिप्रदेशेषु कार्यं कृतम् । ततः केरलीयेन पूर्णकालिकेन सह विवाहः । कस्मिंश्चित् सङ्घटने पूर्णकालिकरेण (पूर्णकालिकाः सामर्थ्ये सत्यपि स्वनिमित्तं धनं न सम्पादयन्ति । सङ्घटनस्य सूचनानुगुणं स्वव्ययं निर्वहन्तः जीवनं यापयन्ति ।) कार्यं कुर्याम् इति मनःस्थितिसम्पादनं कठिनम् । परन्तु पूर्णकालिकं परिणयामि इति निश्चयः तु कठिनतरः ।  यतो हि गृहजनाः, बान्धवाः, मित्राणि च तत्र बहुविधापत्तीः दर्शयेयुः । तथापि तत्सर्वं सोढ्वा जीवनं करिष्यामि इति दृढनिर्णयस्तु श्रेष्ठानां महिलानाम् एव सम्भवेत् । 

पूर्णकालिकं परिणीय अमेरिकादेशं प्रति गमनं तत्र संस्कृतकार्यकरणम् इति तु इतोऽपि महाकार्यम् । यदि सम्यक् धनार्जनस्य व्यवस्था वर्तते, तर्हि एव मातृभूमिं त्यक्त्वा विदेशेषु वासार्थं जनाः उद्युक्ताः भवन्ति । सेवा करणीया इत्यस्ति चेत् मम परिचिते प्रदेशे एव भवतु इति मनःस्थितिः बहूनां भवति । परन्तु सेवार्थमेव दूरदेशं गत्वा तत्रापि सुचेताभगिनी महत् कार्यं, जनसम्पर्कं च साधितवती । अधुना अपि विदेशेभ्यः बेङ्गलूरुनगरम् आगन्तारः जनाः सुचेताभगिन्याः दर्शनं वाञ्छन्ति स्म । 

मम कार्यालये सुचेताभगिन्याः पत्या सह परिचयः जातः । सः कार्यवशात् मां गृहम् नीतवान् । कस्यचित् महापणस्य पृष्ठतः लघुगृहं भगिन्याः आसीत् । यद्यपि अहं प्रथमवारं भगिनीं पश्यन् आसं, तथापि सा अत्यन्तं परिचितः इव मया सह सम्भाषणं कृतवती । पानीयं किम् इच्छति इति वार्तालापं कुर्वती पानीयादिकं दत्तवती । गृहमपि मध्ये मध्ये आगच्छतु इति आहूतवती । 

ततः मम कार्यालयस्य समीपे एव तस्याः गृहपरिवर्तनं जातम् । अतः मध्ये मध्ये तस्याः गृहगमनं भवति स्म । भोजनं समाप्य साक्षात् तस्याः गृहं गच्छामि चेद् अपि सा खादितुं किम् इच्छति इति पृच्छति स्म । कदाचित् तस्याः सङ्गणकयन्त्रं समीकर्तुम् अहं गृहं गतः । सः अल्पाहाकालः अहम् अल्पाहारं खादित्वा एव आगतवान् इति उक्तवान् अपि आसम् । तथापि सा कष्टेन किमपि बहु निर्माय दत्तवती आसीत् । 

यद्यपि बहु अस्वस्था, उत्थातुं च न शक्नोति तथापि मम विवाहानन्तरं सपत्नीकं माम् आहूय भोजयित्वा उपायनं च दत्त्वा प्रेषितवती । एतादृशाः सज्जनाः लोके भवन्ति इति मम पत्नी ऐदम्प्राथम्येन दृष्टवती आसीत् । 

सुचेताभगिनी अत्यन्तं स्वाभिमानिनी । यद्यपि उत्थातुम् असमर्था तथापि स्वकार्याणि स्वयमेव निर्वहति स्म । यदि उत्थातुमेव असामर्थ्यं भवति तर्हि एव अन्येषां साहाय्यं स्वीकरोति स्म । यदि रुग्णाः भवन्ति, तर्हि अन्यजनाः आगत्य स्वव्यथां शृणुयुः इति भावः अनेकेषां रोगिणां भवति । शय्यायामेव त्रिचतुरदिनानि केवलानि भवन्ति चेत् मानसिकरूपेण अपि त्रस्ताः भवन्ति । परन्तु सुचेताभगिनी मानसिकरूपेण अत्यन्तं दृढा आसीत् । कस्यापि समीपे रोदनं तु न करोति स्म । कस्मैचित् अपि किमपि कार्यं न वदति स्म । 

अद्य(03.06.2025) सा दिवङ्गता । तस्याः पार्थिवशरीरस्य मुखं पश्यामि चेत् किं पानीयम् इच्छति?  इति पृच्छन्ती इव भासते ।  


ಶುಕ್ರವಾರ, ಮೇ 30, 2025

ಭಾರತೀಯತೆ ಶ್ರೇಷ್ಠ ಎಂಬ ಸೋಗಲಾಡಿತನ

ಭಾರತೀಯ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಭಾರತೀಯರು ಶ್ರೇಷ್ಠ ಸಾಧಕರು ಎಂಬ ಕ್ಲೀಷೆಯನ್ನು ಪ್ರತಿದಿನವೂ ಕೇಳುತ್ತಿರುತ್ತೇವೆ. ಆದರೆ ಹೀಗೆ ಹೇಳುವವರು ಅವರ ಹೃದಯದಿಂದ ಮಾತುಗಳನ್ನು ಭಾರತೀಯತೆಯ ಶ್ರೇಷ್ಠತೆಯನ್ನು ಒಪ್ಪುತ್ತಾರೆಯೇ ಎಂದು ಕೇಳಿದರೆ ಇಲ್ಲ ಎಂದು ಉತ್ತರಿಸಬೇಕಾಗುತ್ತದೆ. ಏಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಕೆಲವೊಂದಿಷ್ಟು ಉದಾಹರಣೆಗಳನ್ನು ನೋಡೋಣ.

ಉದಾಹರಣೆ 1- ಆರ್.ಎಸ್.ಎಸ್ ನ ಒಂದು ಬೈಠಕ್. ಭಾಷಣಮಾಡುತ್ತಿದ್ದವರು ವಯಸ್ಸಿನಿಂದಲೂ, ಅಧ್ಯಯನದಿಂದಲೂ ಅನುಭವದಿಂದಲೂ ಶ್ರೇಷ್ಠರಾದ ಒಬ್ಬ ಪ್ರಸಿದ್ಧ ಪ್ರಚಾರಕರು. ಸಂಘ ಹಾಗೂ ಸ್ವಯಂಸೇವಕ ಹೇಗೆ ಅವಿನಾಭಾವವಾಗಿ ಇರಬೇಕು ಎಂಬ ವಿಷಯವನ್ನು ಪ್ರತಿಪಾದಿಸುತ್ತಿದ್ದರು. ಉದಾಹರಣೆಗಾಗಿ ಅವರು ಕಾವ್ಯದ ಕಡೆ ಹೊರಳಿದರು. ಕಾವ್ಯವನ್ನು ಓದುತ್ತಿರುವಾಗ ಸಹೃದಯ (ವಾಚಕ) ಹಾಗೂ ಕಾವ್ಯದ ಪಾತ್ರದ ನಡುವೆ ಅವಿನಾಭಾವ ಸಂಬಂಧ ಉಂಟಾಗುತ್ತದೆ. ಇದರಿಂದಾಗಿ ಪಾತ್ರದ ಭಾವಗಳನ್ನು ವಾಚಕ ಅನುಭವಿಸುತ್ತಾನೆ. ಎಂದು ಪಾಶ್ಚಾತ್ಯ ಚಿಂತಕರೊಬ್ಬರು (ಅವರು ಹೇಳಿದ ಹೆಸರು ನನಗೆ ಮರೆತು ಹೋಗಿದೆ. ಬಹುಶಃ ಕೀಟ್ಸ್ ಇರಬೇಕು.) ಹೇಳಿದ್ದಾರೆ. ಅವರು ಹೇಳಿದಂತೆ ಸಂಘ ಹಾಗೂ ಸ್ವಯಂಸೇವಕರ ನಡುವೆ ಅವಿನಾಭಾವ ಸಂಬಂಧ ಇರಬೇಕು ಎಂದು ಹೇಳಿದರು.

ಸಂಸ್ಕೃತ ಓದಿದ ನನಗೆ ಇದೇ ವಿಷಯವನ್ನು ಭಟ್ಟನಾಯಕನೂ ಅಭಿನವಗುಪ್ತನೂ ಹೇಳಿದ್ದಾರಲ್ಲ ಎಂದು ಅನಿಸಿತು. ಅವರ ಉದಾಹರಣೆಯನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಉದಾಹರಣೆ ಏಕೆ ಕೊಟ್ಟರು. ಇಷ್ಟೆಲ್ಲ ಓದಿಕೊಂಡ ಇವರಿಗೆ ಅಭಿನವಗುಪ್ತನ ಬಗೆಗೆ ಗೊತ್ತಿಲ್ಲವೇ ಎಂಬ ಅನುಮಾನಗಳು ಕಾಡಲಾರಂಭಿಸಿದವು. ಭಾಷಣ ಮುಗಿದ ತಕ್ಷಣ ಅವರ ಬಳಿಗೆ ಹೋಗಿ ನೀವು ಹೇಳಿದ್ದು ಭಟ್ಟನಾಯಕ, ಹಾಗೂ ಅಭಿನವಗುಪ್ತನ ಸಾಧಾರಣೀಕರಣವಲ್ಲವೇ ಎಂದು ಕೇಳಿದೆ. ಅವರು ಹೌದು. ಸಾಧಾರಣೀಕರಣದ ಬಗ್ಗೆಯೇ ನಾನು ಹೇಳಿದ್ದು, ಅಭಿನವಗುಪ್ತನ ಬಗೆಗೆ ಮೈಸೂರಿನ ವಿದ್ವಾಂಸರೊಬ್ಬರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಸುಮಾರು 15-20 ಪುಟಗಳ ಲೇಖನ. ಅದನ್ನು ಓದು ಎಂದು ತಿಳಿಸಿದರು. ಹಾಗಾದರೆ ಇಂಗ್ಲಿಷ್ ಚಿಂತಕರ ಹೆಸರನ್ನು ಯಾಕೆ ಹೇಳಿದಿರಿ ಎಂಬ ಪ್ರಶ್ನೆಗೆ ಇಲ್ಲಿ ಇರುವ ಕೇಳುಗರಿಗೆಲ್ಲ ಸರಳವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ಹಾಗೆ ಹೇಳಿದೆ ಎಂದು ಹೇಳಿದರು. ಅವರು ಬೇರೆಡೆಗೆ ಹೋಗುವ ಅವಸರದಲ್ಲಿದ್ದುದರಿಂದ ಅವರಲ್ಲಿ ಮತ್ತಷ್ಟು ಮಾತನಾಡುವ ಅವಕಾಶವಾಗಲಿಲ್ಲ.

ನನಗೆ ಆ ಕ್ಷಣದಲ್ಲಿ ಅಚ್ಚರಿಯಾಯಿತು. ಅಭಿನವಗುಪ್ತನ ಬಗೆಗೆ ಅವರಿಗೆ ನನಗಿಂತಲೂ ಹೆಚ್ಚು ಗೊತ್ತಿದೆ. ಆದರೂ ಆತನನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಹೆಸರನ್ನು ಹೇಳಿದರು. ಏಕೆಂದು ಕೇಳಿದ್ದಕ್ಕೆ ಎಲ್ಲರಿಗೂ ಅರ್ಥವಾಗಲಿ ಎಂಬ ಹಾರಿಕೆಯ ಉತ್ತರ ನೀಡಿದರು. ಎಲ್ಲರಿಗೂ ಅರ್ಥವಾಗಲಿ ಎಂಬುವುದು ಹಾರಿಕೆಯ ಉತ್ತರವೇ. ಏಕೆಂದರೆ ಕೇಳುಗರಾಗಿ ಇದ್ದವರು ಆರ್.ಎಸ್.ಎಸ್ ನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕರ್ತರಾಗಿರುವವರು. ಭಜರಂಗದಳ, ಭಾ.ಜ.ಪ, ವಿಶ್ವಹಿಂದೂಪರಿಷತ್, ಗೋರಕ್ಷಣಾ ಪ್ರಕಲ್ಪ, ವನವಾಸಿಕಲ್ಯಾಣಪರಿಷತ್ ಮುಂತಾದ ಸಂಘಟನೆಗಳಲ್ಲಿ ದುಡಿಯುವವರಿಗೆ ಉದಾಹರಣೆಯಾಗಿ ಶೇಕ್ಸ್-ಪಿಯರನ ವಾಕ್ಯವನ್ನು ಹೇಳಿದರೂ ಕಾಲಿದಾಸನ ವಾಕ್ಯವನ್ನು ಹೇಳಿದರೂ ಸಮಾನ ಪರಿಣಾಮ ಉಂಟು ಮಾಡುತ್ತದೆ. ಏಕೆಂದರೆ ಸಾಮಾನ್ಯವಾಗಿ ಎರಡನ್ನೂ ಅವರು ಓದಿರುವುದಿಲ್ಲ  (ಓದಿರುವುದಿಲ್ಲ ಎಂಬುವುದು ಆಕ್ಷೇಪವಲ್ಲ. ವಾಸ್ತವ. ಅವರ ಕ್ಷೇತ್ರದಲ್ಲಿ ಅವರು ಮಾಡುವ ಕೆಲಸ ಗೌರವಾರ್ಹವೇ). ಆದರೆ ಆ ಕ್ಷಣಕ್ಕೆ ಅವರಿಗೆ ಇಂಗ್ಲಿಷ್ ಉದಾಹರಣೆ ಹೇಳಿದರೆ ಜನರ ಮನಸ್ಸನ್ನು ಸುಲಭವಾಗಿ ತಲುಪಬಹುದು ಎಂದು ಅನಿಸಿದ್ದು ಆಶ್ಚರ್ಯ. ಯಾರೋ ಕಮ್ಯುನಿಷ್ಟ್ ಭಾಷಣಕಾರನಿಗೆ ಹೀಗನಿಸಿದ್ದರೆ ವಿಶೇಷವಲ್ಲ. ಆದರೆ ಹೀಗನ್ನಿಸಿದ್ದು. ಭಾರತ, ಭಾರತೀಯರು, ಭಾರತೀಯತೆ ಎಂದು ನಲವತ್ತಕ್ಕೂ ಹೆಚ್ಚು ವರ್ಷ ಶ್ರಮಿಸಿದ ಪ್ರಚಾರಕರಿಗೆ.


ಉದಾಹರಣೆ 2- ಶುಭಸಮಾರಂಭಗಳ ಸೀಸನ್. ಒಂದು ಶನಿವಾರ ನಮ್ಮ ನೆಂಟರೊಬ್ಬರ ರಿಸೆಪ್ಶನ್ ಇತ್ತು. ಅದರ ಮರುದಿನ ಮತ್ತೊಬ್ಬರ ಮನೆಯಲ್ಲಿ ಸತ್ಯನಾರಾಯಣಪೂಜೆ. ಎರಡೂ ಕಾರ್ಯಕ್ರಮಗಳಿಗೂ ನಾನು ಮನೆಯ ಸದಸ್ಯರೊಂದಿಗೆ ಭಾಗಿಯಾಗಿದ್ದೆ. ನನ್ನ ಶರೀರ ದಪ್ಪ ಇರುವುದರಿಂದ ನನಗೆ ಪ್ಯಾಂಟ್ ಧರಿಸುವುದಕ್ಕಿಂತ ಪಂಚೆ ಉಡುವುದೇ ಅನುಕೂಲ. ಅಲ್ಲದೇ ವಿದ್ಯಾರ್ಥಿದೆಸೆಯಿಂದಲೂ ಪಂಚೆ ಉಟ್ಟು ಅಭ್ಯಾಸ ಆಗಿರುವುದರಿಂದ ಅದೇನೂ ಕಷ್ಟ ಎನಿಸುವುದಿಲ್ಲ. ಆದ್ದರಿಂದ ದೂರಪ್ರಯಾಣದಂತಹ ಸಂದರ್ಭಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಪಂಚೆ ಉಟ್ಟುಕೊಳ್ಳುತ್ತೇನೆ. ಭಾರತೀಯ ಸಂಸ್ಕೃತಿ ಪಂಚೆ ಆದ್ದರಿಂದ ಅದನ್ನು ಉಡಬೇಕು ಎಂಬ ಮನಃಸ್ಥಿತಿ ನನ್ನದಲ್ಲ. ನನಗೆ ಇಷ್ಟ ಹಾಗೂ ಅನುಕೂಲ ಆದ್ದರಿಂದ ಪಂಚೆ ಉಡುತ್ತೇನೆ ಎಂದು ಹೇಳುವವನು ನಾನು. 

ಹೀಗೆ ಮದುವೆಯ ರಿಸೆಪ್ಶನ್ ಕಾರ್ಯಕ್ರಮಕ್ಕೆ ಪಂಚೆ ಉಟ್ಟುಕೊಂಡು ಹೋಗಿದ್ದೆ. ನಮ್ಮ ಕುಟುಂಬದ ಹಿರಿಯರೊಬ್ಬರು ತುಂಬಾ ಆತ್ಮೀಯರು ರಿಸೆಪ್ಶನ್ ಗೆ ಬಂದಿದ್ದರು. ಅವರು ನೀನೇನು ಹೀಗೆ ಪಂಚೆ ಉಟ್ಟುಕೊಂಡು ಬಂದಿದ್ದೀಯ. ಪ್ಯಾಂಟ್ ಹಾಕಿಕೊಂಡು ಬರುವುದಲ್ಲವಾ ಎಂದು ಕೇಳಿದರು. ನಾನು ಏನೂ ಹೇಳಲಿಲ್ಲ. ಮರುದಿನ ಸತ್ಯನಾರಾಯಣ ಪೂಜೆಗೆ ನನ್ನ ವಯಸ್ಸಿನ ಒಂದಿಬ್ಬರು ಯುವಕರು ಚಡ್ಡಿ ಹಾಕಿಕೊಂಡು ಬಂದಿದ್ದರು. ಇವರಿಗೆ ಏನೂ ಹೇಳುವುದಿಲ್ಲವೇ ? ಎಂದು ನಾನು ಅವರನ್ನು ಕೇಳಿದೆ. ಅವರು ಉತ್ತರಿಸಲ್ಲಿಲ್ಲ. ಚಡ್ಡಿ ಹಾಕಿದವರನ್ನು ಪ್ರಶ್ನಿಸಲೂ ಇಲ್ಲ. ಚಡ್ಡಿ ಹಾಕಿಕೊಂಡು ಸತ್ಯನಾರಾಯಣಪೂಜೆಗೆ ಬಂದವರು ಕೂಡಾ ಹಿರಿಯರ ಆತ್ಮೀಯರೇ.

ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋಗುವುದು ಅನುಚಿತ ಎಂಬುವುದನ್ನು ಒಪ್ಪಿಕೊಂಡು ಚಿಂತಿಸೋಣ. ಸತ್ಯನಾರಾಯಣ ಪೂಜೆಗೆ ಚಡ್ಡಿ ಹಾಕಿಕೊಂಡು ಬರುವುದೂ ಖಂಡಿತವಾಗಿಯೂ ಅನುಚಿತವೇ. ಆದರೆ ಅದನ್ನು ಹಿಂದೂ ಸಂಸ್ಕೃತಿಯ ಬಗೆಗೆ ಗೌರವವಿದೆ ಎಂದು ಹೇಳುವವರು ಖಂಡಿಸುವುದಿಲ್ಲ. ಅವರೇ ಅಂಗೀಕರಿಸುತ್ತಾರೆ. ಆದರೆ ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋದರೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಉದಾಹರಣೆ 3 - ನಾನು ಯಕ್ಷಗಾನಪ್ರಿಯ. ಸ್ವಲ್ಪ ಸಂಸ್ಕೃತ ಓದಿರುವುದರಿಂದಲೋ ಏನೋ ಯಕ್ಷಗಾನವೆಂದರೆ ನನಗೆ ಇಷ್ಟ. ನಮ್ಮ ಮನೆಯಿಂದ ಸುಮಾರು ಒಂದುವರೆ ಗಂಟೆ ಪ್ರಯಾಣ ಮಾಡಿದರೆ ಕಟೀಲು ತಲುಪುತ್ತೇವೆ. ಕಟೀಲಿನಲ್ಲಿ ಯಕ್ಷಗಾನಗಳು ಆಗುತ್ತಿರುತ್ತವೆ. ನವಂಬರ್ ತಿಂಗಳಲ್ಲಿ ಹನುಮಗಿರಿ ಮೇಳದ ಹೊಸ ಪೌರಾಣಿಕ ಪ್ರಸಂಗದ ಪ್ರದರ್ಶನವಿತ್ತು. ಫಸ್ಟ್ ಡೇ ಫಸ್ಟ್ ಶೋ ಸಿನೆಮಾ ನೋಡಲು ಯಾವ ರೀತಿಯಿಂದ ಆಸಕ್ತ ಜನರು ಓಡುತ್ತಾರೋ ಅದೇ ರೀತಿಯಾಗಿ ನಾನೂ ಯಕ್ಷಗಾನ ನೋಡಲು ಹೋದೆ. ಇದನ್ನು ಕೇಳಿದ ಮಂದಿ (ಭಾರತೀಯ ಸಂಸ್ಕೃತಿ ಶ್ರೇಷ್ಠ ಎಂಬುವುದರ ಕುರಿತು ಯಾವಾಗಲೂ ಭಾಷಣ ಮಾಡುವವರು) ಇವನೊಬ್ಬ ಯಕ್ಷಗಾನದ ಹುಚ್ಚ, ಮಧ್ಯರಾತ್ರೆ ನಿದ್ದೆ ಬಿಟ್ಟು ಐವತ್ತು ಕಿಲೋಮೀಟರ್ ಹೋಗ್ತಾನೆ ಎಂದೆಲ್ಲ ಹೇಳುತ್ತಾರೆ.

ಶುದ್ಧ ಪರಂಪರೆಯ ದೃಷ್ಟಿಯಿಂದ ಹೇಳುವುದಾದರೆ ಯಕ್ಷಗಾನಕ್ಕೆ ಹೋಗುವುದು ತಪ್ಪೇ. ಕಾವ್ಯಾಲಾಪಾಂಶ್ಚ ವರ್ಜಯೇತ್ ಮುಂತಾದ ಮಾತುಗಳು ಇಂತಹ ಮನೋರಂಜನೆಗೆ ನಿಷೇಧ ಹೇರುತ್ತವೆ. ಆದರೆ ಅದು ಭಾರತೀಯವಾದರೆ ಮಾತ್ರ ನಿಷೇಧ. ಸಿನೆಮಾ ನೋಡುವುದಕ್ಕೆ ಗಂಟೆಗಟ್ಟಲೆ ದೂರ ಹೋಗಿ ಸಾವಿರಗಟ್ಟಲೆ ಖರ್ಚು ಮಾಡಿದರೆ ಅದು ಶ್ರೇಷ್ಠತೆಯ ಪ್ರತೀಕ. ಏಕೆಂದರೆ ಸಿನೆಮಾ ನೋಡುವವರನ್ನು ಅದೇ ಜನ ಹೊಗಳುವುದನ್ನು ಕಂಡಿದ್ದೇನೆ. ಅವನಿಗೆ ಇಂಗ್ಲಿಷ್ ಸಿನೆಮಾ ಅಂದರೆ ಅಷ್ಟು ಆಸಕ್ತಿ ಎಂಬುವುದು ಅವರ ವಾಕ್ಯ 

ಈ ಉದಾಹರಣೆಗಳಿಂದ ತಿಳಿದು ಬರುವ ಸತ್ಯವೇನೆಂದರೆ ಭಾರತೀಯತೆ ಶ್ರೇಷ್ಠ ಎಂಬುವುದು ಕೆಲವರಿಗೆ ಒಂದು ಚಟ. ಅವರು ತಮ್ಮ ಮನಸ್ಸಿನಿಂದ ಅದನ್ನು ಹೇಳುವುದಿಲ್ಲ. ಭಾರತೀಯತೆಯನ್ನು ಪ್ರತಿಪಾದಿಸುವವರಲ್ಲಿ ಅನೇಕರ ಹೃದಯ ವಿದೇಶೀ ವಸ್ತುಗಳಿಗೆ ಮಾರುಹೋಗಿರುತ್ತದೆ. ವಿದೇಶಿ ವಿಚಾರಗಳಿಗೆ ಮಾರುಹೋಗುವುದು  ತಪ್ಪು ಎಂಬುವುದು ನನ್ನ ವಾದವಲ್ಲ. ಸೋಗಲಾಡಿತನದಿಂದ ತೋರ್ಪಡಿಕೆಗಷ್ಟೇ ಭಾರತೀಯತೆ ಶ್ರೇಷ್ಠ ಎಂಬ ಪ್ರತಿಪಾದನೆಯ ಬಗೆಗಷ್ಟೇ ಆಕ್ಷೇಪ. 

 

IPL तः पठितुं शक्यम् ।

 IPL क्रीडा अद्यत्वे समग्रदेशस्य आकर्षणबिन्दुत्वेन स्थिता वर्तते । युवजनाः ऐ.पि.एल् कारणतः अलसाः जायमानाः सन्ति इति केषाञ्चन मतम् । परन्तु अनेकेषाम् इयं क्रीडा मनस्तोषं जनयित्वा नूतनोर्जाप्राप्तौ अपि सहकारिणी विद्यते एव ।

                    दुःखार्तानां श्रमार्तानां शोकार्तानां तपस्विनाम् ।
                    विश्रान्तिजननं काले नाट्यमेतद्भविष्यति ॥

इति वाक्यं नाट्यविषये उक्तम् । अद्यत्वे क्रिकेट् क्रीडायाम् अपि अस्य श्लोकस्य अन्वयः शक्यः । ऐ.पि.एल् क्रीडाः तु सायङ्काले 7.30 वादनतः प्रवर्तन्ते । श्रमिकाः कार्यं समाप्य गृहे उपविश्य आनन्देन क्रीडाम् आस्वादयितुं शक्नुवन्ति ।

अस्माकं ग्रामे कश्चित् लोकयाननिर्वाहकः वर्तते । प्रातः सार्धसप्तवादनतः सायं सार्धसप्तवादनं यावत् तस्य यानं मार्गे चलति । ततः गृहं गत्वा सः प्रतिदिनं क्रीडाम् आस्वादयति । ग्रामीणभागे यानं चलति इति कारणतः यात्रिषु बहवः तत्परिचिताः एव । सः पूर्वदिनस्य क्रीडायाः विमर्शम् यात्रिभिः सह कुर्वन् आनन्दम् अनुभवति । स च विमर्शः उत्कृष्टः भवति । तादृशमेव विमर्शं कुर्वन्तः अनेके जनाः प्रतिदिनं यूट्यूब् मध्ये अपि दृश्यन्ते । क्रीडाविमर्शस्य तु सहस्रशः दर्शकाः, शतशः प्रतिस्पन्ददातारश्च भवन्ति । यदि एतस्य याननिर्वाहकस्य वचनानि अपि यूट्यूब्-मध्ये भवन्ति तर्हि तस्यापि सहस्रशः अभिमानिनः निश्चयेन भवेयुः इत्यत्र तु सन्देहः नास्ति । आदिनं कृतस्य श्रमस्य परिहारः क्रीडादर्शनेन निवारितः इति तृप्तिः तस्य वचनेषु स्पष्टं भासते ।  

संस्कृतज्ञैः अस्माभिः अपि ऐ.पि.एल् क्रीडातः पठनीयं किञ्चिदस्ति । सा तु क्रीडा, अस्माकं तु भिन्नं क्षेत्रम् इति न चिन्तनीयम् । क्रीडायाः आरम्भे कः ताडनगणः (Batting) कः क्षेपणगणः(Bowling) इति निर्णयः नाणकक्षेपणद्वारा (Toss) भवति । क्रीडायाः अनन्तरं पुरस्कारवितरणं च भवति । तयोः द्वयोः कार्यक्रमयोः निर्वहणं सुचारुतया प्रवर्तते ।

तत्रापि पुरस्कारप्रदानकार्यक्रमस्तु अनुसरणयोग्यः । तत्र भ्रमलेशोऽपि न भवति । देशस्य प्रसिद्धाः क्रीडाकार्यक्रमनिरूपकाः हर्षभोग्ले, मुरळिकार्तिकः, रविशास्त्री, आकाशचोप्रा इत्यादिषु अन्यतमः कार्यक्रमं निर्वहति । यद्यपि एते प्रसिद्धाः तथापि कार्यक्रमे स्वकीयं किमपि न योजयन्ति । संस्कृतक्षेत्रे तु एकैकस्य विदुषः क्रमः एकैकः भवति पिण्डे पिण्डे मतिर्भिन्ना तुण्डे तुण्डे सरस्वती इति वाक्यानुसारं स्वसिद्धान्तप्रतिपादनेन अव्यवस्था दृश्यते । शैलीभेदः प्रतिजनं भवेदेव । परन्तु क्रमभङ्गः भवति चेत् दोषाय । उदाहरणार्थं आरम्भे मङ्गलपद्यं गातव्यम्, उत स्वागतभाषणं करणीयम् इति निर्वाहकस्य भ्रमः भवति ।  


ऐ.पि.एल्.क्रीडायामपि एतादृशः भ्रमः तत्र कार्यं कुर्वतां मध्ये स्याद् । परन्तु सः भ्रमः न प्रकटीभवति । कार्यक्रमस्यादौ सर्वे मञ्चे स्थिताः भवन्ति । निर्वाहकः प्रायोजकेभ्यः धन्यावादसमर्पणं करोति । तदनन्तरं अतिथीनां नाम्नः पदस्य(Designation) च परिचयः भवति । कः पुरस्कारः केन दातव्यः इति पूर्वमेव निश्चितं भवति, सः पुरस्कारहस्तः एव मञ्चे स्थितः भवति । ततः एकैकशः नामोद्घोषणं यदा भवति, तदा क्रीडकः पुरस्कारं स्वीकृत्य गच्छति । अतिवेगताडकः(super striker), अत्यधिकक्रीडनाङ्कवान् (Fantasy king), अत्यधिकषड्धावनाङ्कताटकः,(Maximum sixes) अत्यधिकचत्वारिधावनाङ्कताडकः (maximum fours), अत्यधिकधावनाङ्करहितकन्दुकक्षेपकः(Dot ball) इति पञ्च पुरस्काराः वितीर्यन्ते । तदन्तरं विजेतृगणनायकस्य लघुभाषणं, क्रीडायां सर्वश्रेष्ठक्रीडकस्य च भाषणं भवति । पञ्चभिः निमेषैः सर्वोऽपि कार्यक्रमः समाप्यते ।    

अयमेव पुरस्कारप्रदानकार्यक्रमः यदि कस्मिंश्चित् संस्कृतविश्विद्यालये चाल्यते तर्हि कीदृशी स्थितिः भवेत् इति कल्पनां कर्तुं शक्नुयाम । पञ्चानां पुरस्काराणां वितरणं, तदर्थं पञ्चानाम् अतिथीनाम् आह्वानं बहूनां भाषणम् इत्यादिना अन्यूनं पञ्चानां घण्टानां कार्यक्रमः निश्चयेन भवेत् ।

विश्वविद्यालयीयाः कार्यक्रमाः भिन्नप्रकारकाः, क्रीडाकार्यक्रमाः भिन्नप्रकारकाः । अतः द्वयोः तोलनं यदि क्रियेत तर्हि सा हीनोपमा भवति इति तु सत्यमेव । परन्तु यस्मात् कार्यक्रमनिर्वहणक्रमात् सर्वोऽपि त्रस्तः वर्तते, तादृशे सभाकार्यक्रमे गुणवत्परिवर्तनविषये चिन्तनं तु विधेयमेव खलु तदर्थं कस्यचित् उदाहरणम् अत्र दर्शितम् । दर्शिते उदाहरणे अपि दोषाः भवेयुः नाम, तथापि गुणांशास्तु निश्चयेन स्वीकर्तुं योग्याः।  


कार्यक्रमस्य दर्शनार्थम् अन्तर्जालतन्तुः अत्र विद्यते । https://www.iplt20.com/video/62740 

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...