आसायं सश्रमं कार्यं कृत्वा यानेन स्वं गृहम्।
यान्त्त्यो युवतयो भान्ति रवितप्ता लता इव॥
ಸಾಯಂಕಾಲದ ತನಕವೂ ಶ್ರಮಪಟ್ಟು ಕೆಲಸ ಮಾಡಿ ಗಾಡಿಯಲ್ಲಿ ತಮ್ಮ ಮನೆಗೆ ಹೋಗುತ್ತಿರುವ ಯುವತಿಯರು ಸೂರ್ಯನ ಬಿಸಿಲಿನಿಂದ ಬಾಡಿದ ಬಳ್ಳಿಗಳಂತೆ ಕಾಣುತ್ತಾರೆ.
श्रमस्वेदाम्बुभिर्नष्टे लावण्येsपि पुनर्भृशम्।
लावण्यं भासतेsङ्गेषु सुन्दरीणां मनोहरम्॥
ಆಯಾಸದಿಂದ ಬರುವ ಬೆವರಿನಿಂದ ಲಾವಣ್ಯವು(ಉಪ್ಪು) ಹರಿದುಹೋದರೂ, ಕೂಡಾ ಸುಂದರಿಯರ ಅಂಗದಲ್ಲಿ ಲಾವಣ್ಯವು(ಸೌಂದರ್ಯ) ಕಾಣುತ್ತದೆ.
वायुना चलतः केशान् बन्द्धुं क्लिश्नन्ति बालिकाः।
यूनां हृदि दृढं बद्धा विना क्लेषं भवन्ति ताः॥
ಗಾಳಿಯಿಂದ ಅತ್ತಲಿಂದಿತ್ತ ಚಲಿಸುವ ಕೂದಲುಗಳನ್ನು ಕಟ್ಟುವಲ್ಲಿ ಯುವತಿಯರು ತುಂಬಾ ಕಷ್ಟವನ್ನು ಅನುಭವಿಸುತ್ತಾರೆ. ಆದರೆ ಕಷ್ಟವೇ ಇಲ್ಲದೇ ಯುವಕರ ಹೃದಯದಲ್ಲಿ ತಾವೇ ಬಂದಿಯಾಗುತ್ತಾರೆ.
यानान्दोलनकालेषु स्तम्भं गृह्णन्ति ता दृढम्।
पश्चात् त्यजन्ति तं, नैव युवचित्तग्रहं कृतम्॥
ಗಾಡಿಯು ಓಲಾಡುವಾಗ ಕಂಬವನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೆ. ಓಲಾಡುವುದು ನಿಂತಾಗ ಕಂಬವನ್ನು ಬಿಡುತ್ತಾರೆ. ಆದರೆ ಯುವಕರ ಮನಸ್ಸನ್ನು ಒಮ್ಮೆ ಹಿಡಿದುಕೊಂಡರೆ ಮತ್ತೆ ಬಿಡುವುದಿಲ್ಲ.
श्रान्तिं संगोप्य हासं ता आस्ये बिभ्रति कृत्रिमम्।
हठाद्याननिरोधे तु सा श्रान्तिर्व्यज्यते मुखे ॥
ಆಯಾಸವನ್ನು ಬಚ್ಚಿಟ್ಟುಕೊಂಡು ಕೃತ್ರಿಮವಾಗಿ ನಗುತ್ತಿರುತ್ತಾರೆ. ಗಾಡಿಯನ್ನು ಹಠಾತ್ತಾಗಿ ನಿಲ್ಲಿಸಿದಾಗ ಆ ಆಯಾಸವು ಪ್ರಕಟಗೊಳ್ಳುತ್ತದೆ.
गीतं सुमधुरं श्रोतुं श्रोत्रे यन्त्रं निधीयते।
माधुर्यं युवचित्तेषु तद्दृष्ट्वैव हि जायते॥
ಮಧುರವಾದ ಹಾಡುಗಳನ್ನು ಕೇಳಲು ಕಿವಿಗೆ ಯಂತ್ರವನ್ನು ಸಿಕ್ಕಿಸುತ್ತಾರೆ. ಮಧುರಭಾವ ಯುವತಿಯರಲ್ಲಿ ಹುಟ್ಟುವುದಕ್ಕೆ ಮುಂಚೆಯೇ ಅದನ್ನು ನೋಡಿದ ಯುವಕರ ಮನಸ್ಸಿನಲ್ಲಿ ಮಧುರಭಾವವು ಹುಟ್ಟುತ್ತದೆ.
शीघ्रं यातेति तद्वाक्यं श्रुत्वा निर्वाहकस्य ताः।
राजहंसगतिं त्यक्त्वा यानाद्धावन्ति वाजिवत् ॥
ಬೇಗ ನಡೆಯಿರಿ ಎಂಬ ನಿರ್ವಾಹಕನ ಮಾತನ್ನು ಕೇಳಿದ ಅವರು ರಾಜಹಂಸದಂತಿದ್ದ ಮಂದವಾದ ಗತಿಯನ್ನು ಬಿಟ್ಟು ಕುದುರೆಯಂತೆ ಓಡುತ್ತಾರೆ.
अवतीर्णास्वधस्तासु यानभारो न हीयते।
यतस्ता युवचेतांसि भारयुक्तानि कुर्वते॥
ಅವರು ಗಾಡಿಯಿಂದ ಇಳಿದುಹೋದರೂ ಗಾಡಿಯ ಭಾರ ಕಡಿಮೆಯಾಗುವುದಿಲ್ಲ. ಏಕೆಂದರೆ ಅವರು ಗಾಡಿಯಲ್ಲಿನ ಯುವಕರ ಮನಸ್ಸನ್ನು ಭಾರವನ್ನಾಗಿಸಿ ಹೋಗುತ್ತಾರೆ.

ಸಾಯಂಕಾಲೇ ವನಾಂತೇ.......
ಪ್ರತ್ಯುತ್ತರಅಳಿಸಿಇತಿ ತ್ಯಕ್ತ್ವಾ ಸಾಯಂಕಾಲೇ ಯಾನಾಂತೇ ಕುಸುಮಿತ.....
ಅಂತ ಮಾಡ್ಬೇಕ್ ಇನ್ನು.... 😉 ಅಲ್ಲಿ ಮೊದಲನೇ ಶ್ಲೋಕದಲ್ಲಿ ರವಿ ಅಂದ್ರೆ ಸೂರ್ಯ ಅಂತ ಅರ್ಥ ಅಲಾ.....